Advertisement

ಲಕ್ಷ ಕಂಪೆನಿ ನೋಂದಣಿ ರದ್ದು ಕಾಳಧನಿಕರ ಬಗ್ಗೆ ಅಂಜಿಕೆಯಿಲ್ಲ

03:45 AM Jul 02, 2017 | Team Udayavani |

ಹೊಸದಿಲ್ಲಿ: ” ಒಂದು ಲಕ್ಷ ಕಂಪೆನಿಗಳ ನೋಂದಣಿ ರದ್ದು ಮಾಡಿದ್ದೇವೆ. 37 ಸಾವಿರ ನಕಲಿ ಕಂಪೆನಿಗಳ ಗುರುತು ಪತ್ತೆ ಮಾಡಿದ್ದೇವೆ. ಅವುಗಳ ವಿರುದ್ಧ ಕಠಿನ ಕ್ರಮಕ್ಕೆ ಹಿಂಜರಿಯುವ ಪ್ರಶ್ನೆಯೇ ಇಲ್ಲ. ಅದರಿಂದ ಉಂಟಾಗುವ ರಾಜಕೀಯ ಪರಿಣಾಮ ಏನೇ ಇರಲಿ, ಎದುರಿಸುತ್ತೇನೆ’

Advertisement

– ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಹೊಸದಿಲ್ಲಿಯಲ್ಲಿ ಶನಿವಾರ ಹೇಳಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನಗೊಂಡ ಮೊದಲ ದಿನವೇ ಅಖೀಲ ಭಾರತ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಸ್ಥಾಪನಾ ದಿನ ಪ್ರಯುಕ್ತ ಆಯೋ ಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೊಸ ತೆರಿಗೆ ವ್ಯವಸ್ಥೆ ಜಾರಿ ಮಾಡುವಲ್ಲಿ ಲೆಕ್ಕಪತ್ರ ಪರಿಶೋಧಕರು (ಚಾರ್ಟರ್ಡ್‌ ಅಕೌಂಟೆಂಟ್‌) ಮಹತ್ವದ ಭಾಗೀದಾರಿಕೆ ವಹಿಸಿಕೊಳ್ಳಬೇಕು ಎಂದರು ಮೋದಿ. “ಜನರು ಆರೋಗ್ಯವಂತರಾಗಿ ಇರಬೇಕೆಂದೇ ವೈದ್ಯರು ಬಯಸುತ್ತಾರೆ. ತಮಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರಲಿ ಎಂದು ವೈದ್ಯರು ಬಯಸುವುದಿಲ್ಲ. ಅದೇ ರೀತಿ ಲೆಕ್ಕಪತ್ರ ಪರಿಶೋಧಕರೂ ದೇಶದ ಅರ್ಥ ವ್ಯವಸ್ಥೆಯ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು’ ಎಂದರು ನರೇಂದ್ರ ಮೋದಿ. 

ಕಾಳಧನಿಕರ ವಿರುದ್ಧ ಕ್ರಮ: ಕಪ್ಪು ಹಣ ಹೊಂದಿರು ವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಅಂಶವನ್ನು ಪ್ರಧಾನಿ ಮತ್ತೂಮ್ಮೆ ಪ್ರಸ್ತಾಪ ಮಾಡಿದರು. “ಎರಡು ವರ್ಷಗಳಿಂದ ಈಚೆಗೆ ಸ್ವಿಜರ್ಲೆಂಡ್‌ ಕಾಳಧನಿಕರ ವಿರುದ್ಧದ ಮಾಹಿತಿ ನೀಡಲಾರಂಭಿಸುತ್ತಿರುವುದರಿಂದ ಅವರಿಗೆ ಕಷ್ಟವಾ ಗಿದೆ. ಹೀಗಾಗಿಯೇ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಠೇವಣಿ ಇರಿಸುವವರ ಸಂಖ್ಯೆ ಕಡಿಮೆಯಾಗಿದೆ’ ಎಂದರು.

ಹಿಂಜರಿಕೆ ಇಲ್ಲ: ಅಂಥವರ ವಿರುದ್ಧ ಯಾವುದೇ ರೀತಿಯಲ್ಲಿ ದಾಕ್ಷಿಣ್ಯ ತೋರದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅದರಿಂದ ಯಾವುದೇ ರೀತಿಯ ಪ್ರತಿಕೂಲ ರಾಜಕೀಯ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧವೆಂದರು ಪ್ರಧಾನಿ. “ಯಾವುದೇ ಒಂದು ದೇಶದಲ್ಲಿ ಕೆಲವೇ ಕೆಲವು ಮಂದಿ ಲೂಟಿಗೆ ಇಳಿದರೆ, ಆ ದೇಶ ಅಭಿವೃದ್ಧಿ ಸಾಧಿಸಲಾರದು. ಅವರು ದೇಶ ಅಭಿವೃದ್ಧಿ ಸಾಧಿಸುವುದನ್ನು ಬಯಸ ಲಾರರು. ಬಡವರಿಂದ ಲೂಟಿ ಮಾಡಿದ್ದನ್ನು ಮತ್ತೆ ಅವರಿಗೇ ಕೊಡುವಂತಾಗುತ್ತದೆ. ಅಂಥವರ ವಿರುದ್ಧ ಕಠಿನ ಕ್ರಮವನ್ನೇ ಕೈಗೊಳ್ಳಲಾಗುತ್ತದೆ’ ಎಂದರು. 

Advertisement

ಲೆಕ್ಕಪತ್ರ ಪರಿಶೋಧನಾ ಸಂಸ್ಥೆಗಳ ಪೈಕಿ ಜನರು ನಾಲ್ಕು ದೊಡ್ಡ ಸಂಸ್ಥೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲಿ ಭಾರತೀಯ ಸಂಸ್ಥೆಗಳೇ ಇಲ್ಲಿ 2022ರ ವೇಳೆಗೆ ಎಂಟು ದೊಡ್ಡ ಲೆಕ್ಕಪತ್ರ ಪರಿಶೋಧನಾ ಸಂಸ್ಥೆಗಳು ಆಗಲಿ. ಆ ಪೈಕಿ ನಾಲ್ಕು ಭಾರತದ್ದೇ ಆಗಿರಬೇಕು ಎಂದು ಪ್ರಧಾನಿ ಆಶಿಸಿದರು. 

ನನಗಿಂತ ನಿಮ್ಮ ಸಹಿಗೇ ಹೆಚ್ಚು ಬೆಲೆ
“ನಿಮ್ಮ ಸಹಿ ಪ್ರಧಾನಿ ಸಹಿಗಿಂತ ಮಹತ್ವದ್ದು’ ಎಂದು ಹೇಳಿದ ಪ್ರಧಾನಿ, ದೇಶದ ಅರ್ಥ ವ್ಯವಸ್ಥೆ ಕಾಪಿಡುವಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ಗಳ ಪಾತ್ರ ಮಹತ್ವದ್ದೆಂದರು. ದೇಶದ ಜನರು ನಿಮ್ಮ ಮೇಲೆ ಇರಿಸಿದ ನಂಬಿಕೆ ಕಳೆದುಕೊಳ್ಳುವಂತಾಗಬಾ ರದು. ಲೆಕ್ಕಪತ್ರ ಪರಿಶೋಧಕರ ಸಹಿಯಿಂದ ದೇಶದ ಬಡವರನ್ನು ಕಾಪಾಡಲೂ ಸಾಧ್ಯ ಎಂದರು ಮೋದಿ. ತೆರಿಗೆ ಹಿಂದಿರುಗಿಸುವಿಕೆ ಎಂದರೆ ಜನರಿಗೆ ಅಂತಿಮವಾಗಿ ಲಾಭ ತಂದುಕೊಡುತ್ತದೆ. ಅದು ನಮ್ಮ ಸೈನಿಕರಿಗೆ, ಹಿರಿಯ ನಾಗರಿಕರಿಗೆ, ಬಡವರಿಗೆ ನೆರವಾಗುತ್ತದೆ. ಕಪ್ಪುಹಣದ ಹಾವಳಿ ಕಕ್ಷಿದಾರರಿಗೆ ವಿವರಿಸಿ, ಅದನ್ನು ತಡೆಗಟ್ಟಲು ನೆರವು ನೀಡಿ ಎಂದು ಲೆಕ್ಕಪತ್ರ ಪರಿಶೋಧಕರಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next