Advertisement
ತಾಲೂಕಿನ ಮಾಲಂಗಿ ಗ್ರಾಮದಲ್ಲಿ ಐಟಿಸಿ ಕಂಪನಿ ಮತ್ತು ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕೆರೆಗಳ ಪುನಶ್ಚೇತನ ಕಾಮಗಾರಿಗಳ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇವೇಗೌಡರು ಹಿರಿಯರು ಸಾಕಷ್ಟು ರೈತರ ಪರ ಕೆಲಸ ನಿರ್ವಹಿಸಿದ್ದಾರೆ. ಅವರನ್ನು ಹೊರತುಪಡಿಸಿದರೆ ಮಂಡ್ಯದ ಪುಟ್ಟರಾಜು ಸೇರಿಂತೆ ಇತರರು ಯಾರು ತಂಬಾಕು ಹೋರಾಟಕ್ಕೆ ಕಿವಿಗೊಡುತ್ತಿಲ್ಲ.
Related Articles
Advertisement
ಐಟಿಸಿ ಲೀಪ್ ಮ್ಯಾನೇಜರ್ ಎಚ್.ಜಿ.ರವೀಶ್ ಮಾತನಾಡಿ, ಕೈಗಾರಿಕರಣ, ನಗರೀಕರಣದಿಂದ ಮನುಷ್ಯ ಪ್ರಕೃತಿಯ ನೈಸರ್ಗಿಕ ಸಂಪತ್ತುಗಳನ್ನು ಹಾಳುಮಾಡುತ್ತಿದ್ದಾನೆ. ಸತತವಾಗಿ ಬೆಳೆ ಬೆಳೆಯುವ ರೈತರು ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಚಿಂತನೆಮಾಡುತ್ತಿಲ್ಲ ಎಂದರು.
ಈಗಾಗಲೇ ಮುಂದಿನ ಪೀಳಿಗೆ ಉಪಯೋಗಿಸಬೇಕಾಗಿದ್ದ ನೈಸರ್ಗಿಕ ಸಂಪತ್ತನ್ನು ನಾವೆ ಬಳಸಿಬಿಟ್ಟಿದ್ದೇವೆ. ಆದುದ್ದರಿಂದ ಕೆರೆಗಳ ಪುನಶ್ಚೇತನ ಮೂಲಕ ಗೋಡನ್ನು ರೈತರ ಜಮೀನಿಗೆ ನೀಡುವುದು, ಕೆರೆಗಳಲ್ಲಿ ನೀರು ನಿಲ್ಲುವಂತೆ ಮಾಡಿ ಅಂತರ್ಜಲ ಅಭಿವೃದ್ಧಿ ಪಡಿಸುವುದನ್ನು ಐಟಿಸಿ ಕಂಪನಿ ಮಾಡುತ್ತಿದ್ದು, ಮಣ್ಣಿನ ಸವಕಳಿ ತಪ್ಪಿಸುವುದು, ಫಲವತ್ತೆ ಹೆಚ್ಚಿಸುವುದು, ಬದುಗಳ ನಿರ್ಮಾಣ, ಸೇರಿದಂತೆ ಅನೇಕ ರೈತರ ಅಭಿವೃದ್ಧಿ ಕೆಲಗಳನ್ನು ಮಾಡುತ್ತಿದ್ದು.
ಇದಕ್ಕಾಗಿ 10 ಕೋಟಿಗೂ ಅಧಿಕ ಖರ್ಚು ಮಾಡಿ 167 ಕೆರೆಗಳ ಅಭಿವೃದ್ಧಿಪಡಿಸಲಾಗಿದೆ. ಈ ಮಳೆಗಾಲದಲ್ಲಿ ಎಲ್ಲಾ ಕೆರೆಗಳು ನೀರು ತುಂಬಲಾರಂಭಿಸಿದೆ ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದ ಎಂದು ತಿಳಿಸಿದರು. ವಕೀಲ ಬಿ.ವಿ.ಜವರೇಗೌಡ ಮಾತನಾಡಿ, ರೈತರಿಗೆ ಬ್ಯಾರನ್ ಶಿಫ್ಟಿಂಗ್ ಮಾಡಲು ಅಡ್ಡಿ ಉಂಟಾಗುತ್ತಿದ್ದು ಇದನ್ನು ನಿವಾರಿಸಬೇಕು ಮತ್ತು ರೈತರಿಗೆ ನೈಸರ್ಗಿಕವಾಗಿ ಉತ್ತಮ ಬೆಳೆಯಾದ ಹೆಚ್ಚಿಗೆ ಉತ್ಪಾದನೆಯಾಗುವ ತಂಬಾಕಿನ ಮೇಲಿನ ದಂಡ ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಮಾಲಂಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಡಾ.ಶೋಭಾರಾಣಿ ಮಾತನಾಡಿ, ಹಾಡಿಗಳಿಗೆ ಸೋಲಾರ್ ಲೈಟ್ ನೀಡುವ ಬಗ್ಗೆ ಸಂಸದರು ಸಹಕಾರ ನೀಡುವಂತೆ ಮನವಿ ಮಾಡಿದರು. ಅಲ್ಲದೆ ಕೇಂದ್ರ ಯೋಜನೆಗಳಿಂದ ಗ್ರಾಪಂಗೆ ಆಗಿರುವ ಪ್ರಯೋಜನಗಳ ಬಗ್ಗೆ ಮತ್ತು ನರೇಗಾ ಯೋಜನೆಯ ವರದಿ ನೀಡಿದರು. ವಿಕಲಚೇತನ ಮಕ್ಕಳಿಗೆ ಸಂಸದ ಪ್ರತಾಪ್‌ಸಿಂಹ ಮಾಲಂಗಿ ಗ್ರಾಪಂ ವತಿಯಿಂದ ನೀಡಲಾದ ಪುಸ್ತಕ ಸಾಮಗ್ರಿಗಳನ್ನು ನೀಡಿದರು.
ತಾಪಂ ಅಧ್ಯಕ್ಷ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷೆ ಮಂಗಳಗೌರಮ್ಮ, ಉಪಾಧ್ಯಕ್ಷ ಗಣೇಶ್, ಐಟಿಸಿ ಕಂಪನಿಯ ಮುಖ್ಯಸ್ಥರಾದ ವಿ.ಆರ್.ದೀಕ್ಷೀತ್, ಅನಿನಾಶ್‌ದ್ವಾರಪು, ಅಸಿಸ್ಟೆಂಟ್ ಮ್ಯಾನೇಜರ್ ಪೂರ್ಣೇಶ್, ಮೈರಾಡಾ ಸಂಸ್ಥೆಯ ವಿಲಿಯಂ ಸಿಸೋಜಾ, ಬಿಜೆಪಿ ಮುಖಂಡ ಆರ್.ಟಿ.ಸತೀಶ್, ಮುಖಂಡ ಚಂದ್ರು, ಗ್ರಾಪಂ ಸದಸ್ಯ ಪ್ರಹಲ್ಲಾದ್ ಸೇರಿದಂತೆ ಮತ್ತಿತರರು ಹಾಜರಿದ್ದರು.