Advertisement

ಕುಷ್ಟಗಿ: ಮನೆ ಬೀಗ ಮುರಿದು ಹಾಡು ಹಗಲೇ ಕಳ್ಳತನ

11:26 AM Jan 13, 2022 | Team Udayavani |

ಕುಷ್ಟಗಿ: ಪಟ್ಟಣದ ಹಳೆ ಬಜಾರದಲ್ಲಿ‌ ಹಾಡು ಹಗಲೇ ಮನೆಗೆ ಬೀಗ ಹಾಕಿದ ಅರ್ಧ ಗಂಟೆಯೊಳಗೆ ಬೀಗ ಮುರಿದು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಹಳೆ ಬಜಾರದಲ್ಲಿ ರವಿಪ್ರಕಾಶ ಅವರು ಬುಧವಾರ ಕಾರ್ಯನಿಮಿತ್ತ ಗದಗ ಹೋಗಿದ್ದರು. ಅದೇ ವೇಳೆ ಅವರ ಪತ್ನಿ ಬ್ಯಾಂಕಿಗೆ ಹೋಗಿದ್ದರು. ಮನೆಯಲ್ಲಿದ್ದ ಅವರ ತಾಯಿ ಬೀಗರ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆಗಾಗಿ ಮನೆಗೆ ಬಾಗಿಲು ಬೀಗ ಹಾಕಿ ಹೋಗಿದ್ದರು. ಹೋಗಿ ಅರ್ಧ ಗಂಟೆಯಲ್ಲಿ ಅನ್ನ ಪ್ರಸಾದಕ್ಕೆ ಉಪ್ಪಿನಕಾಯಿ ಬೇಕಾದಾಗ ನಮ್ಮ ಮನೆಯಲ್ಲಿದೆ ಎಂದು ತರಲು ಮನೆಯತ್ತ ದೌಡಾಯಿಸುವಾಗ ಅಪರಚಿತ ಯುವಕ ಎದುರಿಗೆ ಬಂದಿದ್ದಾನೆ. ಕೂಡಲೇ ಯುವಕನನ್ನು ವಿಚಾರಿಸಿದಾಗ ಯಾರೊದೋ ಮನೆಯ ವಿಳಾಸದ ನೆಪದಿಂದ ಅಲ್ಲಿಂದ ನಿರ್ಗಮಿಸಿದ್ದ. ರವಿಪ್ರಕಾಶ ಕೆಳಗಡೆ ಅವರ ತಾಯಿ ಮನೆಗೆ ಬಂದಾಗ, ಮನೆಯ ಬೀಗ ಅಲ್ಮೆರಾ ಮುರಿದಿರುವುದು ಕಂಡು ಗಾಬರಿಯಾಗಿದ್ದಾರೆ. ಮನೆಯಲ್ಲಿದ್ದ 50 ಸಾವಿರ ರೂ. ನಗದು, ಎರಡೂವರೆ ತೊಲ ಬಂಗಾರದ ಅಭರಣ ಕಳುವಾಗಿರುವುದು ಗೊತ್ತಾಗಿದೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಕ್ರೈಂ ಪಿಎಸೈ ಮಾನಪ್ಪ ವಾಲ್ಮೀಕಿ ಆಗಮಿಸಿ ಪರಿಶೀಲನೆ ನಡೆಸಿ, ಹೊಸಪೇಟೆಯಿಂದ ಶ್ವಾನದಳ‌ ಕರೆಯಿಸಿ ಪರಿಶೀಲಿಸಲಾಗಿದ್ದು ಕಳ್ಳನ ಸುಳಿವು ಸಿಕ್ಕಿಲ್ಲ.

ಪೊಲೀಸರು, ಕಳ್ಳನ ಪತ್ತೆಗೆ ತನಿಖೆ ತೀವ್ರಗೊಳಿಸಿದ್ದು, ನಗರದಲ್ಲಿ ಹಾಡು ಹಗಲೇ ಬೀಗ ಹಾಕಿರುವ ಮನೆ ಹೊಕ್ಕು ಕಳ್ಳತನ ಪ್ರಕರಣ ಸಾರ್ವಜನಿಕ ವಲಯದಲ್ಲಿ ಆತಂಕ‌ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next