Advertisement
ಅಕ್ಕಿಯ ಅಲಭ್ಯತೆಯಿಂದ ವಿತರಣೆ ಸಾಧ್ಯವಾಗಿರಲಿಲ್ಲ. ಈ ವರ್ಷ ಆಹಾರ ನಿಗಮದಿಂದ ಅನುಮತಿಯೇ ಸಿಕ್ಕಿಲ್ಲ ಹಾಗೂ ಸ್ಥಳೀಯವಾಗಿ ಕುಚ್ಚಲಕ್ಕಿಗೆ ಪೂರಕವಾದ ಭತ್ತ ನೀಡಲು ಯಾವೊಬ್ಬ ರೈತರು ನೋಂದಣಿ ಮಾಡಿಕೊಂಡಿಲ್ಲ. ಕೇಂದ್ರ ಆಹಾರ ನಿಗಮದ ಪಟ್ಟಿಯಲ್ಲಿ ಸ್ಥಳೀಯ ಕುಚ್ಚಲಕ್ಕಿ ಈ ವರ್ಷ ಸೇರದೇ ಇರುವುದರಿಂದ ಖರೀದಿ/ವಿತರಣೆ ಪ್ರಕ್ರಿಯೆಯೇ ಸಾಧ್ಯವಿಲ್ಲ.
Related Articles
ಭತ್ತವನ್ನು ಬೆಂಬಲ ಬೆಲೆಯಡಿ ಸರಕಾರಕ್ಕೆ ನೀಡಲು ಉಭಯ ಜಿಲ್ಲೆಯ ಯಾವೊಬ್ಬ ರೈತರು ರಾಜ್ಯ ಆಹಾರ ನಿಗಮದಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಕಳೆದ ವರ್ಷ ಒಬ್ಬರು ಮಾತ್ರ ಭತ್ತ ನೀಡಿದ್ದರು. ಸರಕಾರದ ಕಠಿನ ನಿಯಮ ಹಾಗೂ ನಿರ್ದಿಷ್ಟ ಸಮಯದಲ್ಲಿ ಹಣ ಪಾವತಿ ಆಗದೇ ಇರುವುದರಿಂದ ರೈತರು ಸರಕಾರಕ್ಕೆ ಭತ್ತ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಮಿಲ್‌ಗಳಿಗೆ ಭತ್ತ ನೀಡಿದರೆ ಹಣ ತತ್‌ಕ್ಷಣ ಸಿಗುತ್ತದೆ ಮತ್ತು ಪ್ರತಿ ವರ್ಷ ಭತ್ತ ಖರೀದಿಸಲಿದ್ದಾರೆ ಎಂಬ ಭರವಸೆಯೂ ಇರಲಿದೆ. ಆದರೆ, ಸರಕಾರ ಪ್ರತಿ ವರ್ಷ ಖರೀದಿ ಮಾಡಲಿದೆ ಎಂಬ ಯಾವ ಖಾತ್ರಿಯೂ ಇಲ್ಲ. ಅಲ್ಲದೆ, ಕೊಯ್ಲು ಆದ ತತ್‌ಕ್ಷಣ ಭತ್ತವನ್ನು ಸರಕಾರ ಪಡೆಯುವುದಿಲ್ಲ. ಹೀಗಾಗಿ ಮೂರ್‍ನಾಲ್ಕು ತಿಂಗಳು ಭತ್ತ ಶೇಖರಿಸಿಡಲು ನಮ್ಮಲ್ಲಿ ಯಾವ ವ್ಯವಸ್ಥೆಯೂ ಇಲ್ಲ ಎಂಬುದು ರೈತರ ವಾದ.
Advertisement
ಕುಚ್ಚಲಕ್ಕಿಗೆ ಬೇಡಿಕೆಅಂಗಡಿಗಳಲ್ಲಿ ಸ್ಥಳೀಯ ಕುಚ್ಚಲಕ್ಕಿಗೆ ಉತ್ತಮ ಬೇಡಿಕೆಯಿದೆ. ಉತ್ಪಾದನೆಯು ಕಡಿಮೆ ಇರುವುದರಿಂದ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ. ಕುಚ್ಚಲಕ್ಕಿ ಎಂಒ4, ಜಯ ಮೊದಲಾದ ತಳಿಯ ಅಕ್ಕಿ ಚಿಲ್ಲರೆ ದರ ಕೆ.ಜಿ.ಗೆ 54 ರೂ. ಇದ್ದರೆ, ಸಂಪೂರ್ಣ ಕಜೆ ಅಕ್ಕಿ ಕೆ.ಜಿ.ಗೆ 58 ರೂ. ಇದೆ. ಹೋಲ್‌ಸೇಲ್ ದರಲ್ಲಿ ತೆಗೆದುಕೊಳ್ಳುವಾಗ (25/30 ಕೆ.ಜಿ. ಬ್ಯಾಗ್) ಪ್ರತಿ ಕೆ.ಜಿ.ಗೆ 2 ರೂ. ಕಡಿಮೆಯಾಗುತ್ತದೆ. ಈ ವರ್ಷ ಸ್ಥಳೀಯ ಕುಚ್ಚಲಕ್ಕಿಗೆ ಬೇಡಿಕೆ ಚೆನ್ನಾಗಿದೆ ಎಂದು ಚಿಲ್ಲರೆ ಮಳಿಗೆಯ ಮಾಲಕರೊಬ್ಬರು ಮಾಹಿತಿ ನೀಡಿದರು. ಸ್ಥಳೀಯ ಕುಚ್ಚಲಕ್ಕಿ ಸಂಬಂಧಿಸಿದಂತೆ ಪ್ರಸ್ತಾವನೆ ಯನ್ನು ರಾಜ್ಯಕ್ಕೆ ಕಳುಹಿಸಿದ್ದೇವೆ. ಈವರೆಗೆ ಯಾವುದೇ ಉತ್ತರ ಬಂದಿಲ್ಲ.
-ರವೀಂದ್ರ, ಆಹಾರ ಇಲಾಖೆ ಉಪನಿರ್ದೇಶಕ