Advertisement
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ ಮಂಗಳೂರು – ಬೆಂಗಳೂರು ರೈಲು ಮಾರ್ಗ ಸಾಗುವ ಶಿರಾಡಿ ಘಾಟ್ ಪ್ರದೇಶದಲ್ಲಿ ಭೂಕುಸಿತ ಉಂಟಾಗುತ್ತಿರುವುದರಿಂದ ಗುರುವಾರದಿಂದಲೇ ಅನ್ವಯವಾಗುವಂತೆ ಆಗಸ್ಟ್ 11ರವರೆಗೆ ಈ ಮಾರ್ಗದಲ್ಲಿ ಸಾಗುವ ಈ ಕೆಳಗಿನ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ .
- ಆಗಸ್ಟ್ 08, 09 ಮತ್ತು 10ರಂದು ಸಂಚರಿಸುವ ಬೆಂಗಳೂರು – ಕಣ್ಣೂರು/ಕಾರವಾರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16511/16513.
- ಆಗಸ್ಟ್ 08, 09 ಮತ್ತು 10ರಂದು ಸಂಚರಿಸುವ ಕಣ್ಣೂರು/ಕಾರವಾರ – ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸಂಖ್ಯೆ 16518/16524.
- ಆಗಸ್ಟ್ 08, ಮತ್ತು 10ರಂದು ಸಂಚರಿಸುವ ಕಾರವಾರ – ಯಶವಂತಪುರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16516.
- ಆಗಸ್ಟ್ 08, ಮತ್ತು 11ರಂದು ಸಂಚರಿಸುವ ಯಶವಂತಪುರ – ಮಂಗಳೂರು ಎಕ್ಸ್ ಪ್ರೆಸ್ ರೈಲು ಸಂಖ್ಯೆ 16575.
- ಆಗಸ್ಟ್ 08ರಂದು ಸಂಚರಿಸುವ ಯಶವಂತಪುರ – ಮಂಗಳೂರು ಎಕ್ಸ್ ಪ್ರೆಸ್ ರೈಲು ಸಂಖ್ಯೆ 16585.
- ಆಗಸ್ಟ್ 09ರಂದು ಸಂಚರಿಸುವ ಮಂಗಳೂರು – ಯಶವಂತಪುರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16586.
- ಆಗಸ್ಟ್ 09ರಂದು ಸಂಚರಿಸುವ ಮಂಗಳೂರು – ಯಶವಂತಪುರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16576.
- ಆಗಸ್ಟ್ 09ರಂದು ಸಂಚರಿಸುವ ಯಶವಂತಪುರ – ಕಾರವಾರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16515.
ಸಿರಿಬಾಗಿಲು ಮತ್ತು ಸುಬ್ರಹ್ಮಣ್ಯ ರೈಲು ಮಾರ್ಗದ ನಡುವೆ ಹಳಿಗಳ ಮೆಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲೇ, ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ಮಾರ್ಗದ ನಡುವೆ ಗುರುವಾರ ಬೆಳಗ್ಗೆ ಸುಮಾರು ಐದು ಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗಿರುವುದರಿಂದ ಭಾರೀ ಪ್ರಮಾಣದಲ್ಲಿ ಮಣ್ಣು ಹಳಿಗಳ ಮೇಲೆ ಬಿದ್ದಿದೆ. ಮಣ್ಣು ಮಾತ್ರವಲ್ಲದೆ ಬಂಡೆ ಕಲ್ಲುಗಳು, ಮರಗಳೂ ಸಹ ಹಳಿಗಳ ಮೇಲೆ ಬಿದ್ದು ರೈಲು ಮಾರ್ಗ ಸಂಪೂರ್ಣವಾಗಿ ಮುಚ್ಚುಗಡೆಯಾಗಿದೆ. ರೈಲ್ವೇ ಸಿಬ್ಬಂದಿಗಳು, ಗುತ್ತಿಗೆ ಕಾರ್ಮಿಕರು ನಿರಂತರವಾಗಿ ತೆರವು ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಡಕುಮೇರಿಯಲ್ಲಿ ಬುಧವಾರದಂದು ದಿನವೊಂದರಲ್ಲೇ ಗರಿಷ್ಠ 316 ಮಿಲಿಮೀಟರ್ ಮಳೆಯಾಗಿದೆ. ಈ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭಗೊಳ್ಳುವ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ವಿಭಾಗೀಯ ಕಾರ್ಯಾಚರಣೆ ಅಭಿಯಂತರರು ಮತ್ತು ಹಿರಿಯ ಪಿ.ಆರ್.ಒ. ಆಗಿರುವ ಸತೀಶ್ ಅವರು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.
ಪುಣೆ ವಿಭಾಗದ ಪಾಚಾಪುರ್ ಮತ್ತು ಗೋಕಾಕ್ ರೈಲು ಮಾರ್ಗದಲ್ಲಿ ಹಾಗೂ ಇನ್ನಿತರ ಭಾಗಗಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹಾಗೂ ಹಳಿಗಳ ಮೇಲೆ ಮಳೆ ನೀರು ನುಗ್ಗಿರುವುದರಿಂದ ಈ ಕೆಳಗಿನ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
Related Articles
Advertisement
ಪ್ರಯಾಣ ಮೊಟಕುಗೊಳಿಸಿರುವ ರೈಲುಗಳ ವಿವರ:1. ಬುಧವಾರದಂದು ಬೆಂಗಳೂರು ಕೆಂದ್ರ ರೈಲು ನಿಲ್ದಾಣದಿಂದ ಮುಂಬಯಿಗೆ ಹೊರಟಿದ್ದ ಕಡೆ ಹೊರಟಿರುವ ರೈಲು ಸಂಖ್ಯೆ 11302 ಬೆಂಗಳೂರು – ಛತ್ರಪತಿ ಶಿವಾಜಿ ಟರ್ಮಿನಸ್ ಎಕ್ಸ್ ಪ್ರೆಸ್ ರೈಲನ್ನು ಸೋಲಾಪುರದಲ್ಲಿ ತಡೆಹಿಡಿಯಲಾಗಿದೆ. 2. ಗುರುವಾರದಂದು ಹೊರಡಲಿರುವ ಛತ್ರಪತಿ ಶಿವಾಜಿ ಟರ್ಮಿನಸ್ – ಕೆ.ಎಸ್.ಆರ್. ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸೋಲಾಪುರದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ರದ್ದುಗೊಂಡಿರುವ ರೈಲುಗಳ ವಿವರ: 1. ಯಶವಂತಪುರ – ಜೈಪುರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 82653 ರೈಲು ಸಂಚಾರ ಆಗಸ್ಟ್ 8ಕ್ಕೆ ರದ್ದಾಗಿದೆ. 2.ಜೈಪುರ – ಯಶವಂತಪುರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 82654ರ ಸಂಚಾರ ಆಗಸ್ಟ್ 10ರಂದು ರದ್ದಾಗಿರುತ್ತದೆ. 3. ವಿಜಯಪುರ – ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಮುಂಬಯಿ ರೈಲು ಸಂಖ್ಯೆ 51030ರ ಸಂಚಾರ ಆಗಸ್ಟ್ 09ರಂದು ರದ್ದಾಗಿರುತ್ತದೆ. 4. ಹುಬ್ಬಳ್ಳಿ – ಲೋಕಮಾನ್ಯ ತಿಲಕ್ ಟರ್ಮಿನಸ್ ರೈಲು ಸಂಖ್ಯೆ 17317ರ ಸಂಚಾರ ಆಗಸ್ಟ್ 11ರಂದು ರದ್ದುಗೊಂಡಿರುತ್ತದೆ. 5. ಲೋಕಮಾನ್ಯ ತಿಲಕ್ ಟರ್ಮಿನಲ್ – ಹುಬ್ಬಳ್ಳಿ ರೈಲು ಕ್ರಮಾಂಕ 17318ರ ಪ್ರಯಾಣ ಆಗಸ್ಟ್ 9 ರಿಂದ ಆಗಸ್ಟ್ 12ರವರೆಗೆ ರದ್ದಾಗಿರುತ್ತದೆ. 6. ಓಖಾ – ಟ್ಯುಟಿಕೊರಿನ್ ಎಕ್ಸ್ ಪ್ರೆಸ್ ರೈಲು ಕ್ರಮಾಂಕ 19567ರ ಪ್ರಯಾಣ ಆಗಸ್ಟ್ 11ರಂದು ರದ್ದಾಗಿರುತ್ತದೆ. 7. ಬಾರ್ಮೆರ್ – ಯಶವಂತಪುರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 14806ರ ಪ್ರಯಾಣ ಆಗಸ್ಟ್ 09ರಂದು ರದ್ದಾಗಿರುತ್ತದೆ. 8. ಯಶವಂತಪುರ – ಬಾರ್ಮೆರ್ ಎಕ್ಸ್ ಪ್ರೆಸ್ ರೈಲು ಸಂಖ್ಯೆ 14805ರ ಪ್ರಯಾಣ ಆಗಸ್ಟ್ 12ರಂದು ರದ್ದಾಗಿರುತ್ತದೆ. 9. ರೈಲು ಸಂಖ್ಯೆ 12780 ಹಝರತ್ ನಿಝಾಮುದ್ದೀನ್ – ವಾಸ್ಕೋ ಡಾ ಗಾಮಾ ರೈಲಿಗೆ ಸಂಪರ್ಕ ಕಲ್ಪಿಸುವ ಹಝರತ್ ನಿಝಾಮುದ್ದೀನ್ – ಹುಬ್ಬಳ್ಳಿ ಸ್ಲಿಪ್ ಕೋಚ್ ಆಗಸ್ಟ್ 10ರಂದು ರದ್ದಾಗಿರುತ್ತದೆ.