ದಿನಕ್ಕೊಂದೆರಡು ಬೆಳ್ಳುಳ್ಳಿ ಎಸಳು ಸೇವನೆ ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು. ಇದರಿಂದ ಕೆಲವೊಂದು ಕಾಯಿಲೆಗಳನ್ನು ದೂರವಿಡಬಹುದು. ಮುಖ್ಯವಾಗಿ ಹೃದಯದ ಆರೋಗ್ಯವನ್ನು ಕಾಪಾಡಬಹುದು. ಚಳಿಗಾಲದಲ್ಲಿ ನಾವು ಸಾಮಾನ್ಯವಾಗಿ ಕರಿದ ತಿಂಡಿಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಇದು ಮೈ ಬೊಜ್ಜು ಬೆಳೆಯಲು ಕಾರಣವಾಗುತ್ತದೆ.
ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನು ನಿಯಂತ್ರಿಸಲು ಇರುವ ಸುಲಭ ದಾರಿಯೆಂದರೆ ದಿನಾ ಬೆಳಗ್ಗೆ ಎದ್ದು 2 ಎಸಳು ಬೆಳ್ಳುಳ್ಳಿಯನ್ನು ಹುರಿದು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು. ಹೀಗೆ ಬೆಳ್ಳುಳ್ಳಿ ಸೇವಿಸುವುದರಿಂದ ಮೈ ಬೊಜ್ಜು ಕಡಿಮೆಯಾಗುತ್ತದೆ ಮಾತ್ರವಲ್ಲ ಹಲವು ಆರೋಗ್ಯ ಸಮಸ್ಯೆಗಳನ್ನೂ ದೂರವಿಡುತ್ತದೆ.
ಚಳಿಗಾಲದಲ್ಲಿ ಹೆಚ್ಚಾಗಿ ಕಾಡುವ ಶೀತ, ಕೆಮ್ಮು ಸಮಸ್ಯೆಗೆ ಇದು ಪರಿಹಾರ. ಆದರೆ ಇದನ್ನು ಬಳಸುವ ವಿಧಾನ ಮಾತ್ರ ಬೇರೆ. ಕೆಮ್ಮು, ಶೀತದ ಬಾಧೆ ಇದ್ದರೆ ಬೆಳ್ಳುಳ್ಳಿ ಸುಟ್ಟು ಜಜ್ಜಿ ರಸ ತೆಗೆದು ಜೇನಿನ ಜತೆ ಸೇರಿಸಿ ಬೆಳಗ್ಗೆ ಹಾಗೂ ಮಲಗುವ ಮುನ್ನ ಸೇವಿಸಿ. ಇದರಿಂದ ಅತಿ ಶೀಘ್ರದಲ್ಲಿ ಗುಣಮುಖರಾಗುವಿರಿ.
ಇದನ್ನೂ ಓದಿ:1971ರ ಭಾರತ, ಪಾಕ್ ಯುದ್ಧ- ಬಾಂಗ್ಲಾದೇಶ ಉದಯ; ಏನಿದು ವಿಜಯ್ ದಿವಸ್ ಸಂಭ್ರಮ
ನಿತ್ಯವೂ ಹುರಿದ ಬೆಳ್ಳುಳ್ಳಿ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಜತೆಗೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸಲು, ಮಲಬದ್ಧತೆ ಹೋಗಲಾಡಿಸಲು ಸಹಕಾರಿ. ಇದು ಅಧಿಕ ರಕ್ತದೊತ್ತಡವನ್ನೂ ನಿಯಂತ್ರಣದಲ್ಲಿರಿಸುತ್ತದೆ. ಬೆಳ್ಳುಳ್ಳಿ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಹುರಿದ
ಬೆಳ್ಳುಳ್ಳಿಯೊಂದಿಗೆ ಜೇನು ಸೇರಿಸಿ ಸೇವಿಸಿದರೆ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡಬಹುದು. ಜೀರ್ಣಕ್ರಿಯೆಗೂ ಇದು ಸಹಕಾರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುವುದು. ಗ್ಯಾಸ್ಟ್ರಿಕ್, ಮಲಬದ್ಧತೆಯನ್ನೂ ನಿವಾರಿಸುತ್ತದೆ.