Advertisement

ಉಜ್ಜಯಿನಿಯಲ್ಲಿ ಮಣ್ಣಿನ ಹಣತೆಗಳನ್ನು ಬೆಳಗಿಸಿ ಗಿನ್ನೆಸ್ ದಾಖಲೆ

11:19 PM Feb 18, 2023 | Team Udayavani |

ಉಜ್ಜಯಿನಿ: 2023ರ ಮಹಾಶಿವರಾತ್ರಿ ಸಂದರ್ಭದಲ್ಲಿ ಉಜ್ಜಯಿನಿಯಲ್ಲಿ 21 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಮಧ್ಯಪ್ರದೇಶ ಶನಿವಾರ ಗಿನ್ನೆಸ್ ದಾಖಲೆ ನಿರ್ಮಿಸಲಾಗಿದೆ.

Advertisement

ಈ ವರ್ಷ ಉಜ್ಜಯಿನಿಯಲ್ಲಿ ಮಹಾಶಿವರಾತ್ರಿಯಂದು ‘ಶಿವಜ್ಯೋತಿ ಅರ್ಪಣಂ-2023’ ಆಯೋಜಿಸಲಾಗಿತ್ತು. ಕಳೆದ ವರ್ಷ ಮಹಾಶಿವರಾತ್ರಿಯಂದು ಉಜ್ಜಯಿನಿಯಲ್ಲಿ 11,71,078 ದೀಪಗಳನ್ನು ಬೆಳಗಿಸಲಾಗಿತ್ತು.

ವರದಿಗಳ ಪ್ರಕಾರ, ದಾಖಲೆಯನ್ನು ಸಾಧಿಸಲು ಸುಮಾರು 22,000 ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು. ಈ ಹಿಂದೆ, “ಅಯೋಧ್ಯೆ ದೀಪೋತ್ಸವ 2022” ದೀಪಾವಳಿಯಂದು ಗರಿಷ್ಠ 15.76 ಲಕ್ಷ ದೀಪಗಳನ್ನು ಬೆಳಗಿಸುವ ದಾಖಲೆಯನ್ನು ಹೊಂದಿತ್ತು. ಮಂಗಳಕರ ಸಂದರ್ಭದಲ್ಲಿ, ಉಜ್ಜಯಿನಿಯು “ಶಿವಜ್ಯೋತಿ ಅರ್ಪಣಂ 2023” ನಲ್ಲಿ ಅತ್ಯಾಕರ್ಷಕ ಲೇಸರ್ ಶೋಗೆ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಪಟಾಕಿಗಳನ್ನೂ ಸಿಡಿಸಲಾಯಿತು ಮತ್ತು ಶಿವನಿಗೆ ಭಕ್ತಿಗೀತೆಗಳನ್ನು ನುಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next