Advertisement

ದಾರ್ಶನಿಕರ ಬದುಕು ಆದರ್ಶನೀಯ

07:54 AM Jan 23, 2019 | |

ಹರಪನಹಳ್ಳಿ; ಸರ್ಕಾರದ ವತಿಯಿಂದ ಆಚರಿಸುತ್ತಿರುವ ದಾರ್ಶನಿಕರ ಜಯಂತಿಗಳಲ್ಲಿ ನಿರೀಕ್ಷಿಸಿದಷ್ಟು ಸಭಿಕರು ಆಗಮಿಸುತ್ತಿಲ್ಲ. ಬೆರಳೆಣಿಕೆಯಷ್ಟು ಸಭಿಕರನಿಟ್ಟುಕೊಂಡು ಜಯಂತಿ ಆಚರಿಸುತ್ತಿರುವುದು ಮಹಾನ್‌ ದಾರ್ಶನಿಕರಿಗೆ ಮಾಡುವ ಅಪಮಾನ ಎಂದು ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್‌ ವಿಷಾದಿಸಿದರು.

Advertisement

ಪಟ್ಟಣದ ತಾಪಂ ಸಾರ್ಮಥ್ಯಸೌಧಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಸಿದ್ದರಾಮೇಶ್ವರ ಹಾಗೂ ಮಹಾಯೋಗಿ ವೇಮನ ಮತ್ತು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಹಶೀಲ್ದಾರ್‌ ಡಾ.ನಾಗವೇಣಿ ಮಾತನಾಡಿ, ಮಹನೀಯರನ್ನು ಜಾತಿ ಅಧಾರದಲ್ಲಿ ನೋಡಬಾರದು. ಅವರ ಆದರ್ಶ ಬದುಕು ನಮಗೆ ಪ್ರೇರಣೆಯಾಗಬೇಕಿದೆ. ಒಂದೇ ಜಾತಿ, ಅದು ಮಾನವ ಕುಲ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಜಾತಿ ಸಂಕೋಲೆಗಳನ್ನು ಮೀರಿ ಸಮಾಜದ ಸುಧಾರಣೆಗೆ ಶ್ರಮಿಸಿದ ದಾರ್ಶನಿಕರ ಬದುಕು ಅದರ್ಶನೀಯ ಎಂದರು.

ಕರ್ನಾಟಕ ವಿವಿ ಸಹಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರು ಉಪನ್ಯಾಸ ನೀಡಿ ಮಾತನಾಡಿ, ಸಮಾಜದ ಸುಧಾರಣೆಗೆ ಶ್ರಮಿಸಿದ ಎಲ್ಲಾ ದಾರ್ಶನಿಕರ ತತ್ವ ಒಂದೇ ಆಗಿದೆ. ಅದು ಸಮಾಜದ ಪರಿವರ್ತನೆ. ಆದರೆ ದಾರ್ಶನಿಕರು ನಡೆದ ಮಾರ್ಗಗಳು ಮಾತ್ರ ಹಲವಾರು. ಸಾಧು, ಸಂತರು, ಕವಿಗಳು, ದಾರ್ಶನಿಕರು, ಯೋಗಿಗಳು ಕೇವಲ ಅಂದಿನ ವರ್ತಮಾನವನ್ನು ಇಟ್ಟಿಕೊಂಡು ಬದಲಾವಣೆ ಬಯಸಲಿಲ್ಲ. ಇಂದಿಗೂ ಅವರು ಹೇಳಿರುವ ತತ್ವಗಳು ಅನ್ವಯವಾಗುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್‌ ಮಾತನಾಡಿದರು. ಜಿಪಂ ಸದಸ್ಯ ಸಿದ್ದಪ್ಪ, ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಎಲ್‌.ಮಂಜ್ಯಾನಾಯ್ಕ, ತಾಪಂ ಸದಸ್ಯರಾದ ಕೆಂಚನಗೌಡ, ನಾಗರಾಜ್‌, ತಾಲೂಕು ಭೋವಿ ಸಮಾಜದ ಅಧ್ಯಕ್ಷ ಚಟ್ನಿಹಳ್ಳಿ ರಾಜಪ್ಪ, ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಡಾ.ಬಿದರಿ ಕೋಟ್ರೆಶ್‌, ಗಂಗಾಮತ ಸಮಾಜದ ಅಧ್ಯಕ್ಷ ಜಾಲಗಾರ ಮಂಜುನಾಥ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next