Advertisement

ಪಂಡಿತ್‌ ದೀನದಯಾಳರ ಜೀವನ ಅನುಕರಣೀಯ; ಓಲೇಕಾರ

05:45 PM Feb 12, 2022 | Team Udayavani |

ಹಾವೇರಿ: ಪಂಡಿತ್‌ ದೀನದಯಾಳ ಉಪಾಧ್ಯಾಯರ ಜೀವನ ಎಲ್ಲರಿಗೂ ಅನುಕರಣೀಯ. ತಮ್ಮ ಮೇರು ವಿಚಾರಧಾರೆಗಳನ್ನು ಬಿತ್ತರಿಸುವ ಮೂಲಕ ದೇಶದಲ್ಲಿ ಹೊಸ ವಿಚಾರ ಕ್ರಾಂತಿಗೆ ಅವರು ನಾಂದಿ ಹಾಡಿದರು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

Advertisement

ನಗರದ ಬಿಜೆಪಿ ನಗರ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಪಂಡಿತ ದೀನದಯಾಳ ಉಪಾಧ್ಯಾಯರ ಬಲಿದಾನ ದಿವಸ್‌ ಕಾರ್ಯಕ್ರಮದಲ್ಲಿ
ಪಾಲ್ಗೊಂಡು ಅವರು ಮಾತನಾಡಿದರು.

ದೀನದಯಾಳರು ಬಾಲ್ಯದಿಂದಲೂ ಅಪ್ರತಿಮ ರಾಷ್ಟ್ರಭಕ್ತರಾಗಿದ್ದರು. ರಾಷ್ಟ್ರೀಯ ವಿಚಾರಧಾರೆಗಳನ್ನು ಸಮಾಜದಲ್ಲಿ ಪ್ರಚಾರ ಪಡೆಸುತ್ತಾ ಬೆಳೆದರು. ಅವರ ವಿಚಾರ ಧಾರೆಗಳನ್ನು ಅಂದಿನ ಕಾಂಗ್ರೆಸ್‌ ಸರ್ಕಾರ ವಿರೋಧಿಸುವ ಹಂತಕ್ಕೆ ತಲುಪಿತು. ಭಾರತ ಅಖಂಡವಾಗಿರಬೇಕು ಎಂಬುದೇ ಅವರ ಆಸೆಯಾಗಿತ್ತು.ಅವರರಾಷ್ಟ್ರೀಯ ವಿಚಾರಧಾರೆಗಳನ್ನು ವಿರೋಧಿಸುವವರ ಸಂಖ್ಯೆ ಅಧಿಕವಾಯಿತು.

ಪರಿಣಾಮವಾಗಿ ಅವರ ದೇಹ ಮೊಗಲ್‌ ಸರಾಯ್‌ ರೈಲ್ವೆ ನಿಲ್ದಾಣದಲ್ಲಿ ದೊರೆಯುವ ಮೂಲಕ ಪಂಡಿತಜೀ ಅವರ ಜೀವನ ಅಂತ್ಯವಾಯಿತು. ಆದರೆ, ಅವರ ರಾಷ್ಟ್ರೀಯ ವಿಚಾರಗಳಿಂದ ಭಾರತ ವಿನೂತನ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದು ತಿಳಿಸಿದರು.

ಬಿಜೆಪಿಯಂತಹ ರಾಷ್ಟ್ರೀಯ ವಿಚಾರಧಾರೆಗಳನ್ನು ಉಳ್ಳಂತಹ ಪಕ್ಷ ಇಂದು ಬೃಹತ್‌ ಪ್ರಮಾಣದಲ್ಲಿ ಬೆಳೆದು ರಾಷ್ಟ್ರದ ಚುಕ್ಕಾಣಿ ಹಿಡಿಯುವ ಹಂತಕ್ಕೆ ಬಂದಿದೆ. ಆದ್ದರಿಂದ ಅವರ ಜೀವನದ ಆದರ್ಶಗಳನ್ನು ನಾವೆಲ್ಲ ಪಾಲಿಸೋಣ ಎಂದು ಕರೆ ನೀಡಿದರು. ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ದೀನದಯಾಳರ ಜೀವನ ನಮ್ಮಲ್ಲರಿಗೂ ಅನುಕರಣೀಯ. ರಾಷ್ಟ್ರದ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರು ಅಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ವಿನೂತನ ರಾಷ್ಟ್ರೀಯ ವಿಚಾರಧಾರೆಗಳನ್ನು ಸಮಾಜದಲ್ಲಿ ಬಿತ್ತರಿಸುತ್ತಾ ರಾಷ್ಟ್ರೀಯತೆ ಜಾಗೃತಿಗೊಳಿಸಿದರು.

Advertisement

ಸಂಘದ ಪ್ರಚಾರಕರಾಗಿ ಪ್ರವಾಸ ಮಾಡುತ್ತಾ ಸಮಾಜದಲ್ಲಿ ರಾಷ್ಟ್ರದ ಬಗ್ಗೆ ಜಾಗೃತಿ ಮೂಡಿಸಿದರು. ಇದರ ಪರಿಣಾಮವಾಗಿ ಅವರ ಹತ್ಯೆಯಾಯಿತು ಎಂದು ತಿಳಿಸಿದರು. ಹತ್ಯೆಯ ಬಳಿಕ ಅವರ ವಿಚಾರ ಧಾರೆಗಳು ದೇಶಾದ್ಯಂತ ಪಸರಿಸಿದವು. ಅವರ ವಿಚಾರ ಕ್ರಾಂತಿಯ ಪರಿಣಾಮವಾಗಿ ಬಿಜೆಪಿ ಪರಿಣಾಮಕಾರಿಯಾಗಿ ಬೆಳೆಯಿತು. ಇಂದು ಪಕ್ಷ ಇಷ್ಟು ಪ್ರಬಲವಾಗಲು ಪಂಡಿತಜೀಯವರ ವಿಚಾರಧಾರೆಗಳೇ ಪ್ರಮುಖ ಕಾರಣ ಎಂದು ಹೇಳಿದರು.

ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ, ಜಿಲ್ಲಾ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ‌ ಪಾಲನಕರ, ಸೌಭಾಗ್ಯಮ್ಮ ಹಿರೇಮಠ, ಮಂಜುನಾಥ ತಾಂಡೂರ, ಇಸೂಪಲಿ ಕರ್ಜಗಿ, ಶ್ರೀಕಾಂತ ಪೂಜಾರ, ಈರಣ್ಣ ಪಟ್ಟಣಶೆಟ್ಟಿ, ವಿವೇಕಾನಂದ ಇಂಗಳಗಿ, ನಿಖೀಲ್‌ ಡೊಗಳ್ಳಿ , ಸುನೀಲ ರಾಯ್ಕರ, ಮಾಲತೇಶ ಗೌರಮ್ಮನ ವರ, ಧರ್ಮರಾಜ ಕಜೂರಕರ, ಬಸವರಾಜ ಹಾಲಪ್ಪ ನವರ, ರೋಹಿಣಿ ಪಾಟೀಲ, ಪುಷ್ಪಾ ಚಕ್ರಸಾಲಿ, ಮಂಜುಳಾ ಪವಾರ, ಭಾಗ್ಯ ಮೋರೆ ಇತರರಿದ್ದರು.

ಪಂಡಿತ್‌ದೀನದಯಾಳರು ರಾಷ್ಟ್ರೀಯ ವಿಚಾರಧಾರೆಗಳನ್ನು ಸಮಾಜದಲ್ಲಿ ಪ್ರಚಾರಪಡೆಸುತ್ತಾ ಬೆಳೆದರು. ಭಾರತ ಅಖಂಡವಾಗಿರಬೇಕು ಎಂಬುದೇಅವರ ಆಸೆಯಾಗಿತ್ತು.ದೀನದಯಾಳರ ರಾಷ್ಟ್ರೀಯ ವಿಚಾರಗಳಿಂದಭಾರತ ವಿನೂತನ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು.ಅವರ ಜೀವನದ ಆದರ್ಶಗಳನ್ನು ನಾವೆಲ್ಲ ಪಾಲಿಸೋಣ.
ನೆಹರು ಓಲೇಕಾರ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next