Advertisement

ವಿಶ್ವ ಮಟ್ಟಕ್ಕೆ ಸೆಂಟ್ರಲ್‌ ರೈಲು ನಿಲ್ದಾಣ; ಶೀಘ್ರ ಸಭೆ 

04:32 PM Apr 10, 2017 | Harsha Rao |

ಮಂಗಳೂರು: ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣವನ್ನು ವಿಶ್ವಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಕ್ರೋಡೀರಿಸಲು 1 ತಿಂಗಳೊಳಗೆ ಸಮಾಲೋಚನ ಸಭೆ ಆಯೋಜಿಸಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಸುಮಾರು 1.52 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ವಾಗಲಿರುವ 1ರಿಂದ 2 ಮತ್ತು 3ನೇ ಪ್ಲಾಟ್‌ಫಾರಂ ಅನ್ನು ಸಂಪರ್ಕಿಸುವ ನಾಲ್ಕನೇ ಹೊಸ ಪ್ಲಾಟ್‌ಫಾರಂ ರಚನೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಹೊಸ ಪ್ಲಾಟ್‌ಫಾರಂ ಕಾಮಗಾರಿ ಶೀಘ್ರದಲ್ಲಿ ನಡೆದು ಪ್ರಯಾಣಿಕರಿಗೆ ಅರ್ಪಿಸಲಾ ಗುವುದು ಎಂದವರು ತಿಳಿಸಿದರು.

ಮಂಗಳೂರಿನ ರೈಲ್ವೇ ಯೋಜನೆ ಹಾಗೂ ಸಮಸ್ಯೆಗಳಿಗೆ ಸಂಬಂಧಿಸಿ ರೈಲ್ವೇ ಅಧಿಕಾರಿಗಳೊಂದಿಗೆ ನಿರಂತರ ಚರ್ಚೆ, ಸಭೆಗಳನ್ನು ನಡೆಸಲಾಗುತ್ತಿದೆ. ಇದರಿಂದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರೈಸಲು ಸಾಧ್ಯವಾಗು ತ್ತಿದೆ. ಈ ನಿಲ್ದಾಣವನ್ನು ವಿಶ್ವಮಟ್ಟ ಕ್ಕೇರಿಸುವ ನೆಲೆಯಲ್ಲಿ ಪೂರಕ ಕಾರ್ಯಗಳನ್ನು ಶೀಘ್ರದಲ್ಲಿ ಅನುಷ್ಠಾ ನಿಸಲಾಗುವುದು ಎಂದರು.

73.18 ಲಕ್ಷ ರೂ. ವಿವಿಧ ಕಾಮಗಾರಿ
ಸೆಂಟ್ರಲ್‌ ರೈಲು ನಿಲ್ದಾಣವನ್ನು ಸಂಪರ್ಕಿಸುವ ಪುರಭವನ ರಸ್ತೆ ಯನ್ನು 23 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ರೈಲು ನಿಲ್ದಾಣಕ್ಕೆ ಇನ್ನೊಂದು ಪ್ರವೇಶದ್ವಾರ ರಚನೆಯ ಕಾಮಗಾರಿ ನಡೆಯಲಿದೆ. ಮಂಗಳೂರು ಸೆಂಟ್ರಲ್‌ ಹಾಗೂ ಜಂಕ್ಷನ್‌ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 35.74 ಲಕ್ಷ ರೂ.

ಬಿಡುಗಡೆಗೊಳಿಸಲಾಗಿದೆ. ಸೆಂಟ್ರಲ್‌ ನಿಲ್ದಾಣದ ಮುಂಭಾಗ ಹಾಗೂ ವಾಹನ ನಿಲುಗಡೆ ಪ್ರದೇಶದ ಅಭಿವೃದ್ಧಿಗೆ 25.57 ಲಕ್ಷ ರೂ. ಹಾಗೂ ನಿಲ್ದಾಣದ ಎರಡನೇ ಪ್ರವೇಶ ದ್ವಾರದ ಬಳಿ ವಾಹನ ನಿಲುಗಡೆ ಪ್ರದೇಶದ ಅಭಿವೃದ್ಧಿಗೆ 11.87 ಲಕ್ಷ ರೂ. ಸೇರಿದಂತೆ ಒಟ್ಟು 73.18 ಲಕ್ಷ ರೂ.ಅನುದಾನದ ಕಾಮಗಾರಿ ನಡೆಯಲಿದೆ ಎಂದು ನಳಿನ್‌ ಕುಮಾರ್‌ ತಿಳಿಸಿದರು.

Advertisement

ಫಾಲಾ^ಟ್‌ ರೈಲ್ವೆ ವಿಭಾಗೀಯ ಅಧಿಕಾರಿ ನರೇಶ್‌ ಲಲ್ವಾನಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಪಾಲಿಕೆ ಸದಸ್ಯರಾದ ಸುಧೀರ್‌ ಶೆಟ್ಟಿ, ವಿಜಯಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next