Advertisement

ಸಂಶೋಧನೆಗೆ ಎಡಬಲದ ಲೇಪನ ಸರಿಯಲ್ಲ

01:15 AM Jun 10, 2019 | Lakshmi GovindaRaj |

ಬೆಂಗಳೂರು: ಇತ್ತೀಚಿ ದಿನಗಳಲ್ಲಿ ಸಂಶೋಧನಾ ಕ್ಷೇತ್ರದಲ್ಲೂ ಎಡ ಮತ್ತು ಬಲ ಎಂದು ನೋಡುವ ಪ್ರವೃತ್ತಿ ಬೆಳೆಯುತ್ತಿದ್ದು ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಚಾರಿತ್ರಿಕ ದಾಖಲೆಗಳ ತಜ್ಞ ಡಾ.ಎ.ಕೆ.ಶಾಸ್ತ್ರಿ ಅಭಿಪ್ರಾಯಪಟ್ಟರು.

Advertisement

ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರ ಹೆಸರಿನಲ್ಲಿ ನೀಡುವ ಈ ಸಾಲಿನ “ಚಿದಾನಂದ ಪ್ರಶಸ್ತಿ’,ಸ್ವೀಕರಿಸಿ ಮಾತನಾಡಿದ ಅವರು, ಸಂಶೋಧನೆಗೆ ಎಡ ಮತ್ತು ಬಲ ಎಂಬುವುದಿಲ್ಲ. ಈ ಲೇಪನ ಕೂಡ ಒಳ್ಳೆಯದಲ್ಲ ಎಂದರು.

ಮಠ-ಮಾನ್ಯಗಳಲ್ಲಿರುವ ಶಾಸನ ಶಾಸ್ತ್ರಗಳ ಬಗ್ಗೆ ಅಧ್ಯಯನ ನಡೆಸಲು ಹೊರಟರೆ ಅಂತಹ ಸಂಶೋಧಕನಿಗೆ ಯಾವುದೋ ಒಂದು ಪಂಥಿಯ ಲೇಪ ಹಚ್ಚುವ ಪದ್ಧತಿ ಶುರುವಾಗಿದೆ. ನಮ್ಮಲ್ಲಿರುವ ಮಠಗಳಲ್ಲೂ ಕೂಡ ಉಪಯುಕ್ತವಾದ ಶಾಸನಗಳಿವೆ. ದೇಶ – ವಿದೇಶಗಳೊಂದಿಗೆ ಹೊಂದಿದ್ದ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಹಿತ್ಯ ಮತ್ತು ರಕ್ಷಣಾ ಸಂಬಂಧವನ್ನು ತಿಳಿಸುತ್ತವೆ. ಈ ಶಾಸನಗಳ ಬಗ್ಗೆ ಮತ್ತಷ್ಟು ಆಳವಾದ ಅಧ್ಯಯನ ನಡೆಯಬೇಕಾಗಿದೆ ಎಂದು ತಿಳಿಸಿದರು.

ರಕ್ಷಣೆಗೆ ಸರ್ಕಾರ ಮುಂದಾಗಬೇಕು: ಭಾರತಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಆದರೆ ಈ ಬಗ್ಗೆ ಅಧ್ಯಯನ ಮಾಡುವುದಕ್ಕೆ ಶೇ.5 ರಷ್ಟು ಮಾತ್ರ ಆಕಾರ ಸಾಮಾಗ್ರಿಗಳು ದೊರಕುತ್ತಿವೆ. ಈಗಾಗಲೇ ಇರುವ ಕೆಲವು ಆಕಾರ ಸಾಮಾಗ್ರಿಗಳನ್ನು ಒರ್ಲೆ ತಿಂದಿವೆ. ಆ ಹಿನ್ನೆಲೆಯಲ್ಲಿ ಉಳಿದಿರುವ ಆಕಾರ ಸಾಮಾಗ್ರಿಗಳ ರಕ್ಷಣೆಯತ್ತ ಸರ್ಕಾರ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ಸಂಶೋಧನೆ ಎಂಬುವುದು ಸತ್ಯ ಶೋಧನೆಯಾಗಿದೆ. ಜೀವನವನ್ನು ಸಂಪೂರ್ಣವಾಗಿ ಸಂಶೋಧನೆಗೆ ಮುಡುಪಾಗಿಟ್ಟವರು ಹಲವರಿದ್ದಾರೆ. ಇಂತವರನ್ನು ಗುರುತಿಸಿ ಗೌರವಿಸಬೇಕಾಗಿದೆ. ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರ ಹೆಸರಿನ ಪ್ರಶಸ್ತಿ ದೊರೆತಿರುವುದು ಮತ್ತಷ್ಟು ಖುಷಿ ಕೊಟ್ಟಿದೆ ಎಂದು ತಿಳಿಸಿದರು.

Advertisement

ಪುರಾತತ್ವ ಶಾಸ್ತ್ರಜ್ಞ ಡಾ.ಎಸ್‌.ನಾಗರಾಜು ಮಾತನಾಡಿ, ಸಂಶೋಧನಾ ಕ್ಷೇತ್ರಕ್ಕೆ ಚಿದಾನಂದಮೂರ್ತಿ ಅವರ ಕೊಡುಗೆ ಅಪಾರ. ಅದೇ ರೀತಿಯಲ್ಲಿ ಡಾ.ಎ.ಕೆ.ಶಾಸ್ತ್ರಿ ಅವರು ಕೂಡ ಸಾಧನೆ ಮಾಡಿದು, ಸಂಶೋಧನಾ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಆಶಿಸಿದರು. ಸಂಶೋಧಕ ಡಾ.ಬಿ.ನಂಜುಂಡ ಸ್ವಾಮಿ, ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿಯ ಕಾರ್ಯದರ್ಶಿ ಎಸ್‌.ಎಲ್‌.ಶ್ರೀನಿವಾಸ ಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next