Advertisement
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 20413 ವಸ್ತುಗಳ ಪೈಕಿ 5686 ವಸ್ತುಗಳನ್ನು ಮಾಲಿಕರ ವಶಕ್ಕೆ ಒಪ್ಪಿಸಲಾಗಿದೆ. ಆಹಾರ ಸೇರಿದಂತೆ ಕೆಡಬಹುದಾದ 7153 ವಸ್ತುಗಳನ್ನು 24 ಗಂಟೆಗಳಲ್ಲಿ ವಿಲೇವಾರಿ ಮಾಡಲಾಗಿದೆ. ಉಳಿದಂತೆ ಬಿಟ್ಟು ಹೋದ ವಸ್ತುಗಳನ್ನು 90 ದಿನಗಳ ಒಳಗಾಗಿ ಪಡೆಯದಿದ್ದರೆ ಹರಾಜು ಹಾಕಿ ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.
Related Articles
Advertisement
ಮರಳಿ ಪಡೆಯಲು ಕರೆ ಮಾಡಿ: ಪ್ರಯಾಣಿಕರ ಸಂಚಾರ ಹೆಚ್ಚುತ್ತಿದ್ದು ಅದಕ್ಕೆ ತಕ್ಕಂತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದುಹೋದ ವಸ್ತುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹಾಗೆಯೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯಲು (ವಾರದ 24 ಗಂಟೆಗಳ ಸಹಾಯವಾಣಿ ಸಂಖ್ಯೆ) 080-6678 2257(ಭಾರತದ ನಿವಾಸಿಗಳಿಗೆ) ಮತ್ತು +9180 66782257ಗೆ)/ ಕರೆ ಮಾಡಬಹುದು ಅಥವಾ (lostandfound@bialairport.com)ಕ್ಕೆ ಮೇಲ್ ಮಾಡಬಹುದೆಂದು ಬಿಐಎಎಲ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜಾವೆದ್ ಮಲಿಕ್ ತಿಳಿಸಿದರು.
ನಿಲ್ದಾಣದಲ್ಲಿ ಸಿಕ್ಕ ವಸ್ತುಗಳು: ಸಿಕ್ಕ ವಸ್ತುಗಳ ಪೈಕಿ 2492 ಸಾಮಾನ್ಯ ವಸ್ತು, 485 ವಾಚ್, ಪೆನ್, 367 ಮೊಬೈಲ್, ಅವುಗಳ ಬಿಡಿಭಾಗ, 37 ಲ್ಯಾಪ್‌ಟಾಪ್, 29 ಟ್ಯಾಬ್-ಐಪ್ಯಾಡ್, 7 ಕ್ಯಾಮರಾ ಸೇರಿದೆ. ಉಳಿದಂತೆ ಬ್ಯಾಗ್, ಬಟ್ಟೆ, ವೈದ್ಯಕೀಯ ಬಿಡಿಭಾಗ, ಅಡುಗೆ ಮನೆ ಉಪಕರಣ, ಪ್ರವಾಸ ಸಲಕರಣೆ, ಬಿಸಿಲು ಕನ್ನಡಕ, ಆಟಿಕೆ ಇತರೆ ಸಲಕರಣೆ ಸೇರಿವೆ.