Advertisement

ಕಾಯ್ಕಿಣಿ ಬರಹ ರೂಪಕಗಳ ಭಾಷೆ: ಎಸ್‌. ದಿವಾಕರ್‌

12:20 PM Apr 18, 2021 | Team Udayavani |

ಬೆಂಗಳೂರು: ಜಯಂತ್‌ ಕಾಯ್ಕಿಣಿ ಅವರ ಬರಹವುರೂಪಕಗಳ ಭಾಷೆಯಾಗಿದೆ. ಇವರ ಕಥೆಗಳಲ್ಲಿ ನಾನುಎಂಬುದಕ್ಕಿಂತ ನಾವು ಎಂಬ ಭಾವವೇ ಪ್ರಧಾನವಾಗಿರುತ್ತದೆ ಎಂದು ವಿಮರ್ಶಕ ಎಸ್‌. ದಿವಾಕರ್‌ಅಭಿಪ್ರಾಯಪಟ್ಟಿದ್ದಾರೆ.

Advertisement

ಬುಕ್‌ಬ್ರಹ್ಮ ಫೇಸ್‌ಬುಕ್‌ ಲೈವ್‌ನಲ್ಲಿ ಭಾನುವಾರಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಿ ಜಯಂತ್‌ಕಾಯ್ಕಿಣಿ ಅವರ ವಿಚಿತ್ರಸೇನನ ವೈಖರಿ (ಕವನ ಸಂಕಲನ) ಹಾಗೂ ಅನಾರ್ಕಲಿಯ ಸೇಫ್ಟಿಪಿನ್‌ (ಕಥಾಸಂಕಲನ) – ಅಂಕಿತ ಪ್ರಕಾಶನದ ಈ ಎರಡೂ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಹೇಳುವುದನ್ನೇ ಸೂಕ್ಷ್ಮವಾಗಿ, ಸಂಕ್ಷಿಪ್ತವಾಗಿ, ಉಪಮೆಗಳನ್ನು ಬಳಸಿ ಮಾತ್ರವಲ್ಲ ಆ ಬರಹವು ಉತ್ತಮರೂಪಕವಾಗುವಂತೆ ಕಾಯ್ಕಿಣಿ ನೋಡಿಕೊಳ್ಳುತ್ತಾರೆ.ಕರಾರುವಕ್ಕಾಗಿ ಹೇಳುತ್ತಾರೆ.

ಜೊತೆಗೆ ಇವರ ಕಥೆಗಳಲ್ಲಿ’ನಾನು’ ಎಂಬುದಕ್ಕಿಂತ ‘ನಾವು’ ಎಂಬ ಭಾವವೇಪ್ರಧಾನವಾಗಿರುತ್ತದೆ ಎಂದರು. ಸಂವಾದಕ್ಕೆ ಸ್ಪಂದಿಸಿದಜಯಂತ್‌ ಕಾಯ್ಕಿಣಿ, ಪುಸ್ತಕ ಕೊಂಡು ಓದುವ ಪ್ರವೃತ್ತಿಹೆಚ್ಚಬೇಕು ಎಂದರು. ವಿಜ್ಞಾನಿ ಸುಂದರ ಸರುಕೈ, ದೇವುಪತ್ತಾರ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next