Advertisement

Anjali Ambigera Case; ಹಂತಕ ಗಿರೀಶ್ ಗೂ ಅಂಜಲಿಗೂ 15 ದಿನಗಳ ಮೊದಲೇ ಮದುವೆಯಾಗಿತ್ತು!

10:40 AM May 17, 2024 | Team Udayavani |

ಹುಬ್ಬಳ್ಳಿ: ಮೇ 15ರ ನಸುಕಿನ ಜಾವ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ನಡೆದಿದ್ದ ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಗಿರೀಶ್ ಸಾವಂತನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳು ಹೊರಬರುತ್ತಿದೆ.

Advertisement

ಮೈಸೂರಿನ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಗಿರೀಶ ಸಾವಂತ ಮತ್ತು ಹತ್ಯೆಯಾದ ಅಂಜಲಿ ಅಂಬಿಗೇರ ಪರಸ್ಪರ ಪ್ರೀತಿಸುತ್ತಿದ್ದರು. 15 ದಿನಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು ಎನ್ನಲಾಗುತ್ತಿದೆ.

ಅಂಜಲಿ ವಾರದ ಮುಂಚೆ ಗಿರೀಶ ಬಳಿ ಎರಡು ಸಾವಿರ ರೂ ಕೇಳಿದ್ದಳು. ಆಗ ಒಂದು ಸಾವಿರ ರೂ ಪೋನ್ ಪೇ ಮಾಡಿದ್ದ. ಆನಂತರ ಆತನ ಮೊಬೈಲ್ ನಂಬರ್ ಬ್ಲಾಕ್ ಲಿಸ್ಟ್‌ ನಲ್ಲಿ ಅಂಜಲಿ ಹಾಕಿದ್ದಳು. ಆತನ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ.

ಆ ನಂತರ ಇವನು ಸಿಟ್ಟಿಗೆದ್ದು ಮೈಸೂರಿನಿಂದ ಹುಬ್ಬಳ್ಳಿಗೆ ಬಂದು ಬುಧವಾರ ಬೆಳಗಿನ ಜಾವ ಕೊಲೆ ಮಾಡಿ, ಅಲ್ಲಿಂದ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಮೂಲಕ ಹಾವೇರಿಗೆ ಹೋಗಿದ್ದ. ಅಲ್ಲಿಂದ ಮೈಸೂರು ರೈಲು ಹತ್ತಿದ್ದ. ಮಾರ್ಗ ಮಧ್ಯದಲ್ಲಿ ಓರ್ವನ ಮೊಬೈಲ್‌ನಲ್ಲಿ ಪೋಟೋ ನೋಡಿ ಮೈಸೂರಿಗೆ ವಾಪಸ್ಸು ಹೋಗಿದ್ದ. ಅಲ್ಲಿ ಮಹಾರಾಜ್ ಹೋಟೆಲ್‌ನಲ್ಲಿ ತಂಗಿದ್ದ.

ಆನಂತರ ಮೈಸೂರಿನಿಂದ ಹುಬ್ಬಳ್ಳಿಗೆ ವಾಪಸ್ಸಾಗಲು ಬರುತ್ತಿದ್ದ. ಈ ವೇಳೆ ರೈಲಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರೊಂದಿಗೆ ಕಿರಿಕ್ ಮಾಡಿಕೊಂಡಾಗ ಸಾರ್ವಜನಿಕರಿಂದ ತಪ್ಪಿಸಿಕೊಳ್ಳುವಾಗ ಗಾಯಗೊಂಡಿದ್ದ ಎಂದು ಹೇಳಲಾಗುತ್ತಿದೆ.

Advertisement

ರೈಲ್ವೆ ಪೊಲೀಸರ ಸಹಾಯದಿಂದ ಹುಬ್ಬಳ್ಳಿ ಪೊಲೀಸರು ಆರೋಪಿ ಗಿರೀಶ್ ನನ್ನು ಬಂಧಿಸಿದ್ದಾರೆ. ಸದ್ಯ ಆತನಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next