Advertisement

ಸಮ್ಮೇಳನದಿಂದ ಭಾಷೆ ಬೆಳವಣಿಗೆ ; ಜನಪರ ಸಾಹಿತ್ಯ ರಚನೆ ಅವಶ್ಯ; ಸಾಹಿತಿ ಕಾವ್ಯಶ್ರೀ

04:17 PM Jan 22, 2021 | Team Udayavani |

ಬೀದರ: ಸಾಹಿತಿ ಮತ್ತು ಬರಹಾರರಿಂದ ಜೀವಪರ ಹಾಗೂ ಜನಪರ ಸಾಹಿತ್ಯ ರಚನೆಯ ಅಗತ್ಯವಿದೆ ಎಂದು ಕಲಬುರ್ಗಿಯ ಸಾಹಿತಿ ಕಾವ್ಯಶ್ರೀ  ಮಹಾಗಾಂವಕರ್‌ ಅಭಿಪ್ರಾಯಪಟ್ಟರು. ನಗರದಲ್ಲಿ ತಾಲೂಕು ಕಸಾಪ ಗುರುವಾರ ಹಮ್ಮಿಕೊಂಡಿದ್ದ ತಾಲೂಕು 2ನೇ ಯುವ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನಗಳು ಕಲೆ, ಸಾಹಿತ್ಯ, ಸಂಸ್ಕೃತಿಯ ಪ್ರತೀಕವಾಗಿವೆ. ಯಾವ ದೇಶದಲ್ಲಿ ಬಡತನ, ಹಸಿವು, ಹೋರಾಟ, ಸಂಘರ್ಷವಿದೆಯೋ? ಆ ದೇಶದಲ್ಲಿ ಗಟ್ಟಿ ಸಾಹಿತ್ಯ ಹುಟ್ಟುತ್ತದೆ ಎಂದು ಹಿರಿಯ ಆಂಗ್ಲ ಸಾಹಿತಿಗಳ ಅನಿಸಿಕೆಯಾಗಿದೆ.

Advertisement

ಯುವಕರು ಬಸವಾದಿ ಶರಣರನ್ನು ಆದರ್ಶವಾಗಿ ಇಟ್ಟುಕೊಂಡು ಬದುಕು ಸಾಗಿಸಬೇಕು ಎಂದು ಕರೆ ನೀಡಿದರು. ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ  ಪ್ರೊ| ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಯುವ ಸಾಹಿತ್ಯದ ಜತೆಗೆ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವುದು ಅಗತ್ಯವಾಗಿದೆ. ಕನ್ನಡ ಭಾಷಾ ಬೆಳವಣಿಗೆಗೆ ಕನ್ನಡ ಸಾಹಿತ್ಯ  ಸಮ್ಮೇಳನಗಳು ಬಹಳ ಸಹಕಾರಿಯಾಗಿವೆ ಎಂದರು.

ಸಮ್ಮೇಳನಾಧ್ಯಕ್ಷ ಡಾ| ನಿಜಲಿಂಗ ರಗಟೆ ಮಾತನಾಡಿ, ಇಂದಿನ ಯುವ ಸಮುದಾಯವು ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ತನ್ನ ಕರ್ತವ್ಯಗಳನ್ನು ಮರೆತು ಕೇವಲ ಮೊಬೈಲ್‌ ಬಳಕೆಯಲ್ಲಿ ತೊಡಗಿ ಸಂಪೂರ್ಣ ನಿರುತ್ಸಾಹಿಗಳಾಗಿ ಜೀವನವನ್ನು ನಡೆಸುತ್ತಿರುವುದು ಸೋಜಿಗದ ಸಂಗತಿ ಎಂದರು.

ಮಯೂರಿ ಬಸವರಾಜ ಬಳ್ಳಾರಿ ಅವರ ಕುಚಪುಡಿ ನೃತ್ಯ ಮತ್ತು ಆಕಾಂಕ್ಷಿ ನರೇಶ ಅವರ ಭರತನಾಟ್ಯ ಗಮನ ಸೆಳೆಯಿತು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.
ಬಸವರಾಜ ಬಲ್ಲೂರ ಅವರು ಸಮ್ಮೇಳನಾಧ್ಯಕ್ಷ ಡಾ| ನಿಜಲಿಂಗ ರಗಟೆ ಅವರಿಗೆ ಧ್ವಜ ಹಸ್ತಾಂತರ ಮಾಡಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವಿರೂಪಾಕ್ಷ ಗಾದಗಿ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ಸೋನಾರೆ, ಶ್ರೀಮಂತ ಸಪಾಟೆ, ಎಂ.ಪಿ. ಮುದಾಳೆ, ರಾಜು ಸಾಗರ, ವಿಜಯಕುಮಾರ ಗೌರೆ, ಕಸ್ತೂರಿ ಪಟಪಳ್ಳಿ, ಪ್ರಕಾಶ ಮಠಪತಿ, ವೀರಶೆಟ್ಟಿ ಪಟೆ° ಇದ್ದರು. ಎಂ.ಎಸ್‌ ಮನೊಹರ ಸ್ವಾಗತಿಸಿದರು.

ವಿದ್ಯಾವತಿ ಮಠಪತಿ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಅವರು ರಾಷ್ಟ್ರಧ್ವಜ, ಕಸಾಪದ ಟಿ.ಎಂ. ಮಚ್ಛೆ ನಾಡಧ್ವಜ ಹಾಗೂ ಎಂ.ಎಸ್‌. ಮನೋಹರ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next