Advertisement

ಭೂ ರಹಿತರಿಗೆ ಸರ್ಕಾರ ಭೂಮಿ ನೀಡಲಿ

11:28 AM Jul 12, 2017 | Team Udayavani |

ಬೆಂಗಳೂರು: ಭೂ ರಹಿತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ರಾಜ್ಯ ಸರ್ಕಾರ ಕೂಡಲೇ ಎಲ್ಲಾ ಕುಟುಂಬಕ್ಕೂ ಎರಡು ಎಕರೆ ಭೂಮಿ ಮಂಜೂರು ಮಾಡಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹೇಳಿದರು.

Advertisement

ಎಂ.ಪಿ.ಪ್ರಕಾಶ್‌ ಪ್ರತಿಷ್ಠಾನ, ರಂಗಭಾರತಿ ಸಂಸ್ಥೆಯಿಂದ ಮಂಗಳವಾರ ಆಯೋಜಿಸಿದ್ದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌ ಅವರ 77ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ “ಎಂ.ಪಿ.ಪ್ರಕಾಶ್‌ ರಾಷ್ಟ್ರೀಯ ಸೇವಾಸಿರಿ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

“ದೇಶ ಸ್ವಾತಂತ್ರ್ಯ ಪಡೆದು ಏಳು ದಶಕ ಕಳೆದರೂ ಬಡತನ ನಿರ್ಮೂಲನೆ ಆಗಿಲ್ಲ. ಭೂರಹಿತರಿಗೆ ಭೂಮಿ ನೀಡಿ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ರಾಜ್ಯದಲ್ಲಿ  ಭೂ ರಹಿತರಿಗೆ ಎರಡು ಎಕರೆ ಭೂಮಿ ನೀಡಲು ಶಾಸಕರು ಒಪ್ಪಿಗೆ ನೀಡಿದ್ದರೂ, ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಮಾತನಾಡಿ, “ನಾನು ಚಿಕ್ಕಂದಿನಲ್ಲಿ ಎಂ.ಪಿ.ಪ್ರಕಾಶ್‌ ಅವರು ಅಭಿಮಾನಿ, ಅನುಯಾಯಿಯಾಗಿ ಅವರ ಗರಡಿಯಲ್ಲೇ ಪಳಗಿ ರಾಜಕೀಯದಲ್ಲಿ ಬೆಳೆದಿದ್ದೇನೆ. ಇಂದಿನ ಯುವ ರಾಜಕಾರಣಿಗಳು ಎಂಪಿ.ಪ್ರಕಾಶ್‌ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗುವ ಅನಿವಾರ್ಯತೆ ಇದೆ,’ ಎಂದು ಹೇಳಿದರು.

ಚಿಂತಕ ಗೊ.ರು.ಚನ್ನಬಸಪ್ಪ ಅವರಿಗೆ “ಎಂ.ಪಿ.ಪ್ರಕಾಶ್‌ ಸಾಹಿತ್ಯ ಸೇವಾ ಸಿರಿ ಪ್ರಶಸ್ತಿ’, ಸಾಮರ್ಥ್ಯ ವಿಕಲಚೇತನ ಪುನಶ್ಚೇತನ ಸೇವಾ ಸಂಸ್ಥೆಗೆ “ಮ.ಮ. ಪಾಟೀಲ ಜನಸೇವಕ ಪ್ರಶಸ್ತಿ’, “ಎಂ.ಪಿ.ಕೊಟ್ರಗೌಡ ಕಲಾರಾಧಕ ಪ್ರಶಸ್ತಿ’ಯನ್ನು ನಟಿ ಗಿರಿಜಾ ಲೋಕೇಶ್‌ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ ಒಂದು ಲಕ್ಷ ರೂ. ನಗದು ಹಾಗೂ ಶಾಶ್ವತ ಫ‌ಲಕ ಒಳಗೊಂಡಿವೆ.

Advertisement

ವಿಧಾನ ಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ, ಮಾಜಿ ಸಚಿವ ಅಮರೇಗೌಡ ಬೈಯಾಪುರ, ಶಿವರಾತ್ರೀಶ್ವರ ದೇಶೀಕೇಂದ್ರ ಮಹಾಸ್ವಾಮಿ, ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next