Advertisement
ಕಂದಾಯ ಭೂಮಿ ಇದರ ವ್ಯಾಪ್ತಿಗೆ ಒಳಪಟ್ಟರೆ, ಅಲ್ಲಿ ಯೋಜನೆಯ ಉದ್ದೇಶಿತ ಚಟುವಟಿಕೆ ಅನುಷ್ಠಾನಗೊಂಡು ಜನರು ಗುಳೇ ಹೋಗಬೇಕಾದ ಅಪಾಯವಿದೆ. ವಾಣಿಜ್ಯ ಆಧಾರಿತ ಕಸುಬುಗಳಿಗೆ ನಿಷಿದ್ಧ ಇರುವುದರಿಂದ ಪರ್ಯಾಯ ದಾರಿ ಹುಡುಕಬೇಕಿದೆ.
ಮಾಸ್ಟರ್ ಪ್ಲ್ರಾನ್‌ನ್ನು ರಾಜ್ಯ ಸರಕಾರ ಎರಡು ವರ್ಷದೊಳಗೆ ರೂಪಿಸಬೇಕು. ಈ ಸಂದರ್ಭದಲ್ಲಿ ಕೇಂದ್ರ-ರಾಜ್ಯ ಸರಕಾರದ ಕಾನೂನು-ನಿಯಮ ಮೀರಬಾರದು. ಪರಿಸರ, ಅರಣ್ಯ, ವನ್ಯಜೀವಿ, ಕೃಷಿ, ಕಂದಾ ಯ, ನಗರಾಭಿವೃದ್ಧಿ, ಪ್ರವಾಸೋದ್ಯಮ ಲೊಕೋಪಯೋಗಿ, ಗ್ರಾಮೀಣಾಭಿವೃದ್ಧಿ ನೀರಾ ವರಿ ಪಂಚಾಯತ್‌ರಾಜ್ ಇಲಾಖೆಗಳು ಯೋಜನೆ ರೂಪಿಸುವುದರಲ್ಲಿ ಪಾಲ್ಗೊಳ್ಳಬೇಕಿದೆ.
Related Articles
Advertisement
ಸಣ್ಣ ಬೃಹತ್ ಖನಿಜಗಳ ಗಣಿಗಾರಿಕೆ, ಕ್ರಶರ್‌ಗಳು, ಮಾಲಿನ್ಯಕಾರಕ ಕೈಗಾರಿಕಾ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆ, ಜಲವಿದ್ಯುತ್ ಉತ್ಪಾದನ ಘಟಕ, ಅಪಾಯಕಾರಿ ವಸ್ತುಗಳ ಸಂಸ್ಕರಣಾ ಘಟಕ ಸ್ಥಾಪನೆ, ಹೊಸದಾಗಿ ಘನತ್ಯಾಜ್ಯ ಸಂಸðರಣ ಘಟಕ ನಿರ್ಮಿಸುವುದು, ಕೈಗಾರಿಕೆ, ಆಸ್ಪತ್ರೆ, ಇತ್ಯಾದಿಗಳಿಂದ ಬರುವ ಘನತ್ಯಾಜ್ಯವನ್ನು ಸುಡುವ ಘಟಕ, ಬೃಹತ್ ಗಾತ್ರದ ಕೋಳಿ ಫಾರಂ, ಇಟ್ಟಿಗೆ ನಿರ್ಮಾಣ ಘಟಕ, ಮರದ ಮಿಲ್ ಮೊದಲಾದವುಗಳ ಸ್ಥಾಪನೆಗೆ ಅವಕಾಶ ಇಲ್ಲ.
ಕಂದಾಯ ವ್ಯಾಪ್ತಿಯ ಆತಂಕವಿಸ್ತರಿತ ವ್ಯಾಪ್ತಿ ನಿರ್ಧರಿಸುವುದು ಹೇಗೆಂದರೆ ಕೊಡಗು ಅರಣ್ಯ ( ಪುಷ್ಪಧಾಮ)ದ ಗಡಿ ಭಾಗದಿಂದ 1.8 ಕಿ.ಮೀ ವ್ಯಾಪ್ತಿ ವನ್ಯಜೀವಿ ಧಾಮದೊಳಗೆ ಸೇರ್ಪಡೆಗೊಳಿಸುವುದು. ಈ ವಿಸ್ತರಿತ ವ್ಯಾಪ್ತಿ ದ.ಕ. ಗಡಿ ಭಾಗಕ್ಕೆ ತಾಗಿರುವ ಕಲ್ಮಕಾರು, ಬಾಳುಗೋಡು ಗ್ರಾಮದ ಕಂದಾಯ ಪ್ರದೇಶವನ್ನು ಒಳಗೊಂಡಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಯೋಜನೆಯ ವ್ಯಾಪ್ತಿಯಲ್ಲಿ ಜನವಸತಿ, ಕೃಷಿ ಭೂಮಿ ಇದೆಯೋ ಎಂಬ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ. ವಿಸ್ತರಣೆಯ ಉದ್ದೇಶ
ಸಾವಯವ ಕೃಷಿ, ಮಳೆ ನೀರು ಕೊಯ್ಲು, ಗುಡಿ ಕೈಗಾರಿಕೆ, ನವೀಕರಿಸಬಹುದಾದ ಇಂಧನಗಳ ಬಳಕೆ, ಕೃಷಿ ಅರಣ್ಯ ಪರಿಸರ ಸ್ನೇಹಿ ಸಾರಿಗೆ ಹಡಿಲು ಬಿದ್ದ ಭೂಮಿಯ ಪುನಾರುಜ್ಜೀವನಕ್ಕೆ ಉತ್ತೇಜನ ನೀಡಬೇಕು ಅನ್ನುವುದು ಯೋಜನೆಯ ಅಂಶ.
ಇನ್ನೊಂದು ಅಂಶವೆಂದರೆ, ವಲಯದ 1.ಕಿ.ಮೀ ವ್ಯಾಪ್ತಿಯೊಳಗೆ ರಾಜ್ಯ ಸರಕಾ ರದಿಂದ ಅನುಮತಿ ಇಲ್ಲದೆ ಸರಕಾರಿ ಅಥವಾ ಖಾಸಗಿ ಜಾಗದಲ್ಲಿ ಮರ ಕಡಿ ಯುವ ಹಾಗೂ ಟ್ಯಾಪಿಂಗ್ ಮಾಡು ವಂತಿಲ್ಲ.ಅರಣ್ಯ ಉತ್ಪನ್ನಗಳ ಸಂಗ್ರಹ, ವಿದ್ಯುತ್ ಮಾರ್ಗ ರಚನೆಯನ್ನು ನಿಯಮ ಅನುಸಾರ ನಿಯಂತ್ರಿಸಬೇಕು ಅನ್ನುತ್ತದೆ ಅಧಿಸೂಚನೆಯಲ್ಲಿನ ಅಂಶಗಳು. ಯಾವ-ಯಾವ ಪ್ರದೇಶ
ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಕುಮಾರಳ್ಳಿ, ಕೊತನಳ್ಳಿ, ಸರ್ಲಬ್ಬಿ, ಮಡಿಕೇರಿ ತಾಲೂಕಿನ ಹಮ್ಲಿಯಾಳ, ಕಾಲೂರು, ಗಾಳಿಬೀಡು ಮತ್ತು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಮತ್ತು ಬಾಳುಗೋಡು ಗ್ರಾಮಗಳು ಇಎಸ್‌ರkುಡ್ ವ್ಯಾಪ್ತಿಗೆ ಒಳ ಪಟ್ಟಿದೆ. ಸುಬ್ರಹ್ಮಣ್ಯ, ಕಿರಿಭಾಗ, ನಾಲ್ಕೂರು ಮೀಸಲು ಅರಣ್ಯದ ಕೆಲ ಭಾಗಗಳು, ಕೊಡಗು, ಹಾಸನ ಜಿಲ್ಲೆಯ ಬಿಸಿಲೆ ಮೊದಲಾದಿ ಪ್ರದೇಶಗಳನ್ನು ಇದರೊಳಗೆ ಸೇರಿಸಲಾಗಿದೆ. ಜನವಸತಿಗೆ ಸಂಚಕಾರ
ವನ್ಯಜೀವಿಧಾಮ ವ್ಯಾಪ್ತಿಯ ಕಾಡಿನೊಳಗೆ ಈಗಾಗಲೇ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಿದೆ. ಅಲ್ಲಿ ಜನರಿಗೆ ಪ್ರವೇಶ ಇಲ್ಲ. ಹಾಗಾಗಿ ಈ ಯೋಜನೆಯನ್ನು ಕಂದಾಯ ಭೂಮಿಯ ವ್ಯಾಪ್ತಿಯೊಳಗೆ ವಿಸ್ತರಿಸಬಾರದು. ವಿಸ್ತರಿಸಿದರೆ ಜನರಿಗೆ ಬದುಕಲು ಸಾಧ್ಯವಿಲ್ಲ. ಅಧಿಸೂಚನೆಯಲ್ಲಿ ಕಲ್ಮಕಾರು ಹಾಗೂ ಬಾಳುಗೋಡು ವನ್ಯ ಜೀವಿಧಾಮ ವ್ಯಾಪ್ತಿಗೆ ಸೇರಿರುವ ಅಂಶ ಉಲ್ಲೇಖವಾಗಿದೆ. ಅದು ಕಂದಾಯ ಪ್ರದೇಶದ ವ್ಯಾಪ್ತಿಯೇ ಅನ್ನುವುದು ಸ್ಪಷ್ಟವಾಗಬೇಕಿದೆ.
– ಹಮೀದ್ ಇಟ್ನೂರು,
ಅಧ್ಯಕ್ಷರು, ರೈತ ಹಿತ ರಕ್ಷಣಾ ವೇದಿಕೆ – ಕಿರಣ್ ಪ್ರಸಾದ್ ಕುಂಡಡ್ಕ