Advertisement

ಪಟಾಕಿ ನಿಷೇಧ: ದೀಪಕ್ಕೂ ಇನ್ನು ಆಕ್ಷೇಪಿಸಬಹುದು

11:40 AM Oct 15, 2017 | Harsha Rao |

ಹೊಸದಿಲ್ಲಿ: ಎಲ್ಲಾ ಪಟಾಕಿಗಳೂ ವಾಯುಮಾಲಿನ್ಯ ಉಂಟು ಮಾಡುವುದಿಲ್ಲ. ನಾಳೆ ದಿನ ದೀಪಾವಳಿಯಂದು ದೀಪ ಹಚ್ಚುವುದಕ್ಕೂ ಯಾರಾದರೂ ಆಕ್ಷೇಪ ವ್ಯಕ್ತಪಡಿಸು ತ್ತಾರೆ. ಹೀಗೆಂದು ಆರೆಸ್ಸೆಸ್‌ ಪ್ರಧಾನ ಕಾರ್ಯದರ್ಶಿ ಸುರೇಶ್‌ ಭಯ್ನಾಜಿ ಜೋಶಿ ಹೇಳಿದ್ದಾರೆ. ಭೋಪಾಲ್‌ನಲ್ಲಿ ಅಖೀಲ ಭಾರತೀಯ ಕಾರ್ಯಕಾರಿಣಿ ಮಂಡಲ್‌ನ 3 ದಿನಗಳ ಸಭೆಯ ಸಮಾರೋಪದ ವೇಳೆ ವರದಿಗಾರರ ಜತೆ ಮಾತನಾಡುತ್ತಾ ಅವರು ಹೀಗೆ ಹೇಳಿದ್ದಾರೆ. ಪಟಾಕಿ ನಿಷೇಧಕ್ಕೂ ಕೋಮು ಬಣ್ಣ ಬಳಿಯುತ್ತಿರುವುದು ನೋವಿನ ವಿಷಯ ವಾಗಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ಪಟ್ಟ ಮರುದಿನವೇ ಆರ್‌ಎಸ್‌ಎಸ್‌ ಈ ರೀತಿ ಪ್ರತ್ಯುತ್ತರ ನೀಡಿದೆ. ಈ ವಿಚಾರವಾಗಿ ಸಮತೋಲಿತ ದೃಷ್ಟಿಕೋನದ ಅಗತ್ಯವಿದೆ ಎಂದು ಆರ್‌ಎಸ್‌ಎಸ್‌ ತಿಳಿಸಿದೆ. ಜತೆಗೆ ರೊಹಿಂಗ್ಯಾ ನಿರಾಶ್ರಿತರ ಗಡೀಪಾರು ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next