Advertisement
ಭತ್ತದ ತೆನೆಯ ಕೊರತೆಕದಿರು ಕಟ್ಟುವ ಹಬ್ಬಕ್ಕೆ ಕರಾವಳಿಯ ಮಂದಿಗೆ ತೆನೆಯ ಸಮಸ್ಯೆ ಕಳೆದ ಕೆಲವು ವರ್ಷಗಳಿಂದ ಎದುರಾಗುತ್ತಿದ್ದರೂ, ಈ ಬಾರಿ ಆ ಸಮಸ್ಯೆಯ ಬಿಸಿ ಮತ್ತಷ್ಟು ತಟ್ಟಿದೆ. ಕರಾವಳಿಯಲ್ಲಿ ಭತ್ತದ ಕೃಷಿ ನೇಪಥ್ಯಕ್ಕೆ ಸರಿಯತೊಡಗಿದೆ. ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಭತ್ತದ ಕೃಷಿ ಕ್ಷೀಣಿಸುತ್ತಿದೆ. ಆದ್ದರಿಂದ ಕೃಷಿಕರು ತಮಗೆ ಎಷ್ಟೊ ಬೇಕೊ ಅಷ್ಟು ಮಾತ್ರ ಕೃಷಿ ಮಾಡುತ್ತಾರೆ.
ಕೆಲವೊಂದು ಕಡೆಗಳಲ್ಲಿ ಗದ್ದೆಯ ಮಾಲಕರು ಭತ್ತದ ತೆನೆಯನ್ನು ಕೊಯ್ಯಲು ಆಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಕದ್ದು ಮುಚ್ಚಿ ಕೊಯ್ದು ತಂದು ಕಟ್ಟುವ ಪರಿಸ್ಥಿತಿ ನಮ್ಮ ಕರಾವಳಿ ಭಾಗದಲ್ಲಿ ಎದುರಾಗಿದೆ. ಹಾಗಾಗಿ ಈಗೀಗ ಹೆಚ್ಚಿನ ಮಂದಿ ದೇವಸ್ಥಾನಗಳಲ್ಲಿ ನೀಡುವ ಒಂದೆರಡು ತೆನೆಯನ್ನು ತಂದು ಕಟ್ಟಿಕೊಳ್ಳುತ್ತಾರೆ.
Related Articles
ಹಿಂದೆ ಗದ್ದೆಯೇ ಮನೆ ಮಂದಿಯ ಜೀವಾಳವಾಗಿದ್ದ ಕಾಲದಲ್ಲಿ ಮನೆ ಮಂದಿಯಲ್ಲ ಸೇರಿ ಯೆಥೇಚ್ಚ ವಾಗಿ ಕದಿರನ್ನು ತಂದು ತಮ್ಮ ಮನೆಯ ಬಾಗಿಲಿನಿಂದ ಹಿಡಿದು ಹಾರೆ, ಪಿಕ್ಕಾಸು, ಅನ್ನದ ಪಾತ್ರೆ, ಇತ್ಯಾದಿ ಸುಮಾರು 30-40 ಪರಿಕರಗಳಿಗೆ ಕದಿರನ್ನು ಕಟ್ಟುವ ಸಂಪ್ರದಾಯ ಇತ್ತು. ಇಂದು ತೆನೆಯ ಅಭಾವದಿಂದಾಗಿ ದೇವರ ಕೋಣೆಗೆ ಮಾತ್ರ ಒಂದು ಸೀಮಿತಗೊಂಡಿದೆ.
Advertisement