Advertisement

ಒತ್ತಡ-ಸಿಬ್ಬಂದಿ ಕೊರತೆ ತನಿಖೆ ಲೋಪಕ್ಕೆ ಕಾರಣ

07:34 AM Feb 17, 2019 | Team Udayavani |

ಹರಿಹರ: ಬಹುತೇಕ ಆರೋಪಿಗಳು ನ್ಯಾಯಾಲಯದಲ್ಲಿ ಬಿಡುಗಡೆ ಹೊಂದಲು ತನಿಖಾಧಿಕಾರಿಗಳ ಲೋಪವೇ ಕಾರಣ ಎಂದು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಎಸ್‌.ಶಂಕ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ರಾಜ್ಯ ವಕೀಲರ ಪರಿಷತ್‌, ತಾಲೂಕು ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆಯುತ್ತಿರುವ ಕಾನೂನು ಕಾರ್ಯಗಾರದಲ್ಲಿ ಶನಿವಾರ ಕ್ರಿಮಿನಲ್‌ ವಿಚಾರಣೆ ಕುರಿತು ಅವರು ಉಪನ್ಯಾಸ ನೀಡಿದರು.

ಪೊಲೀಸರ ತನಿಖಾ ವರದಿಯಲ್ಲಿನ ತಪ್ಪೊಪ್ಪಿಗೆಗಳು, ಸಾಕ್ಷಿದಾರರ ಹೇಳಿಕೆಗಳು ನ್ಯಾಯಾಲಯದಲ್ಲಿ ಮತ್ತೂಮ್ಮೆ ಋಜುವಾತಾಗಬೇಕಾಗುತ್ತದೆ. ಆಪರಾಧ ಕೃತ್ಯ ನಡೆದ ಸಮಯದಲ್ಲಿದ್ದ ಪ್ರತ್ಯಕ್ಷ ಸಾಕ್ಷೀದಾರರು, ಸಾಂದರ್ಭಿಕ ಸಾಕ್ಷ್ಯಾಗಳ ಆಧಾರದ ಮೇಲೆ ತನಿಖೆಯನ್ನು ನಿಖರಗೊಳಿಸಬೇಕಾಗುತ್ತದೆ.

ಅಪರಾಧ ಕೃತ್ಯಗಳ ಬಗ್ಗೆ ತನಿಖೆ ನಡೆಸುವ ಪೊಲೀಸರು ಕ್ರಿಮಿನಲ್‌ ಪ್ರೊಸೀಜರ್‌ ಕೋಡ್‌ ಬಗ್ಗೆ ಸೂಕ್ತ ಮಾಹಿತಿ ಹೊಂದಿರಬೇಕು. ಅಧಿಕ ಕಾರ್ಯಭಾರ, ಸಿಬ್ಬಂದಿ ಕೊರತೆಯಿಂದ ಬಹುತೇಕ ತನಿಖಾಧಿಕಾರಿಗಳು ಅವಸರವಸರದಲ್ಲಿ ಸಿದ್ಧಪಡಿಸುವ ಆರೋಪ ಪಟ್ಟಿ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ನಾಗರಾಜ್‌ ಹಲವಾಗಲು ಮಾತನಾಡಿ, ವಕೀಲ ವೃತ್ತಿ ದುಡಿಮೆಗೋಸ್ಕರ ಇದ್ದರೂ ದುಡಿಮೆಯೊಂದೇ ವಕೀಲರ ವೃತ್ತಿಯಲ್ಲ, ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಸದುದ್ದೇಶವೂ ಇದರ ಹಿಂದಿದೆ. ನ್ಯಾಯದಾನದ ಮೂಲಕ ಸಾಮಾಜಿಕ ನ್ಯಾಯ ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. 

Advertisement

ಮಧ್ಯಾಹ್ನ ನಡೆದ ವಿಚಾರಗೋಷ್ಠಿಗಳಲ್ಲಿ 2ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಅವಿನಾಶ್‌ ಚಿಂದು ಎಚ್‌., ನಿ ರ್ದಿಷ್ಟ ಪರಿಹಾರ ಅಧಿನಿಯಮ ವಿಷಯ ಕುರಿತು, ಹಿರಿಯ ವಕೀಲರಾದ ಎಚ್‌.ಎಂ. ಷಡಾಕ್ಷರಯ್ಯ ವಾದ-ಪ್ರತಿವಾದ ಪತ್ರಗಳ ಕುರಿತು ವಿಷಯ ಮಂಡಿಸಿದರು.

ವಕೀಲರಾದ ಮಲ್ಲಿಕಾರ್ಜುನ ಕಾಂಟ್ರ್ಯಾಕ್ಟರ್‌, ನಾಗರಾಜ್‌ ಬಿ., ಮಲ್ಲಿಕಾರ್ಜುನ ಕಲಾಲ್‌, ಎನ್‌.ಪಿ. ತಿಮ್ಮನಗೌಡ, ಕೆ.ಸಿ. ಬಸವರಾಜ್‌, ಜಿ.ಕೆ.ನಾಯ್ಕ, ಬಿ.ಮಂಜುನಾಥ್‌, ನಾಗರಾಜ್‌ ಕೆ.ವಿ., ಮಂಜುನಾಥ್‌ ಸಾಲಕಟ್ಟೆ, ಎನ್‌.ಸಾಕಮ್ಮ, ಸಾಹಿರಾ ಬಾನು, ಜಿ.ಎಚ್‌. ಭಾಗೀರಥಿ, ಸುಧಾ ಸಾಲಕಟ್ಟಿ, ಚೇತನಾ ಎ., ಸಿ.ಬಿ. ರಾಘವೇಂದ್ರ, ಸುರೇಶ್‌ ಕುಮಾರ್‌ ವೈ., ಕೆ.ಚಂದ್ರಾಚಾರಿ, ಬಾಲಾಜಿ ಸಿಂಗ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next