Advertisement

ಅಭಿವೃದ್ಧಿಯ ನೇತಾರನ ಸ್ಮಾರಕಕ್ಕೂ ದುಡ್ಡಿನ ಕೊರತೆ !

05:20 AM Jan 25, 2019 | |

ಸುರತ್ಕಲ್‌ : ದ.ಕ. ಜಿಲ್ಲೆಯ ಮತ್ತು ಕರಾವಳಿಯ ಅಭಿವೃದ್ಧಿಯ ಹರಿಕಾರ ದಿ| ಯು. ಶ್ರೀನಿವಾಸ ಮಲ್ಯ ಅವರ ಸವಿ ನೆನಪಿನಲ್ಲಿ ಸುರತ್ಕಲ್‌ನಲ್ಲಿ ನಿರ್ಮಿಸಲಾಗುತ್ತಿರುವ ಸ್ಮಾರಕ ಭವನದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಅನುದಾನಕ್ಕಾಗಿ ನಿರೀಕ್ಷಿಸಲಾಗುತ್ತಿದೆ.

Advertisement

ಮಲ್ಯ ಸ್ಮಾರಕ ಕಟ್ಟಡವು ಟ್ರಸ್ಟ್‌ ನಿರ್ವಹಿಸುತ್ತಿದ್ದು ಅಧ್ಯಕ್ಷ ವೈ. ರಮಾನಂದ ರಾವ್‌ ನೇತೃತ್ವದಲ್ಲಿ ಸದಸ್ಯರ ಮನವಿ, ಓಡಾಟದ ಬಳಿಕ ರಾಜ್ಯಸಭಾ ಸದಸ್ಯರಾಗಿದ್ದ ಆಸ್ಕರ್‌ ಫೆರ್ನಾಂಡಿಸ್‌ ಅವರ 20 ಲಕ್ಷ ರೂ. ಅನುದಾನದಲ್ಲಿ ಗೋಡೆ, ಶೀಟು ಹಾಕಲಾಗಿತ್ತು. ಆದರೆ ಬಳಿಕ ಅನುದಾನ ಬಿಡುಗಡೆಗೆ ವಿಳಂಬವಾದ ಕಾರಣ ಮಲ್ಯ ಸ್ಮಾರಕ ಭವನ ಒಂದು ಹಂತದಲ್ಲಿ ಪಾಳು ಬಿದ್ದಿತ್ತು. ಈ ಹಿಂದೆ ಸರಕಾರದ ಅನು ದಾನದಿಂದ ನಿರ್ಮಿಸಲಾದ ಕಟ್ಟಡದ ಕಬ್ಬಿ ಣದ ಸರಳುಗಳು ಸತತ ಗಾಳಿ ಮಳೆಗೆ ತುಕ್ಕು ಹಿಡಿಯುತ್ತಿದ್ದರೆ, ಇತ್ತ ಕಿಟಿಕಿ ಬಾಗಿ ಲುಗಳು, ಗಾಜುಗಳು ಪುಡಿಯಾಗಿ ಹೋಗಿತ್ತು. ಭವನದ ಸುತ್ತ ಪೊದೆಗಿಡಗಳು ಬೆಳೆದು ಸಾಧನೆಯ ಮೇರು ವ್ಯಕ್ತಿ ಮಲ್ಯ ರನ್ನೇ ಅಣಕಿಸುವಂತಿತ್ತು.

ಆದರೆ ಮತ್ತೆ 2017ರಲ್ಲಿ ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕ್ಷೇತ್ರದ ಹಿಂದಿನ ಶಾಸಕ ಮೊದಿನ್‌ ಬಾವಾ ನೇತೃತ್ವ ದಲ್ಲಿ ಟ್ರಸ್ಟ್‌ ಸದಸ್ಯರು ಭೇಟಿ ಮಾಡಿ, ಸತತ ಮನವಿ ಮಾಡಿದ ಮೇರೆಗೆ ಸರಕಾರ ಒಂದು ಕೋಟಿ ರೂ. ಬಿಡುಗಡೆಗೊಳಿಸಿತ್ತು. 2018ರಲ್ಲಿ ಅರ್ಧ ಭಾಗ ಅಂದರೆ 50 ಲಕ್ಷ ರೂ. ಬಿಡುಗಡೆಯಾಗಿ ದುಸ್ಥಿತಿಯಲ್ಲಿದ್ದ ಕಟ್ಟಡವನ್ನು ಸುಸ್ಥಿಗೆ ತರುವಲ್ಲಿ ಸಾಧ್ಯವಾಯಿತು. ಆದರೆ ಇದೀಗ ಸಭಾಂಗಣ ನಿರ್ಮಿಸಲಾಗಿದ್ದು , ನೆಲಕ್ಕೆ ಮಾರ್ಬಲ್‌ ಹಾಕಲಾಗಿದೆ. ಅನುದಾನದ ಕೊರತೆ ಯಿಂದ ಬಾಗಿಲು ನಿರ್ಮಿಸದೆ ಹಾಗೆ ಯೇ ಬಿಟ್ಟಿರುವುದರಿಂದ 50 ಲಕ್ಷ ರೂ. ಕಾಮಗಾರಿ ಪೋಲಾಗುವ ಆತಂಕ ಎದು ರಾಗಿದೆ. ಕಾಮಗಾರಿ ಸ್ಥಗಿತ ಗೊಂಡಿದ್ದು ಮತ್ತೆ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ. ಉಳಿದ 50 ಲಕ್ಷ ರೂ.ಬಿಡುಗಡೆಯಾಗಿಲ್ಲ. ಮಲ್ಯ ಸ್ಮಾರಕ ಭವನ ಪೂರ್ಣಗೊಳ್ಳಲು ಕನಿಷ್ಠ 2 ಕೋಟಿ ರೂ. ಅಗತ್ಯವಿದೆ.

ಮಲ್ಯ ಸ್ಮಾರಕ ಭವನದಲ್ಲಿ ಏನೇನಿದೆ?
ಅಂದಾಜು 3 ಕೋ.ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ ಭವನವು ಮಿನಿ ಟೌನ್‌ ಹಾಲ್‌ ಹಾಗೂ ಸೆಮಿನಾರ್‌ ಹಾಲ್‌ನ್ನು ಒಳಗೊಂಡಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ರಂಥಾಲಯದ ಯೋಜನೆ ರೂಪಿಸ ಲಾಗಿದೆ. ಸಾಂಸ್ಕೃತಿಕ ಹಾಗೂ ಇತರ ಕಾರ್ಯಕ್ರಮಗಳ ಆಯೋಜನೆಗೆ ಸಾಧ್ಯವಿರುವಂತೆ ಸಭಾಂಗಣವಿದೆ. ಕನಿಷ್ಠ ಐನೂರು ಜನರು ಕಾರ್ಯಕ್ರಮ ವೀಕ್ಷಿಸುವ ಅವಕಾಶವಿದೆ.

ಡಿಸಿ ಜತೆ ಚರ್ಚಿಸುವೆ
ಮಲ್ಯ ಸ್ಮಾರಕ ಭವನದ ಕಟ್ಟಡ ಪೂರ್ಣಗೊಳಿಸಲು ನಾನು ಪ್ರಯತ್ನಿಸುತ್ತೇನೆ. ಜಿಲ್ಲಾಧಿಕಾರಿಗಳ ಬಳಿ 50 ಲಕ್ಷ ರೂ. ಅನುದಾನ ಉಳಿಕೆಯಾಗಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ . ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸುವೆ.
– ಡಾ| ವೈ. ಭರತ್‌ ಶೆಟ್ಟಿ, ಶಾಸಕರು

Advertisement

ಸೂಕ್ತ ಕ್ರಮ ಕೈಗೊಳ್ಳಿ
ರಂಗ ಮಂದಿರ ನಿರ್ಮಾಣಕ್ಕೆ ನಮ್ಮ ಟ್ರಸ್ಟ್‌ ಸತತ ಪ್ರಯತ್ನ ಮಾಡುತ್ತಲೇ ಇದೆ. ಈಗಾಗಲೇ ಸರಕಾರದಿಂದ ದೊಡ್ಡ ಮೊತ್ತ ಬಿಡುಗಡೆಯಾಗಿ ಕಾಮಗಾರಿಯೂ ಆಗಿದೆ. ಆದರೆ ಪೂರ್ಣಗೊಳಿಸದೆ ಕಟ್ಟಡ ಹಾಗೆಯೇ ಬಿಟ್ಟರೆ ಮತ್ತೆ ಹಾಳಾಗುವ ಸಾಧ್ಯತೆಯಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
– ವೈ. ರಮಾನಂದ ರಾವ್‌
ಟ್ರಸ್ಟ್‌ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next