Advertisement
ಹಗಲು ಹೊತ್ತಿನಲ್ಲಿ ವಾರಕ್ಕೆ ಮೂರು ದಿನ ಈ ರೈಲು ಕಾರವಾರದಿಂದ ಮಂಗಳೂರು-ಸುಬ್ರಹ್ಮಣ್ಯ, ಹಾಸನ ಮಾರ್ಗವಾಗಿ ಯಶವಂತಪುರಕ್ಕೆ ಸಂಚರಿಸುತ್ತಿದೆ. ಪ್ರಸ್ತುತ ಈ ರೈಲು ಒಂದು ಎಸಿ ಚೆಯರ್ ಕಾರ್ ಬೋಗಿ, 9 ದ್ವಿತೀಯ ದರ್ಜೆ ರಿಸರ್ವೇಶನ್ ಬೋಗಿ, 6 ಸಾಮಾನ್ಯ ಬೋಗಿ ಹಾಗೂ 2 ಎಸ್‌ಎಲ್‌ಆರ್ (ಗಾರ್ಡ್) ಬೋಗಿಗಳನ್ನು ಹೊಂದಿವೆ. ಅಲ್ಲದೆ, ಈ ರೈಲಿನ ದ್ವಿತೀಯ ದರ್ಜೆ ರಿಸರ್ವೇಶನ್‌ನಲ್ಲಿ 2 ಬೋಗಿ ಕಡಿತಗೊಳಿಸಿ 7ಕ್ಕೆ ಇಳಿಸಲಾಗಿದೆ. ಸಾಮಾನ್ಯ ಬೋಗಿಗಳ ಪೈಕಿಯೂ 1 ಬೋಗಿ ಕಡಿತಗೊಳಿಸಲಾಗಿದ್ದು, ಆ ಮೂಲಕ ಅದರ ಸಂಖ್ಯೆಯನ್ನು 6ಕ್ಕೆ ಇಳಿಸಲಾಗಿದೆ. ಈ ಬದಲಾವಣೆಯೂ ಎ. 10ರಿಂದಲೇ ಜಾರಿಗೆ ಬಂದಿರುವುದಾಗಿ ನೈಋತ್ಯ ರೈಲ್ವೇ ವಲಯ ತಿಳಿಸಿದೆ.
ಬೋಗಿಗಳನ್ನು ಕಡಿತಗೊಳಿಸಿರುವುದಕ್ಕೆ ನೈಋತ್ಯ ರೈಲ್ವೇ ಕಾರಣ ನೀಡಿಲ್ಲ. ಆದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಆಗಿರುವುದರಿಂದಲೇ ಬೋಗಿಗಳನ್ನು ಕಡಿತಗೊಳಿಸಲು ಕಾರಣ ಎನ್ನಲಾಗಿದೆ. ಈಗ ಈ ರೈಲಿನಲ್ಲಿ ಸುಬ್ರಹ್ಮಣ್ಯದವರೆಗೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿರುತ್ತಾರೆ. ಶ್ರವಣಬೆಳಗೊಳ ಮಾರ್ಗ ಬಳಕೆಗೆ ಆಗ್ರಹ
ಕಾರವಾರ- ಯಶವಂತಪುರ- ಕಾರವಾರ (16515/16516) ರೈಲು ಗಾಡಿಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವ ಮೂಲಕ ಶ್ರವಣಬೆಳಗೊಳ ಮಾರ್ಗವಾಗಿ ಓಡಿಸಬೇಕು. ಆಗ ಪ್ರಯಾಣದ ಅವಧಿಯು ಕಡಿಮೆಯಾಗುತ್ತದೆ ಎನ್ನುವುದು ಕರಾವಳಿ ಭಾಗದ ಜನತೆಯ ಒತ್ತಾಸೆಯಾಗಿದೆ.
Related Articles
ಈ ರೈಲು ಕಾರವಾರದಿಂದ ಬೆಳಗ್ಗೆ 5.30ಕ್ಕೆ ಹೊರಟು 10.55ಕ್ಕೆ ಮಂಗಳೂರಿನ ಕಂಕನಾಡಿ ಜಂಕ್ಷನ್ ತಲುಪುತ್ತದೆ. ಅನಂತರ 11.10ಕ್ಕೆ ಅಲ್ಲಿಂದ ನಿರ್ಗಮಿಸಿ ರಾತ್ರಿ 10 ಗಂಟೆಗೆ ಯಶವಂತಪುರ ತಲುಪುತ್ತದೆ. ಮಂಗಳವಾರ, ಗುರುವಾರ ಶನಿವಾರ ಸಂಚರಿಸುತ್ತದೆ.
Advertisement
ಅದೇ ರೀತಿ, ಯಶವಂತ ಪುರದಿಂದ ಮತ್ತೂಂದು ರೈಲು ಮುಂಜಾನೆ 6.30ಕ್ಕೆ ಹೊರಟು ಸಂಜೆ 5.40ಕ್ಕೆ ಕಂಕನಾಡಿ ತಲುಪುತ್ತ¤ದೆ. ಅಲ್ಲಿಂದ ಅದು 6 ಗಂಟೆಗೆ ಹೊರಟು ರಾತ್ರಿ 11 ಗಂಟೆಗೆ ಕಾರವಾರ ತಲುಪುತ್ತದೆ. ವಾರದಲ್ಲಿ ಈ ರೈಲು ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸಂಚರಿಸುತ್ತದೆ.
ಈ ವೇಳಾಪಟ್ಟಿ ಕರಾವಳಿ ಪ್ರಯಾಣಿಕರಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂಬ ಬಗ್ಗೆ ದೂರುಗಳು ಹಲವು ತಿಂಗಳಿಂದ ಕೇಳಿಬರುತ್ತಿವೆ. ಕಾರವಾರದಿಂದ ಬೆಳಗ್ಗೆ 5.30ಕ್ಕೆ ಹೊರಟರೆ ಯಶವಂತಪುರಕ್ಕೆ ತಲುಪುವಾಗ ರಾತ್ರಿ 10 ಗಂಟೆಯಾಗುತ್ತದೆ. ಅಲ್ಲಿಂದ ಮತ್ತೆ ಬಸ್‌ನಲ್ಲಿ ಅಥವಾ ಇತರ ವಾಹನಗಳಲ್ಲಿ ಬೇರೆ ಕಡೆಗಳಿಗೆ ಹೋಗುವುದಕ್ಕೆ ತೊಂದರೆಯಾಗುತ್ತದೆ. ಇದೇ ರೀತಿ ಬೆಂಗಳೂರಿನಿಂದ ಬೆಳಗ್ಗೆ 6.30ಕ್ಕೆ ಹೊರಟು ಕಂಕನಾಡಿ ಜಂಕ್ಷನ್‌ಗೆ ಬರುವಾಗ ಸಂಜೆ 5.30 ಆಗುತ್ತದೆ. ಮತ್ತೆ ಅದು ಕಾರವಾರ ತಲುಪುವಾಗಲೂ ರಾತ್ರಿ 11 ಗಂಟೆಯಾಗುತ್ತದೆ. ಅಲ್ಲಿಂದಲೂ ಬೇರೆ ಊರುಗಳಿಗೆ ಪ್ರಯಾಣಿಸುವುದಕ್ಕೆ ಸೂಕ್ತ ಬಸ್ ಸೌಲಭ್ಯಗಳಿಲ್ಲ.
ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೂ ಈ ರೀತಿಯ ವೇಳಾಪಟ್ಟಿ ಹೊಂದಿಕೆಯಾಗುತ್ತಿಲ್ಲ. ಅದರಲ್ಲಿಯೂ ಈ ರೈಲು ಅರಸೀಕೆರೆ ಮಾರ್ಗವಾಗಿ ಸುತ್ತಿ ಬಳಸಿಕೊಂಡು ಯಶವಂತಪುರ ತಲುಪಲು ಸುಮಾರು 11 ತಾಸುಗಳು ಬೇಕಾಗುತ್ತವೆ.