Advertisement
ರಾಜ್ಯ, ಕೇಂದ್ರ ಸರ್ಕಾರಗಳು ಸ್ವಚ್ಛ ಭಾರತ, ರಸ್ತೆ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ಚರಂಡಿ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳಿಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದ್ದರೆ ನವಲಕಲ್ಲು ಗ್ರಾಮದಲ್ಲಿ ಈ ಯಾವುದೇ ಯೋಜನೆಗಳು ಸದ್ಭಳಕೆಯಾಗದ್ದರಿಂದ ಗ್ರಾಮಗಳು ಸಮಸ್ಯೆಗಳ ಆಗರವಾಗಿವೆ.
Related Articles
Advertisement
ಶೌಚಾಲಯ ಬಿಲ್ ಬಾಕಿ: ಗ್ರಾಮದಲ್ಲಿ ಕೆಲವರು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಇವರಿಗೆ ಸರ್ಕಾರದ ಸಹಾಯಧನ ನೀಡದ್ದರಿಂದ ಪ್ರತಿದಿನ ಪಂಚಾಯತಿಗೆ ಅಲೆಯುವಂತಾಗಿದೆ. ಹೀಗಾಗಿ ಕೆಲವರು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಹಿಂದೇಟು ಹಾಕುವಂತಾಗಿದೆ.
ಇನ್ನು ಅಭಿವೃದ್ಧಿ ಮಾಡಬೇಕಾದ ಪಂಚಾಯತಿ ಸದಸ್ಯರೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂಬ ಹೇಳಿಕೆ ನೀಡುತ್ತಿರುವುದು ವಿಪರ್ಯಾಸವೇ ಸರಿ. ಕಣ್ಣು ಮುಂದೆಯೇ ಸಮಸ್ಯೆ ಕಂಡರೂ ಜನಪ್ರತಿನಿಧಿಗಳು ಸುಮ್ಮನಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದು ಇದರಿಂದ ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿದೆ.ಜಾಕೀರ್, ಗ್ರಾಮಸ್ಥ ನವಲಕಲ್ಲು ಗ್ರಾಮದಲ್ಲಿ ಒಟ್ಟು 2000ಕ್ಕೂ ಹೆಚ್ಚು ಗ್ರಾಮಸ್ಥರಿದ್ದು, 6 ಜನ ಪಂಚಾಯತಿ ಸದಸ್ಯರನ್ನು ಹೊಂದಿದೆ.