Advertisement
ವಿಶೇಷ ತಟ್ಟಿರಾಯಇಲ್ಲಿನ 2 ತಟ್ಟಿರಾಯಗಳು ಜಿಲ್ಲೆಯಲ್ಲಿ ಹೆಸರುವಾಸಿಯಾಗಿವೆ. ಇವುಗಳನ್ನು ಗಜಕರ್ಣ, ಘಂಟಾಕರ್ಣ ಎಂದು ಕರೆಯ ಲಾಗುತ್ತಿದೆ. ಕೊಡಿ ಹಬ್ಬದ ರಥೋತ್ಸವ ಸಹಿತ ದೇಗುಲದ ವಿಶೇಷ ಕಾರ್ಯಕ್ರಮಗಳಲ್ಲಿ ತಟ್ಟಿರಾಯನ ಪಾತ್ರ ಮಹತ್ವವಾದುದು.
ಕೋಟಿಲಿಂಗೇಶ್ವರ ದೇಗುಲ ಸಹಿತ ತೆಂಕು ಪೇಟೆ ಹಾಗೂ ಬಡಗು ಪೇಟೆಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ದೀಪಾಲಂಕಾರಗೊಳಿಸಲಾಗಿದ್ದು ಅಂಗಡಿ ಮುಂಗಟ್ಟುಗಳನ್ನು ವಿಶೇಷ ದೀಪಗಳಿಂದ ಅಲಂಕರಿಸಲಾಗಿದೆ. ಕೊಡಿ ಹಬ್ಬದ ವೈಭವಕ್ಕೆ ಅಲಂಕೃತಗೊಂಡ ಪೇಟೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇಗುಲದ ಕಟ್ಟುಪಾಡು ಗಳನ್ನು ಮೆಲುಕು ಹಾಕುವಂತಿದೆ.
Related Articles
ಆನಾದಿ ಕಾಲದಿಂದಲೂ ಕೊಡಿ ಹಬ್ಬದ ಸಂದರ್ಭದಲ್ಲಿ ಇಲ್ಲಿನ ಜೋಗಿ ಸಮಾಜದ ಪ್ರಮುಖರು ಪಾರಂಪರಿಕವಾಗಿ ಮನೆ ಮನೆಗೆ ಅವರು ಆರಾ ಧಿಸುವ ದೇವರನ್ನು ಮುಂಡಾಸಿನ ನಡುವೆ ತಲೆಯಲ್ಲಿ ಹೊತ್ತುಕೊಂಡು ಪ್ರಸಾದವನ್ನು ಕೊಟ್ಟು ಕೊಡಿ ಹಬ್ಬಕ್ಕೆ ಆಮಂತ್ರಿಸುವ ಪದ್ಧªತಿ ಇತ್ತು. ಮನೆಯವರು ಅಕ್ಕಿ, ಧವಸ ಧಾನ್ಯ, ತೆಂಗಿನಕಾಯಿ ಕೊಟ್ಟು ಅವರನ್ನು ಗೌರವಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪದ್ಧತಿ ಕಡಿಮೆಯಾಗುತ್ತಿದೆ. ಇಂತಹ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿದಲ್ಲಿ ಅದಕ್ಕೊಂದು ಹೊಸ ಚೈತನ್ಯ ತುಂಬಿದಂತಾಗುವುದು.
Advertisement
ವಾಹನ ನಿಲುಗಡೆಗೆ ಆಯ್ದ ಪ್ರದೇಶಗಳ ನಿಗದಿಕೋಟೇಶ್ವರ: ಕೊಡಿಹಬ್ಬದ ಪ್ರಯುಕ್ತ ಜಾತ್ರೆಗೆ ಬರುವ ಭಕ್ತರಿಗೆ ಸುಗಮ ಸಂಚಾರಕ್ಕಾಗಿ ಆಯ್ದ ಕಡೆಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆಗೊಳಿಸಲಾಗಿದೆ. ಹಾಲಾಡಿ ಕಡೆಯಿಂದ ಬರುವ ವಾಹನಗಳಿಗೆ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜು ಮೈದಾನ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಗೇರಿ ಸೇತುವೆಯ ಹತ್ತಿರ ಹಾಗೂ ಅಂಶು ಡೆವಲಪರ್ಸ್ ಎದುರು ನಿಗದಿಪಡಿಸಲಾಗಿದೆ. ಉಡುಪಿ ಕಡೆಯಿಂದ ಬರುವ ವಾಹನ ಗಳಿಗೆ ಕಮಲಮ್ಮ ಕಲ್ಯಾಣ ಮಂಟಪದ ಬಳಿ, ಪದವಿಪೂರ್ವ ಕಾಲೇಜು ಹಿಂಭಾಗ, ರುದ್ರಭೂಮಿ ಬಳಿ ಇರುವ ರಾ.ಹೆದ್ದಾರಿಯ 2 ಬದಿ, ಕುಂದಾಪುರ ಕಡೆಯಿಂದ ಬರುವ ವಾಹನಗಳಿಗೆ ಅಂಕದಕಟ್ಟೆಯ ಸಹನಾ ಗ್ರೂಪ್ ಆಫ್ ಹೊಟೇಲ್‌ನ ಖಾಲಿ ಜಾಗ ಹಾಗೂ ಆರ್ಯ ಹೊಟೇಲ್ ಪಕ್ಕದಲ್ಲಿ ವ್ಯವಸ್ಥೆಗೊಳಿಸಲಾಗಿದೆ ಎಂದು ಕೋಟೇಶ್ವರ ಗ್ರಾ.ಪಂ. ಪ್ರಕಟನೆ ತಿಳಿಸಿದೆ. -ಡಾ| ಸುಧಾಕರ ನಂಬಿಯಾರ್