Advertisement

ಕೂಚಬಾಳ-ದೇಸಾಯಿ ಕಾರ್ಯ ಮಾದರಿ

07:52 PM Jun 22, 2021 | Team Udayavani |

ಮುದ್ದೇಬಿಹಾಳ: ಹಸಿದ ಹೊಟ್ಟೆಗೆ ಅನ್ನ ಕೊಟ್ಟವರನ್ನು ಉತ್ತರಕರ್ನಾಟಕದ ಜನ ಯಾವತ್ತಿಗೂ ಮರೆಯೊಲ್ಲ. ಕೊರೊನಾ ವಾರಿಯರ್‌ಗಳ ಕಷ್ಟಕ್ಕೆ ಸ್ಪಂದಿ ಸಿ ದಾಸೋಹಕ್ಕೆ ಹೊಸ ವ್ಯಾಖ್ಯಾನ ಬರೆದಿರುವ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಅವರ ಋಣವನ್ನು ಇಲ್ಲಿನ ಜನ ತೀರಿಸುತ್ತಾರೆ ಎಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು.

Advertisement

ವಿಬಿಸಿ ಮೈದಾನದಲ್ಲಿ ದೇಸಾಯಿ, ಕೂಚಬಾಳ ಸ್ನೇಹಿತರ ಬಳಗ ಸೋಮವಾರ ಏರ್ಪಡಿಸಿದ್ದ ಕಿಟ್‌ ವಿತರಣೆ, ಸಮಾರೋಪದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶರಣರ ಭೂಮಿಯಲ್ಲಿ ದವಸ-ಧಾನ್ಯ ದಾನ ಮಾಡುವಂಥದ್ದು ಅರ್ಥಪೂರ್ಣವಾದದ್ದು. ಅನುಭವ ಮಂಟಪದಲ್ಲಿ ಬಸವಣ್ಣನವರು ಸ್ಥಿರವಾಗಿ ನಿಂತು, ನಾಲತವಾಡದ ಶರಣರು ಮನೆ ಮನೆಗೆ ಹೋಗಿ ಹಿಟ್ಟು ಬೇಡಿ ದಾಸೋಹ ನಡೆಸಿದ
ಪುಣ್ಯಭೂಮಿಯಲ್ಲಿ ಚಲಿಸುವ ದಾಸೋಹ ಮಂಟಪವಾಗಿ ಇವರಿಬ್ಬರೂ ಸಂಚಲನ ಸೃಷ್ಟಿಸಿ ಇನ್ನೊಬ್ಬರಿಗೆ ಆದರ್ಶವಾಗುವ ಮಾದರಿ ಕಾರ್ಯ ಮಾಡಿದ್ದಾರೆ ಎಂದರು.

ತಾಳಿಕೋಟೆ ಖಾಸತೇಶ್ವರ ಮಠದ ಸಿದ್ದಲಿಂಗ ದೇವರು ಮಾತನಾಡಿ, ಈ ಭಾಗದ ಅಪರೂಪದ ನಕ್ಷತ್ರಗಳಾಗಿರುವ ದೇಸಾಯಿ, ಕೂಚಬಾಳರವರು ಖಾಸತೇಶ್ವರ ಮಠದ ಭಕ್ತರಾಗಿಯೇ ದಾಸೋಹ ಮಾಡಿದ್ದಾರೆ. ಇವರ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು. ಇದ್ದಾಗ ಒಳ್ಳೆ ಕೆಲಸ ಮಾಡುವುದೇ ಸಾಧನೆ. ಇಂಥ ಸಾಧಕರನ್ನು ಪ್ರೋತ್ಸಾಹಿಸಬೇಕು ಎಂದರು.

ಬಿಜೆಪಿ ಧುರೀಣ ಎಂ.ಎಸ್‌. ಪಾಟೀಲ ನಾಲತವಾಡ ಮಾತನಾಡಿ, ದೇಸಾಯಿ, ಕೂಚಬಾಳರವರು ಕಿಟ್‌ ವಿತರಣೆ ಆರಂಭಿಸಿದಾಗ ಮುಂದಿನ ಎಂಎಲ್‌ಎ ಆಗೋಕೆ ಹಿಂಗ್‌ ಮಾಡ್ತಿದ್ದಾರೆ ಎಂದು ಕೊಂಕು ನುಡಿದವರೇ ಹೆಚ್ಚು. ಆದರೆ ಇವರು ಅದ್ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ಬಾಗಲಕೋಟೆಯ ಹೃದ್ರೋಗ ತಜ್ಞ ಡಾ| ರಾಘವೇಂದ್ರ ಮುರಾಳ ಮಾತನಾಡಿದರು.

ಭೂನ್ಯಾಯ ಮಂಡಳಿ ಸದಸ್ಯ ಎಸ್‌.ಬಿ. ಚಲವಾದಿ, ಕಸಾಪ ಅಧ್ಯಕ್ಷ ಎಂ.ಬಿ. ನಾವದಗಿ, ಸಾನ್ನಿಧ್ಯ ವಹಿಸಿದ್ದ ಮಲ್ಲಿಕಾರ್ಜುನ ಶ್ರೀ, ಅನ್ನದಾನ ಭಾರತಿ ಅಪ್ಪಣ್ಣ ಶ್ರೀ, ಗುರುಶಾಂತವೀರ ಶಿವಾಚಾರ್ಯರು ಮಾತನಾಡಿ ದೇಸಾಯಿ, ಕೂಚಬಾಳರ ಕಾರ್ಯವನ್ನು ಶ್ಲಾಘಿಸಿದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್‌. ಮದರಿ, ಪುರಸಭೆ ಸದಸ್ಯ ಅಲ್ಲಾಭಕ್ಷ ಢವಳಗಿ, ವೀವಿವ ಸಂಸ್ಥೆ ಚೇರಮನ್‌ ಬಿ.ಸಿ. ಮೋಟಗಿ,
ವೈದ್ಯಾ ಧಿಕಾರಿ ಡಾ| ಅನಿಲಕುಮಾರ ಶೇಗುಣಸಿ, ಪುರಸಭೆ ಸಿಒ ಎಂ.ಬಿ. ಮಾಡಗಿ ವೇದಿಕೆಯಲ್ಲಿದ್ದರು. ಆರೋಗ್ಯ ಇಲಾಖೆ, ದಿ ಕರ್ನಾಟಕ ಕೋ ಆಪ್‌ಬ್ಯಾಂಕ್‌, ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ದೇಸಾಯಿ, ಕೂಚಬಾಳ ಅವರನ್ನು ಸನ್ಮಾನಿಸಲಾಯಿತು.

Advertisement

ಪುರಸಭೆ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಹೋಂಗಾರ್ಡ್‌, ಪೌರ ಕಾರ್ಮಿಕರು ಸೇರಿ 200ಕ್ಕೂ ಹೆಚ್ಚು ಜನರು 44 ವಸ್ತುಗಳುಳ್ಳ ಕಿಟ್‌ ಪಡೆದುಕೊಂಡರು. ಆರ್‌.ಎಸ್‌. ಪಾಟೀಲ ಕೂಚಬಾಳ ಸ್ವಾಗತಿಸಿದರು. ಸಿದ್ದು ಹೆಬ್ಟಾಳ, ಹೇಮಾ ಬಿರಾದಾರ ರೂಪಿಸಿದರು. ಪ್ರಭುಗೌಡ ದೇಸಾಯಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next