Advertisement

ಮಳೆಯಲ್ಲೇ ಪ್ರತಿಭಟಿಸಿದ ಅಡುಗೆ ಸಿಬ್ಬಂದಿ

02:59 PM Jul 15, 2022 | Team Udayavani |

ಚಿಂಚೋಳಿ: ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರ ಹೊರ ಸಂಪನ್ಮೂಲ ಸಂಸ್ಥೆಯ ಸಿಬ್ಬಂದಿಗಳ ಸಂಬಳ ಪಾವತಿಸುವಂತೆ ತಾಪಂ ಕಚೇರಿ ಎದುರು ಮಳೆಯಲ್ಲಿಯೇ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

Advertisement

ಮುಖಂಡ ಸಂಜೀವನ್‌ ಯಾಕಾಪುರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಹೊರ ಸಂಪನ್ಮೂಲ ಸಿಬ್ಬಂದಿಯಾಗಿ ಅಡುಗೆ ಸಹಾಯಕರು, ಅಡುಗೆಯವರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಿಂಗಳ 5ನೇ ತಾರಿಖೀನ ಒಳಗಾಗಿ ವೇತನ ಸರಿಯಾಗಿ ಕೊಡುತ್ತೇವೆ ಎಂದು ಸಂಸ್ಥೆಯವರು ಸಮಾಜ ಕಲ್ಯಾಣ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಆದರೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಂದು ವೇಳೆ ಅಡುಗೆಯವರು ಹಾಸ್ಟೆಲ್‌ಗ‌ಳಿಗೆ ಹಾಜರಾಗಿ ಅಡುಗೆ ಮಾಡದೇ ಇದ್ದರೆ ಮಕ್ಕಳು ಉಪವಾಸ ಇರುತ್ತಾರೆ ಎನ್ನುವ ಉದ್ದೇಶದಿಂದ ಅವರು ಮಳೆ, ಚಳಿ, ಬಿಸಿಲು ಎನ್ನದೇ ಅಡುಗೆ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಅವರ ಐದು ತಿಂಗಳ ವೇತನ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದರು ಎಲ್ಲ ಸಿಬ್ಬಂದಿಯೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಾಪಂ ಇಒ ಹಂಪಣ್ಣ ವೈ.ಎಲ್‌.ಗೆ ಸಲ್ಲಿಸಲಾಯಿತು. ತಾಪಂ ಸಿಬ್ಬಂದಿ ನಾಗೇಂದ್ರಪ್ಪ ಸುಲೇಪೇಟ, ಲಕ್ಷ್ಮಣ ರಾಠೊಡ, ವಿಜಯಕುಮಾರ ದಸ್ತಾಪುರ ಇನ್ನಿತರರಿದ್ದರು. ಪ್ರತಿಭಟನೆಯಲ್ಲಿ ಸಿಬ್ಬಂದಿಗಳಾದ ಮಾಪಣ್ಣ, ಜಗನ್ನಾಥ, ಶಾಂತಮ್ಮ ಕಾಮಾಕ್ಷಿ, ಆರತಿ, ಸೈದಾಬಿ, ಮಲಕಮ್ಮ, ಶಾಂತಿಬಾಯಿ, ಸೊನಿಬಾಯಿ, ರೋಹಿತಬಾಯಿ, ಧರ್ಮಿಬಾಯಿ, ಮುಖಂಡರಾದ ರವಿಶಂಕರರೆಡ್ಡಿ ಮುತ್ತಂಗಿ, ಸುರೇಂದ್ರ ಶಿವರೆಡ್ಡಿಪಳ್ಳಿ, ವಿಷ್ಣು ಮೂಲಗೆ ಇನ್ನಿತರಿರದ್ದರು.

Advertisement

Udayavani is now on Telegram. Click here to join our channel and stay updated with the latest news.

Next