Advertisement

ಅರಸು ನಂತರ ಪೂರ್ಣಾವಧಿ ಸಿಎಂ ನಾನೇ

08:15 AM Feb 24, 2018 | |

ವಿಧಾನಸಭೆ: ರಾಜ್ಯದಲ್ಲಿ ದೇವರಾಜ ಅರಸು ಅವರ ನಂತರ ಐದು ವರ್ಷ ಭರ್ತಿ ಮುಖ್ಯಮಂತ್ರಿಯಾಗಿ ಅವಧಿ ಪೂರೈಸುತ್ತಿರುವುದು ನಾನೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ರಾಜ್ಯದ ಜನತೆಯ ಆಶೀರ್ವಾದದಿಂದ ಐದು ವರ್ಷ ಅಧಿಕಾರ ನಡೆಸುವ ಅವಕಾಶ ನನಗೆ ದೊರೆತಿದೆ. ಇದು ನನಗೆ ಹೆಮ್ಮೆಯೂ ಸಹ ಎಂದು
ಹೇಳಿದರು. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಅವರ ನಂತರ ಹಣಕಾಸು ಸಚಿವನಾಗಿ 13ನೇ ಬಜೆಟ್‌ ಮಂಡಿಸಿರುವುದು ನಾನೇ. ಮುಖ್ಯಮಂತ್ರಿಯಾಗಿ ಆರನೇ ಬಜೆಟ್‌ ಮಂಡಿಸಿದ್ದೇನೆ. ರಾಜ್ಯದ ಸಮಗ್ರ ಅಭಿವೃದಿಟಛಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಈ ಬಗ್ಗೆ ಬಹಿರಂಗ ಚರ್ಚೆಗೂ ನಾನು ಸಿದ್ಧ ಎಂದು ಪುನರುಚ್ಚರಿಸಿದರು.

Advertisement

ವಿದಾಯ: ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವ ಪ್ರಾರಂಭದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಕೊನೆಯ ಅಧಿವೇಶನವಾದ್ದರಿಂದ ಎಲ್ಲರಿಗೂ ವಿದಾಯ ಹೇಳಿದರು. ಐದು ವರ್ಷ ಸುಗಮವಾಗಿ ಸರ್ಕಾರ ನಡೆಸಲು ಸಹಕರಿಸಿದ ಎಲ್ಲ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸದನ ಸುಸೂತ್ರವಾಗಿ ನಡೆಸಿದ ಸ್ಪೀಕರ್‌- ಉಪಾಧ್ಯಕ್ಷರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ವೇಗಕ್ಕೆ ತಕ್ಕಂತೆ ಕೆಲಸ ಮಾಡಿದ ಅಧಿಕಾರಿ ವರ್ಗಕ್ಕೂ ಅಭಿನಂದಿಸುತ್ತೇನೆಂದು
ಹೇಳಿದರು. ಇಲ್ಲಿರುವ ಎಲ್ಲ ಸದಸ್ಯರೂ ಟಿಕೆಟ್‌ ಸಿಕ್ಕರೆ ಗೆದ್ದು ಬನ್ನಿ ಎಂದು ಹಾರೈಸುತ್ತೇನೆ. ಎಷ್ಟು ಜನಕ್ಕೆ ಟಿಕೆಟ್‌ ಸಿಗುತ್ತೋ 
ಇಲ್ಲವೋ ಗೊತ್ತಿಲ್ಲ ಆದರೆ, ಟಿಕೆಟ್‌ ಸಿಕ್ಕವರು ಗೆದ್ದು ಬನ್ನಿ ಎಂದಾಗ ಸದನದಲ್ಲಿ ನಗೆ ಅಲೆ. ಆಗ, ಜೆಡಿಎಸ್‌ನ ಕೋನರೆಡ್ಡಿ ಏನನ್ನೋ ಹೇಳಲು ಎದ್ದುನಿಂತಾಗ, ನೀನು ಕೂತ್ಕೊಳಪ್ಪಾ, ನಿನಗೆ ಟಿಕೆಟ್‌ ಘೋಷಣೆ ಆಗೋಗಿದೆ ಎಂದು ಸುಮ್ಮನಾಗಿಸಿದರು.

ವರ್ಷದಲ್ಲಿ 60 ದಿನ ಅಧಿವೇಶನ ನಡೆಸಬೇಕೆಂದು ನಾವೇ ಕಾನೂನು ಮಾಡಿಕೊಂಡಿದ್ದೇವೆ. ಆದರೆ, ಅದು ಸಾಧ್ಯವಾಗಲಿಲ್ಲ. ಆದರೆ, 13 ನೇ ವಿಧಾನಸಭೆಯು 201 ದಿನ ಅಧಿವೇಶನ ನಡೆಸಿತ್ತು. 14 ನೇ ವಿಧಾನಸಭೆಯಲ್ಲಿ 241 ದಿನ ಅಧಿವೇಶನ ನಡೆಸಿದೆ. ಈ ವಿಚಾರದಲ್ಲಿ ಸ್ವಲ್ಪ ಸಮಾಧಾನ ಎಂದರು. ಇತ್ತೀಚಿನ ದಿನಗಳಲ್ಲಿ ಕಲಾಪಕ್ಕೆ ಸದಸ್ಯರ ಗೈರು ಹಾಜರಿ ಹೆಚ್ಚಾಗುತ್ತಿದ್ದು ಸಾರ್ವಜನಿಕ ವಲಯದಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕಲಾಪದಲ್ಲೂ ಗುಣಮಟ್ಟ ಕುಸಿಯುತ್ತಿದೆ ಎಂಬ ಮಾತಿದೆ. ಗುಣಮಟ್ಟ ಉತ್ತಮಗೊಳಿಸುವತ್ತ ನಮ್ಮ ಪ್ರಯತ್ನ ಇರಬೇಕು, ಕುಸಿಯಲು ಬಿಡಬಾರದು. ಇದು ಎಲ್ಲರ ಹೊಣೆಗಾರಿಕೆ. ದೇಶದಲ್ಲೇ ಕರ್ನಾಟಕ ಸಂಸದೀಯ ವ್ಯವಸ್ಥೆ ಮಾದರಿಯಾಗಿದೆ. ಇದನ್ನು ಮತ್ತಷ್ಟು ಎತ್ತರಕ್ಕೆ ಏರಿಸುವ ಕೆಲಸ ನಾವು ಮಾಡಬೇಕು ಎಂದು ತಿಳಿಸಿದರು. ಪರಿಷತ್‌ನಲ್ಲೂ ಮಧ್ಯಾಹ್ನದ ನಂತರ ಧನವಿನಿಯೋಗ ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸುತ್ತ ಐದು ವರ್ಷ ಮುಖ್ಯಮಂತ್ರಿ ಆಗಿ ಕೆಲಸ ಮಾಡಲು ಸಹಕರಿಸಿದ ಸಭಾಪತಿ, ಉಪಸಭಾಪತಿ, ಸದಸ್ಯರು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next