Advertisement
2023 ರ ಮೇ. 5 ರಂದು ʼಕೇರಳ ಸ್ಟೋರಿʼ ಸಿನಿಮಾ ರಿಲೀಸ್ ಆಗಿತ್ತು. ಆರಂಭಿಕ ದಿನಗಳಲ್ಲಿ ಅಷ್ಟು ಸದ್ದು ಮಾಡದ ಸಿನಿಮಾ ವಾರದ ಬಳಿಕ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡಿತ್ತು.
Related Articles
Advertisement
ಓಟಿಟಿ ಸ್ಟ್ರೀಮಿಂಗ್ ಯಾವ ಓಟಿಟಿ ಸಂಸ್ಥೆಯೂ ಮುಂದೆ ಬಾರದೆ ಸಿನಿಮಾ ತಂಡ ಪರದಾಡಿತ್ತು. ಅಂತಿಮವಾಗಿ ಜೀ5 ಸಿನಿಮಾದ ಜಾಗತಿಕ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡು, ʼದಿ ಕೇರಳ ಸ್ಟೋರಿʼ ಫೆ. 16 ರಂದು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಓಟಿಟಿಯಲ್ಲಿ ರಿಲೀಸ್ ಮಾಡಿತ್ತು.
ಇದೀಗ ಇದೇ ಮೊದಲ ಬಾರಿಗೆ ವಿವಾದಿತ ʼಕೇರಳ ಸ್ಟೋರಿʼ ಸಿನಿಮಾ ಕಿರುತೆರೆಯಲ್ಲಿ ಪ್ರಿಮಿಯರ್ ಆಗಲಿದೆ. ಆದರೆ ಈ ಸಿನಿಮಾ ಪ್ರದರ್ಶನಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಚಿತ್ರದ ಟೆಲಿವಿಷನ್ ಪ್ರೀಮಿಯರ್ ಇಂದು(ಏ.5 ರಂದು) ರಾತ್ರಿ 8 ಗಂಟೆಗೆ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದು ಕೇರಳ ರಾಜ್ಯ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿನಿಮಾವನ್ನು ದೂರದರ್ಶನ ಪ್ರಸಾರ ಮಾಡುವ ನಿರ್ಧಾರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಿಜೆಪಿ-ಆರ್‌ಎಸ್‌ಎಸ್ ಒಗ್ಗೂಡಿ ಸಾರ್ವತ್ರಿಕ ಚುನಾವಣೆಗಳ ಮುಂಚಿತವಾಗಿ ಕೋಮು ಉದ್ವಿಗ್ನತೆಯನ್ನು ಉಲ್ಬಣಗೊಳಿಸಲು ಪ್ರಯತ್ನಿಸುವ ಚಲನಚಿತ್ರವನ್ನು ಪ್ರದರ್ಶಿಸಲು ರಾಷ್ಟ್ರೀಯ ಸುದ್ದಿ ಪ್ರಸಾರಕರು ಪ್ರಚಾರದ ಯಂತ್ರವಾಗಬಾರದು ಎಂದು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ʼಕೇರಳ ಸ್ಟೋರಿʼ ಯಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ, ದೇವದರ್ಶಿನಿ ಮತ್ತು ವಿಜಯ್ ಕೃಷ್ಣ ಮುಂತಾದವರು ನಟಿಸಿದ್ದಾರೆ. ಸುದೀಪ್ತೋ ಸೇನ್ ನಿರ್ದೇಶನ ಮಾಡಿದ್ದು,ವಿಪುಲ್ ಅಮೃತಲಾಲ್ ಶಾ ಅವರು ನಿರ್ಮಿಸಿದ್ದಾರೆ.