Advertisement

ʼದಿ ಕೇರಳ ಸ್ಟೋರಿʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್?‌: ಈ ದಿನ ಬಿಡುಗಡೆ?  

11:56 AM May 08, 2023 | Team Udayavani |

ಮುಂಬಯಿ: ಸುದೀಪ್ತೋ ಸೇನ್ ನಿರ್ದೇಶನದ ʼದಿ ಕೇರಳ ಸ್ಟೋರಿʼ ಸಿನಿಮಾ ದೇಶದೆಲ್ಲೆಡೆ ಸದ್ಯ ಸಂಚಲನ ಸೃಷ್ಟಿಸಿದೆ. ವಿವಾದದಿಂದಲೇ ಒಂದಷ್ಟು ಸುದ್ದಿಯಾಗಿರುವ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಕೋಟಿಗೂ ಮೀರಿದ ಕಮಾಯಿ ಮಾಡಿದೆ.

Advertisement

ಕೇರಳದ ಹಿಂದೂ ಯುವತಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಐಸಿಸ್‌ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಕುರಿತಾದ ಕಥೆಯನ್ನು ಸಿನಿಮಾ ಒಳಗೊಂಡಿದೆ. 32 ಸಾವಿರ ಭಾರತೀಯ ಮಹಿಳೆಯರು ಈ ರೀತಿ ಮತಾಂತರಗೊಂಡು, ಭಯೋತ್ಪಾದನ ಸಂಘಟನೆಗೆ ಸೇರಿದ್ದಾರೆ ಎಂದು ಮೊದಲು ಚಿತ್ರತಂಡ ಟೀಸರ್‌ ನಲ್ಲಿ ಹೇಳಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಅದು 3 ಭಾರತೀಯ ಮಹಿಳೆಯರು ಎಂಬುದಾಗಿ ಬದಲಾವಣೆ ಮಾಡಿತ್ತು.

ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ʼದಿ ಕೇರಳ ಸ್ಟೋರಿʼ ಥಿಯೇಟರ್‌ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾದ ಓಟಿಟಿ ರಿಲೀಸ್‌ ಡೇಟ್‌ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ.

ಸಿನಿಮಾ ರಿಲೀಸ್‌ ವೇಳೆ ಸಿನಿಮಾದ ಓಟಿಟಿ ರೈಟ್ಸ್‌ ಬಗ್ಗೆ ಚಿತ್ರತಂಡ ಹೇಳಿರಲಿಲ್ಲ.ಜೀ ನೆಟವರ್ಕ್‌ ನೊಂದಿಗೆ ಸಿನಿಮಾ ತಂಡದ ಮಾತುಕತೆ ಅಂತಿಮವಾಗಿದ್ದು, ಈ ಕುರಿತ ಅಧಿಕೃತ ಘೋಷಣೆ ಮಾಡುವುದು ಮಾತ್ರ ಬಾಕಿಯಿದೆ ಎಂದು ಒಟಿಟಿ ಪ್ಲೇ ವರದಿ ತಿಳಿಸಿದೆ.

ಸಿನಿಮಾ ರಿಲೀಸ್‌ ಆದ 60 ದಿನಗಳ ಬಳಿಕ ಓಟಿಟಿಯಲ್ಲಿ ರಿಲೀಸ್‌ ಆಗಲಿದ್ದು, ಜುಲೈ 7 ರಂದು ಓಟಿಟಿಯಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎಂದು ವರದಿ ತಿಳಿಸಿದೆ.

Advertisement

ಆದರೆ ಈ ಬಗ್ಗೆ ಸಿನಿಮಾ ತಂಡ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next