Advertisement

2022 ರಲ್ಲಿ ದಕ್ಷಿಣ ಭಾರತದ ಸಿನಿಮಾಗಳೇ ಟಾಪ್‌: ಐಎಂಡಿಬಿ ಪಟ್ಟಿ ರಿಲೀಸ್;ಯಾರಿಗೆಷ್ಟು ಸ್ಥಾನ?

04:34 PM Dec 14, 2022 | Team Udayavani |

ಮುಂಬಯಿ: ಐಎಂಡಿಬಿ 2022 ರಲ್ಲಿ ತೆರೆಕಂಡು ಪ್ರೇಕ್ಷಕರನ್ನು ಸೆಳೆದ ಟಾಪ್‌ 10 ಇಂಡಿಯನ್‌ ಸಿನಿಮಾಗಳ ಪಟ್ಟಿಯನ್ನು ರಿಲೀಸ್‌ ಮಾಡಿದೆ. ಎಸ್.ಎಸ್. ರಾಜಮೌಳಿ ಅವರ ʼಆರ್‌ ಆರ್ ಆರ್‌ʼ , ವಿವೇಕ್‌ ಅಗ್ನಿಹೋತ್ರಿ ಅವರ ʼದಿ ಕಾಶ್ಮೀರ್‌ ಫೈಲ್ಸ್‌ʼ ಸೇರಿದಂತೆ ಟಾಪ್‌ 10 ಸಿನಿಮಾಗಳು ಈ ವರ್ಷ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಐಎಂಡಿಬಿಯಲ್ಲಿ ಈ ಸಿನಿಮಾಗಳಿಗೆ ಹೆಚ್ಚು ರೇಟಿಂಗ್‌ ಕೊಟ್ಟಿದ್ದಾರೆ.

Advertisement

ಈ ಬಾರಿಯ ವಿಶೇಷವೆಂದರೆ ಇಡೀ ಬಾಲಿವುಡ್‌ ರಂಗದಲ್ಲಿ ಕೇವಲ 1 ಸಿನಿಮಾ ಮಾತ್ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ರಣ್ಬೀರ್‌ ಕಪೂರ್‌ ಅವರ ʼಬ್ರಹ್ಮಾಸ್ತ್ರ” ಪಾರ್ಟ್‌ -1 ಈ ಸ್ಥಾನದಲ್ಲಿ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.

ಇನ್ನೊಂದು ವಿಶೇಷವೆಂದರೆ ದಕ್ಷಿಣ ಭಾರತದ ಸಿನಿಮಾಗಳೇ ಹೆಚ್ಚಾಗಿ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಕನ್ನಡದ ʼಕೆಜಿಎಫ್ -2ʼ, ʼಕಾಂತಾರʼ, ʼ777 ಚಾರ್ಲಿʼ ಸಿನಿಮಾಗಳು ಸೇರಿದಂತೆ ಕಮಲ್‌ ಹಾಸನ್‌ ಅವರ ʼವಿಕ್ರಮ್‌ʼ ದುಲ್ಖರ್‌ ಸಲ್ಮಾನ್‌ ಅವರ ʼಸೀತಾ ರಾಮಂʼ ,ʼ ಪೊನ್ನಿಯಿನ್ ಸೆಲ್ವನ್ʼ ಸಿನಿಮಾ ಐಎಂಡಿಬಿ ಹೆಚ್ಚು ರೇಟಿಂಗ್‌ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಐದು ವರ್ಷದ ಬಳಿಕ ಚಿತ್ರ ರಂಗಕ್ಕೆ ಕಂಬ್ಯಾಕ್‌ ಮಾಡಿದ ಐಶ್ವರ್ಯ ರೈ ಹಾಗೂ ಕಮಲ್‌ ಹಾಸನ್‌ ಅವರ ಚಿತ್ರಗಳು ಸೂಪರ್‌ ಹಿಟ್‌ ಆಗಿ ಈ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ.

ಐಎಂಡಿಬಿ 2022 ರ ಟಾಪ್‌ 10 ಸಿನಿಮಾಗಳು:

  1. ಆರ್‌ ಆರ್‌ ಆರ್‌ ( ನಿರ್ದೇಶಕ: ಎಸ್‌ ಎಸ್‌ ರಾಜಮೌಳಿ)
  2. ದಿ ಕಾಶ್ಮೀರ್‌ ಫೈಲ್ಸ್‌ ( ನಿರ್ದೇಶಕ: ವಿವೇಕ್‌ ಅಗ್ನಿಹೋತ್ರಿ)
  3. ಕೆಜಿಎಫ್‌ ಚಾಪ್ಟರ್‌ -2 (ನಿರ್ದೇಶಕ : ಪ್ರಶಾಂತ್‌ ನೀಲ್)‌
  4. ವಿಕ್ರಮ್‌ ( ನಿರ್ದೇಶಕ: ಲೋಕೇಶ್‌ ಕನಕರಾಜ್)‌
  5. ಕಾಂತಾರ ( ನಿರ್ದೇಶಕ: ರಿಷಬ್‌ ಶೆಟ್ಟಿ)
  6. ರಾಕೆಟ್ರಿ: ದಿ ನಂಬಿ ಎಫೆಕ್ಟ್ ( ನಿರ್ದೇಶಕ: ಆರ್.‌ ಮಾಧವನ್)‌
  7. ಮೇಜರ್ ( ನಿರ್ದೇಶಕ: ಶಶಿ ಕಿರಣ್ ಟಿಕ್ಕಾ)
  8. ಸೀತಾ ರಾಮಂ ( ನಿರ್ದೇಶಕ: ಹನು ರಾಘವಪುಡಿ
  9. ಪೊನ್ನಿಯಿನ್ ಸೆಲ್ವನ್ʼ ಪಾರ್ಟ್‌ -2 ( ನಿರ್ದೇಶಕ: ಮಣಿರತ್ನಂ
  10. 777 ಚಾರ್ಲಿ ( ನಿರ್ದೇಶಕ: ಕಿರಣ್‌ ರಾಜ್‌ ಕೆ)

ಇನ್ನು ಐಎಂಡಿಬಿ ಅತೀ ಹೆಚ್ಚು ರೇಟಿಂಗ್‌ ಪಡೆದ ವೆಬ್‌ ಸೀರಿಸ್‌ ಗಳ ಪಟ್ಟಿಯನ್ನು ಮಾಡಿದೆ.

Advertisement

ಐಎಂಡಿಬಿ 2022 ರ ಟಾಪ್‌ 10 ವೆಬ್‌ ಸೀರಿಸ್‌ ಗಳು :

  1. ಪಂಚಾಯತ್ (ಅಮೇಜಾನ್‌ ಪ್ರೈಮ್)‌
  2. ದಿಲ್ಲಿ ಕ್ರೈಮ್ಸ್‌ ( ನೆಟ್‌ ಫ್ಲಿಕ್ಸ್)‌
  3. ರಾಕೆಟ್‌ ಬಾಯ್ಸ್‌ ( ಸೋನಿ ಲಿವ್)‌
  4. ಹ್ಯೂಮನ್‌ ( ಹಾಟ್‌ ಸ್ಟಾರ್)‌
  5. ಅಪಹರಣ್‌ ( ವೂಟ್)‌
  6. ಗುಲ್ಲಕ್ ( ಸೋನಿ ಲಿವ್)‌
  7. ಎನ್‌ ಆರ್‌ ಡೇಸ್‌ ( ಯೂಟ್ಯೂಬ್)‌
  8. ಅಭಯ್‌ ( ಜೀ5)
  9. ಕ್ಯಾಂಪಸ್‌ ಡೈರೀಸ್‌ (ಎಂ ಎಕ್ಸ್‌ ಪ್ಲೇಯರ್)‌
  10. ಕಾಲೇಜ್‌ ರೋಮಾನ್ಸ್‌ ( ಸೋನಿ ಲಿವ್)‌
Advertisement

Udayavani is now on Telegram. Click here to join our channel and stay updated with the latest news.

Next