Advertisement

ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಬಾಲಿವುಡ್‌ನ‌ಲ್ಲಿ ಹೊಸದೊಂದು ದಾಖಲೆ

08:09 PM Apr 11, 2022 | Team Udayavani |

ಮುಂಬೈ: ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ವಿವರಿಸಿರುವ “ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ಬಾಲಿವುಡ್‌ನ‌ಲ್ಲಿ ಹೊಸದೊಂದು ದಾಖಲೆ ಬರೆದಿದೆ.

Advertisement

ಕೊರೊನಾ ಸಾಂಕ್ರಾಮಿಕದ ನಂತರ ಭಾರತದಲ್ಲಿ 250 ಕೋಟಿ ರೂ. ಬಾಚಿದ ಮೊದಲ ಹಿಂದಿ ಸಿನಿಮಾವಾಗಿ ಹೊರಹೊಮ್ಮಿದೆ.

ಭಾರತದ ಸಿನಿ ತಜ್ಞ ತರಣ್‌ ಆದರ್ಶ್‌ ಮಾಹಿತಿ ಪ್ರಕಾರ, ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾವು, ವಾರಾಂತ್ಯದವರೆಗೆ ಲಕ್ಷಗಳಲ್ಲಿ ಗಳಿಕೆ ಕಂಡಿದ್ದು, ವಾರಾಂತ್ಯವಾದ ಶನಿವಾರ 85 ಲಕ್ಷ ರೂ. ಹಾಗೂ ಭಾನುವಾರ 1.15 ಕೋಟಿ ರೂ. ಗಳಿಸಿದೆ. ಈ ಮೂಲಕ ಸಿನಿಮಾ ಭಾರತದಲ್ಲಿ ಒಟ್ಟು 250.73 ಕೋಟಿ ರೂ. ಗಳಿಸಿದಂತಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next