Advertisement

ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಪೀಠ

01:00 AM Feb 05, 2019 | Team Udayavani |

ಬೆಂಗಳೂರು: ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ತಮ್ಮನ್ನು ಅಮಾನತುಗೊಳಿಸಿದ ವಿಧಾನಸಭೆ ವಿಶೇಷ ಮಂಡಳಿ ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಎಸ್‌.ಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಹೈಕೋರ್ಟ್‌ ಏಕಸದಸ್ಯ ನ್ಯಾಯಪಿಠ ನಿರಾಕರಿಸಿತು.

Advertisement

ಸೋಮವಾರ ಮಧ್ಯಾಹ್ನ ಅರ್ಜಿಯು ನ್ಯಾಯಪೀಠದ ಮುಂದೆ ಇದೇ ಮೊದಲ ಬಾರಿ ವಿಚಾರಣೆಗೆ ಬಂದಿತ್ತು. ಈ ವೇಳೆ ‘ಅರ್ಜಿದಾರ ವ್ಯಕ್ತಿ ತಮಗೆ ಪರಿಚಯಸ್ಥರು, ಹಾಗಾಗಿ, ಈ ಅರ್ಜಿ ನನ್ನ ಮುಂದೆ ಬೇಡ’ ಎಂದು ಹೇಳಿದ ನ್ಯಾ. ಆರ್‌. ದೇವದಾಸ್‌ ವಿಚಾರಣೆಯಿಂದ ಹಿಂದೆ ಸರಿದರು. ಅವ್ಯವಹಾರ ಅರೋಪದ ಹಿನ್ನೆಲೆಯಲ್ಲಿ ಸ್ಪೀಕರ್‌ ಅವರ ಶಿಫಾರಸಿನಂತೆ ವಿಧಾನಸಭೆಯ ಶಿಸ್ತು ಪ್ರಾಧಿಕಾರವಾಗಿರುವ ‘ವಿಶೇಷ ಮಂಡಳಿ’ಯು ಎಸ್‌. ಮೂರ್ತಿಯವರನ್ನು ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಅಮಾನತುಗೊಳಿಸಿ 2018ರ ಡಿ.27ರಂದು ಆದೇಶ ಹೊರಡಿಸಿತ್ತು. ಈ ಆದೇಶ ರದ್ದುಗೊಳಿಸುವಂತೆ ಕೋರಿ ಮೂರ್ತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next