Advertisement

Sandalwood; ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾದ ‘ದಿ ಜಡ್ಜ್ ಮೆಂಟ್‌’

04:49 PM Nov 30, 2023 | Team Udayavani |

“ಜಿ 9 ಕಮ್ಯುನಿಕೇಷನ್‌ ಮೀಡಿಯಾ’ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ನಲ್ಲಿ ಶಾರದ ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಪಾಟೀಲ ಮತ್ತು ಪ್ರತಿಮ ಬಿರಾದಾರ ನಿರ್ಮಿಸುತ್ತಿರುವ ಹಾಗೂ ಗುರುರಾಜ ಕುಲಕರ್ಣಿ (ನಾಡಗೌಡ) ರಚನೆ ಹಾಗೂ ನಿರ್ದೇಶನದ “ದಿ ಜಡ್ಜ್ ಮೆಂಟ್‌’ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಫ‌ೂರ್ಣಗೊಂಡಿತ್ತು. ಇದೀಗ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, “ದಿ ಜಡ್ಜ್ ಮೆಂಟ್‌’ ಸಿನಿಮಾದ ಮಾತಿನ ಜೋಡಣೆ ಕಾರ್ಯ ಆರಂಭಿಸಿದೆ.

Advertisement

“ದಿ ಜಡ್ಜ್ ಮೆಂಟ್‌’ ಸಿನಿಮಾದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ವಕೀಲರಾಗಿ ಅಭಿನಯಿಸಿದ್ದಾರೆ. ದಿಗಂತ ಮಂಚಾಲೆ, ಮೇಘನಾ ಗಾಂವ್ಕರ್‌, ಧನ್ಯಾ ರಾಮ ಕುಮಾರ, ಲಕ್ಷ್ಮೀ ಗೋಪಾಲಸ್ವಾಮಿ, ಪ್ರಕಾಶ ಬೆಳವಾಡಿ, ಟಿ. ಎಸ್‌ ನಾಗಾ ಭರಣ, ಕೃಷ್ಣಾ ಹೆಬ್ಟಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ, ರವಿಶಂಕರ ಗೌಡ ಸುಜಯ ಶಾಸ್ತ್ರೀ, ರೇಖಾ ಕೂಡ್ಲಿಗಿ, ರೂಪಾ ರಾಯಪ್ಪ, ಪ್ರೀತಂ, ಅಶ್ವಿ‌ನ್‌ ರಾವ್‌ ಮುಂತಾದವರು “ದಿ ಜಡ್ಜ್ ಮೆಂಟ್‌’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶಿಸಿರುವ “ದಿ ಜಡ್ಜ್ ಮೆಂಟ್‌’ ಸಿನಿಮಾಕ್ಕೆ ಎಂ. ಎಸ್‌. ರಮೇಶ್‌ ಸಂಭಾಷಣೆ ಬರೆದಿದ್ದಾರೆ. ಪ್ರಮೋದ್‌ ಮರವಂತೆ ಹಾಡುಗಳನ್ನು ರಚಿಸಿದ್ದಾರೆ. ಅನೂಪ್‌ ಸೀಳಿನ್‌ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾ.

ಸಿನಿಮಾಕ್ಕೆ ಪಿ.ಕೆ.ಹೆಚ್‌ ದಾಸ್‌ ಛಾಯಾಗ್ರಹಣ, ಕೆಂಪರಾಜ್‌ ಬಿ. ಎಸ್‌ ಸಂಕಲನವಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ ಮುಂದಿನ ವರ್ಷದ ಆರಂಭದಲ್ಲಿ “ದಿ ಜಡ್ಜ್ ಮೆಂಟ್‌’ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next