Advertisement
ಶೀರೂರು ಮಠದ ದ್ವಂದ್ವ ಮಠವಾದ ಶ್ರೀಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಹಿರಿಯಡಕ ಮತ್ತು ಬ್ರಹ್ಮಾವರದ ಪೊಲೀಸ್ ಅಧಿಕಾರಿಗಳು ಮಹಜರು ನಡೆಸಿ ಶೀರೂರಿನಿಂದ ಉಡುಪಿ ಶೀರೂರು ಮಠಕ್ಕೆ ತಂದು ಸುರಕ್ಷಾ ಕೊಠಡಿಯಲ್ಲಿರಿಸಿದರು. ಸಂಜೆ 4 ಗಂಟೆಗೆ ಮಹಜರು, ಪಟ್ಟಿ ಮಾಡುವ ಕೆಲಸ ಆರಂಭಗೊಂಡಿತು. ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಈ ಕೆಲಸಕ್ಕೆ ತಗಲಿತು.
ಜು. 19ರಂದು ಸ್ವಾಮೀಜಿ ನಿಧನ ಹೊಂದಿದ ಬಳಿಕ ಎಲ್ಲ ಸಾಮಗ್ರಿಗಳು ಶೀರೂರಿನಲ್ಲಿತ್ತು. ಮಠವೂ ಪೊಲೀಸರ ಸುಪರ್ದಿಯಲ್ಲಿತ್ತು. ಶೀರೂರು ಮಠ ಗ್ರಾಮಾಂತರದಲ್ಲಿರುವುದರಿಂದ ಅಲ್ಲಿ ಏನೇನು ಇದೆ ಎಂದು ತಿಳಿಯದ ಕಾರಣ ಬುಧವಾರ ಎಲ್ಲವನ್ನು ಪಟ್ಟಿ ಮಾಡಿ ಉಡುಪಿ ಶೀರೂರು ಮಠಕ್ಕೆ ಸುರಕ್ಷೆ ದೃಷ್ಟಿಯಿಂದ ತಂದಿರಿಸಲಾಯಿತು.