Advertisement

ಕ್ಷೇತ್ರವನ್ನು ಮಾರಾಟಕ್ಕೆ ಇಟ್ಟ ಜೆಡಿಎಸ್‌, ಕಾಂಗ್ರೆಸ್‌

12:16 PM May 06, 2018 | |

ಕನಕಪುರ: ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಳ್ಳುವ ಮೂಲಕ ಈ ಕ್ಷೇತ್ರವನ್ನು ಮಾರಾಟಕ್ಕೆ ಇಟ್ಟಿವೆ. ಪ್ರಜ್ಞಾವಂತ ಮತದಾರರು ತಮ್ಮ ಮತವನ್ನು ಈ ಎರಡೂ ಪಕ್ಷಗಳು ಒಡ್ಡುವ ಆಮಿಷಕ್ಕೆ ಒಳಗಾಗಿ ಮಾರಾಟ ಮಾಡಬೇಡಿ ಎಂದು ಬಿಜೆಪಿ ಅಭ್ಯರ್ಥಿ ನಂದಿನಿ ಗೌಡ ಆರೋಪಿಸಿದರು.

Advertisement

ನಗರದ ಪ್ರಮುಖ ರಸ್ತೆಗಳ ಮೂಲಕ ಮತ ಯಾಚನೆ ಮಾಡಿ ಮಾತನಾಡಿದ ಅವರು, ತಾಲೂಕಿ ನಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡೂ ಪಕ್ಷದ ಅಭ್ಯರ್ಥಿಗಳಿಗೆ ಮತಹಾಕಿ ನಿಮ್ಮ ಮತದ ಮೌಲ್ಯ ಕಡಿಮೆ ಮಾಡಿಕೊಳ್ಳಬೇಡಿ ಎಂದು ಬಿಜೆಪಿ ಅಭ್ಯರ್ಥಿ ನಂದಿನಿ ಗೌಡ ಸಲಹೆ ನೀಡಿದರು. 

ಭವಿಷ್ಯ ಮಾರಿಕೊಳ್ಳಬೇಡಿ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ನೀಡುವ ಹಣ ಮತ್ತು ಆಮಿಷಕ್ಕೆ ಬಲಿಯಾಗಿ ನಿಮ್ಮ ಮುಂದಿನ ಮಕ್ಕಳ ಭವಿಷ್ಯ ಮಾರಿಕೊಳ್ಳಬೇಡಿ. ನಿಮ್ಮ ಆರ್ಥಿಕ ಮೌಲ್ಯ, ಜೀವನ ಮಟ್ಟ ಹಾಗೂ ಸಾಮಾಜಿಕ ಭದ್ರತೆ ಕಾಯ್ದು ಕೊಳ್ಳುವಂತಹ ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ನಂದಿನಿಗೌಡರಿಗೆ ಮತನೀಡುವುದನ್ನು ಮರೆಯಬೇಡಿ ಎಂದರು. 

ಮೋದಿ ಭರವಸೆ: ಪ್ರಧಾನಿ ನರೇಂದ್ರ ಮೋದಿ ಯವರು ಗುರುವಾರ ಬೆಂಗಳೂರಿಗೆ ಆಗಮಿಸಿ ದ್ದಾಗ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ವಿಶೇಷವಾದ ಸವಲತ್ತು ನೀಡುವ ಭರವಸೆ ನೀಡಿದ್ದಾರೆ. ನಾನು ಇದೇ ಕ್ಷೇತ್ರ ಸಾತನೂರು ಹೋಬಳಿಗೆ ಸೇರಿದ ಕಾಡಹಳ್ಳಿ ಗ್ರಾಮದ ಮಗಳಾಗಿದ್ದು, ನೀವು ನೀಡಿದ ಮತಗಳಿಗೆ ಪ್ರತಿಯಾಗಿ ಇಲ್ಲೇ ಇದ್ದು ನಿಮ್ಮ ಋಣàರಿಸುತ್ತೇನೆ ಎಂದು ಭರವಸೆ ನೀಡಿದರು. ನಗರ ಘಟಕದ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಮೇ 12ರಂದು ನಡೆಯಲಿರುವ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ನಂದಿನಿಗೌಡರಿಗೆ ತಪ್ಪದೇ ನೀಡಲು ಮನವಿ ಮಾಡಿದರು.
 
 ಈ ಸಂದರ್ಭದಲ್ಲಿ ತಮಿಳು ನಾಡಿನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ರಾಜು, ಬಿಜೆಪಿ ಮಹಾರಾಷ್ಟ್ರದ ಪ್ರಧಾನ ಕಾರ್ಯದರ್ಶಿ ರಘುನಾಥ್‌ ಕುಲಕರ್ಣಿ, ಜಿಲ್ಲಾ ಚುನಾವಣಾ ವೀಕ್ಷಕರಾದ ಬಲರಾಮ್‌ ಜೀ, ಜಿಲ್ಲಾಧ್ಯಕ್ಷ  ಹುಲು ವಾಡಿ ದೇವರಾಜು, ಜಿಲ್ಲಾ ಸಂಯೋಜಕ ಬಾಲ ಕೃಷ್ಣ, ಜಿಲ್ಲಾ ಸಂಚಾಲಕ ರವೀಂದ್ರ, ಜಿಲ್ಲಾ ಉಪಾಧ್ಯಕ್ಷರಾದ ಕುರುಬಳ್ಳಿ ವೆಂಕಟೇಶ್‌, ಮತ್ತು ರವೀಂದ್ರ ಬಾಬು, ತಾಲೂಕು ಅಧ್ಯಕ್ಷ ಟಿ.ವಿ.ರಾಜು, ತಾಲೂಕು ಸಂಚಾಲಕ ನಾಗರಾಜು, ಎಸ್‌ಸಿ ಮೋರ್ಚಾ ನಗರ ಘಟಕದ ಅಧ್ಯಕ್ಷ ಡಿ.ಕೆ.ಭರತ್‌ ಕುಮಾರ್‌, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷೆ ತಸ್ಸಿಲ್ಲಾ ಖಾನ್‌, ನಗರ ಪ್ರಧಾನ ಕಾರ್ಯದರ್ಶಿ ಆನಂದ್‌ ಪೈ, ಸೇರಿದಂತೆ ಮುಖಂಡರಾದ ಅವಿನಾಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next