Advertisement

ಎರಡಂಕೆಗಿಳಿದ ಜೆಡಿಎಸ್‌, ಮೂರಂಕೆಯಿಂದ ಇಳಿಯದ ಬಿಜೆಪಿ

10:50 PM May 28, 2019 | Team Udayavani |

ಕುಂದಾಪುರ: ಚುನಾವಣೆ ಮುಗಿದು ಫ‌ಲಿತಾಂಶ ಬಂದರೂ ಜನರಿಗೆ ಇನ್ನೂ ಮತಗಳ ಲೆಕ್ಕಾಚಾರ ಮುಗಿದಿಲ್ಲ. ಎಲ್ಲಿ ಯಾವುದು ಹೆಚ್ಚು ಎಂದು ಚರ್ಚೆ ಇನ್ನೂ ಮುಂದುವರಿದಿದೆ. ರಾಜಕೀಯ ಪಕ್ಷಗಳು ಕೂಡಾ ಇದೇ ಲೆಕ್ಕಾಚಾರದಲ್ಲಿ ನಿರತವಾಗಿವೆ. ಯಾವ ಬೂತ್‌ನಲ್ಲಿ ಹೆಚ್ಚು ಯಾವ ಬೂತ್‌ನಲ್ಲಿ ಕಡಿಮೆ ಮತಗಳು, ಕಾರಣಗಳೇನು, ಸಾಧನೆಗಳೇನು, ವೈಫ‌ಲ್ಯಗಳೇನು ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ. ಈ ಕುರಿತು ಪಕ್ಷಗಳ ನಾಯಕರು ಕಾರ್ಯಕರ್ತರ ಜತೆ ಸಭೆಗಳನ್ನು ಕೂಡಾ ನಡೆಸಿದ್ದಾರೆ.

Advertisement

ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಾಗಾಲೋಟ ಯಾವ ಪರಿ ಮುಂದುವರಿದಿದೆ ಎಂದರೆ 222 ಬೂತ್‌ಗಳ ಪೈಕಿ 40 ಮತಗಟ್ಟೆಗಳಲ್ಲಿ ಜೆಡಿಎಸ್‌ ಎರಡಂಕೆ ದಾಟಿ ಮತಗಳನ್ನು ಪಡೆಯಲು ಯಶಸ್ವಿಯಾಗಲಿಲ್ಲ. ಅಂದ ಹಾಗೆ ಬಿಜೆಪಿ ಅಷ್ಟೂ ಬೂತ್‌ಗಳಲ್ಲಿ ಮೂರಂಕೆಯಿಂದ ಇಳಿಯಲಿಲ್ಲ.

ಕನಿಷ್ಠ ಮತಗಳಿಕೆ
ಬಿಜೆಪಿಗೆ ಕನಿಷ್ಠ ಮತ ಎಂದರೆ ಹಾಜಿ ಕೆ. ಮೊಯ್ದಿನ್‌ ಬ್ಯಾರಿ ಮೆಮೋರಿಯಲ್‌ ಹೈಸ್ಕೂಲ್‌ ಕೋಡಿ ಮತಗಟ್ಟೆಯಲ್ಲಿ 163 ಮತೆ, ಮೇರಿನೊಳೆ ಹಿ.ಪ್ರಾ. ಶಾಲೆ ಬಾಕೂìರು ಮತಗಟ್ಟೆಯಲ್ಲಿ 164 ಮತಗಳು ಲಭಿಸಿವೆ. ಜೆಡಿಎಸ್‌ಗೆ ಕನಿಷ್ಠ ಎಂದರೆ ಸರಕಾರಿ ಪ್ರಾಥಮಿಕ ಶಾಲೆ ಕಕ್ಕುಂಜೆಯಲ್ಲಿ 43 ಮತಗಳು, ಯಡಾಡಿ ಮತ್ಯಾಡಿ ಹಿ.ಪ್ರಾ. ಶಾಲೆ, ಸರಕಾರಿ ಹಿ.ಪ್ರಾ. ಶಾಲೆ ಬಿದ್ಕಲ್‌ಕಟ್ಟೆಯಲ್ಲಿ ತಲಾ 49 ಮತಗಳು ಲಭಿಸಿವೆ.

ಗರಿಷ್ಠ ಮತಗಳಿಕೆ
ಬಿಜೆಪಿಗೆ ಹೆಚ್ಚು ಮತಗಳು ಹುಣ್ಸೆ ಮಕ್ಕಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 858 ಮತಗಳು, ಜೂನಿಯರ್‌ ಕಾಲೇಜು ಕುಂದಾಪುರದಲ್ಲಿ 851 ಮತಗಳು ಲಭಿಸಿವೆ. ಜೆಡಿಎಸ್‌ಗೆ ಬಸೂÅರು ಶಾರದಾ ಕಾಲೇಜಿನ ಮತಗಟ್ಟೆಯಲ್ಲಿ 459, ಗುಂಡ್ಮಿ ಸ.ಹಿ.ಪ್ರಾ. ಶಾಲೆಯಲ್ಲಿ 432 ಮತಗಳು ದೊರೆತಿವೆ. ಇಲ್ಲಿ ಬಿಜೆಪಿಗೆ 528 ಮತಗಳು ದೊರೆತಿವೆ. ಈ ಮೂಲಕ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಅಭ್ಯರ್ಥಿಗೆ ಬೆಂಬಲ ದೊರೆತಿದೆ.

ಚಿಹ್ನೆ ಗೊಂದಲ ಇಲ್ಲ
ಕಾಂಗ್ರೆಸ್‌ ಅಭ್ಯರ್ಥಿ ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧಿಸಿದ ಕಾರಣ ಮತದಾರರಿಗೆ ಗೊಂದಲ ಆಗಲಿದೆ ಎನ್ನುವುದು ಆರಂಭದ ಲೆಕ್ಕಾಚಾರವಾಗಿತ್ತು. ಆದರೆ ಬುದ್ಧಿವಂತ ಮತದಾರರಿಗೆ ಅಂತಹ ಯಾವುದೇ ಗೊಂದಲ ಉಂಟಾಗಲಿಲ್ಲ. ನಿಲುವು ಸ್ಪಷ್ಟವಿದ್ದ ಕಾರಣ ಅವರ ಆಯ್ಕೆಯ ಅಭ್ಯರ್ಥಿಗಳಿಗೇ ಮತ ಚಲಾಯಿಸಿದ್ದಾರೆ. ಈ ಮೂಲಕ ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧಿಸಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಡೆದ ಮತಗಳ ಹತ್ತಿರಕ್ಕೆ ತಲುಪುವ ಯತ್ನ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next