Advertisement
ಶತಾಯುಷಿ ಸಾಲುಮರದ ತಿಮ್ಮಕ್ಕ ಅವರು ತಮ್ಮ ದತ್ತುಪುತ್ತ ಬಳ್ಳೂರು ಉಮೇಶ್ ಅವರ ನೆರವಿನೊಂದಿಗೆ ಆಗಮಿಸಿದ ಹಾಸನಾಂಬೆಯ ದರ್ಶನ ಪಡೆದರು. ದೇವಿಯ ದರ್ಶನಕ್ಕೆ ಬರುವವರು ಕೊರೊನಾ ಲಸಿಕೆ ಪಡೆದಿರುವ ಬಗ್ಗೆ ಪರಿಶೀಲನೆಗೆ 15 ಕಡೆ ತಪಾಸಣಾ ತಂಡಗಳು ಕಾರ್ಯನಿರ್ವಸುತ್ತಿವೆ.
Related Articles
Advertisement
ಹಾಸನ: ಕೊರೊನಾ ಮಹಾ ಮಾರಿ ನಿರ್ಮೂಲನೆ, ಜಾನುವಾರುಗಳ ರೋಗ ನಿವಾರಣೆಗಾಗಿ ಹಾಸನಾಂಬೆಯಲ್ಲಿ ಪ್ರಾರ್ಥಿಸಿದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಹೇಳಿದರು. ಪತ್ನಿ ಭವಾನಿ ಅವರೊಂದಿಗೆ ಹಾಸನಾಂಬೆಯ ದರ್ಶನ ಪಡೆದು ಹೊರ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಹಾಸನಾಂಬೆಯ ದರ್ಶನ ಪಡೆದಿದ್ದೇನೆ. ನಮ್ಮ ಕುಟುಂಬದವರು ಪ್ರತಿ ವರ್ಷ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆಯುತ್ತೇವೆ ಎಂದರು.
ಇದನ್ನೂ ಓದಿ:- ಅಪ್ಪು ಅಗಲಿಕೆಗೆ ಅಭಿಮಾನಿಗಳ ಭಾವಪೂರ್ಣ ಶ್ರದ್ದಾಂಜಲಿ
ಈ ವರ್ಷ 9 ದಿನಗಳ ಕಾಲ ಹಾಸನಾಂಬೆ ಬಾಗಿಲು ತೆಗೆದು ಭಕ್ತರಿಗೆ ದರ್ಶನ ಕೊಡಲಿದೆ. ರಾಜ್ಯದಲ್ಲಿ ರೈತರು ಮತ್ತು ಜನರು ಸಂಕಷ್ಟದಲ್ಲಿದ್ದು, ಅದನ್ನು ಹೋಗಲಾಡಿಸುವಂತೆ ಮತ್ತು ಒಳ್ಳೆಯ ಮಳೆ-ಬೆಳೆ ಬಂದು ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ. ರಾಜ್ಯದಲ್ಲಿ ಸಮೃದ್ಧಿ ನೆಲಸಲಿ ಎಂದೂ ಪ್ರಾರ್ಥನೆ ಮಾಡಿದ್ದೇನೆ ಎಂದರು ಭವಾನಿ ರೇವಣ್ಣ ಅವರು ಮಾತನಾಡಿ, ಹಾಸನದ ಅಧಿ ದೇವತೆ ಹಾಸನಾಂಬೆಯ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗುಸುತ್ತಾರೆ. ಈ ವರ್ಷವೂ ಕೊರೊನಾ ಆತಂಕ ಇರುವ ಕಾರಣ ಹೆಚ್ಚು ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ.
ಕೊರೊನಾ ಸಂಪೂರ್ಣ ನಿರ್ಮೂಲನೆಯಾಗಲಿ. ಮುಂದಿನ ವರ್ಷ ಹಾಸನಾಂಬೆಯ ಜಾತ್ರೆ ಅದ್ಧೂರಿಯಾಗಿ ನಡೆಯಲಿ ಎಂದು ಆಶಿಸಿದರು. ರೇವಣ್ಣ ದಂಪತಿ ಮೊದಲು ಹಾಸನಾಂಬೆ ದೇವಾಲಯಕ್ಕೆ ತೆರಳಿ ದೇವಿಯ ಗರ್ಭಗುಡಿಯಲ್ಲಿ ಕೆಲಕಾಲ ಇದ್ದು ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಶ್ರೀ ಸಿದ್ದೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಆಡಳಿತಾಧಿಕಾರಿ, ಹಾಸನ ಉಪಭಾಗಾಧಿಕಾರಿ ಬಿ.ಎ. ಜಗದೀಶ್ ಅವರು ಎಚ್.ಡಿ. ರೇವಣ ದಂಪತಿಯನ್ನು ಸ್ವಾಗತಿಸಿ ದೇವಿಯ ದರ್ಶನದ ನಂತರ ಬೀಳ್ಕೊಟ್ಟರು. ತಹಸೀಲ್ದಾರ್ ನಟೇಶ್, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಗಿರೀಶ್ ಚನ್ನವೀರಪ್ಪ ಮತ್ತಿತರರು ಉಪಸ್ಥಿತರಿದ್ದರು.