Advertisement

ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಮಟ್ಟದಲ್ಲೂ ಚರ್ಚೆ ಆಗಿಲ್ಲ : ಜಗದೀಶ್ ಶೆಟ್ಟರ್

03:07 PM Jun 16, 2021 | Team Udayavani |

ಬೆಂಗಳೂರು : ಅರುಣ್ ಸಿಂಗ್ ಆಗಮನ ಅಸ್ವಾಭಾವಿಕ‌ ಅಲ್ಲ, ಹಲವು ಸಲ ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಹಲವು ಸಭೆಗಳನ್ನು ನಡೆಸಿ ಹೋಗಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಅವರು ಬಂದಿರಲಿಲ್ಲ, ಈಗ ಬರ್ತಿದ್ದು ಸಚಿವರು, ಶಾಸಕರ ಸಭೆ ನಡೆಸ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ ಹೇಳಿಕೆ ನೀಡಿದ್ದಾರೆ.

Advertisement

ಇವತ್ತು ಸಚಿವರ ಸಭೆಯಲ್ಲಿ ಬೈ ಎಲೆಕ್ಷನ್, ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡ್ತಾರೆ. ಸಂಪುಟ ಪುನಾರಚನೆ ಆಗಲೀ, ಸಂಪುಟ ವಿಸ್ತರಣೆ ಬಗ್ಗೆ ಆಗಲೀ ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಿಲ್ಲ. ಹೈಕಮಾಂಡ್ ಮಟ್ಟದಲ್ಲೂ ಇದರ ಬಗ್ಗೆ ಚರ್ಚೆ ಆಗಿಲ್ಲ. ಇವತ್ತಿನ ಸಭೆಯಲ್ಲೂ ಇದರ ಬಗ್ಗೆ ಚರ್ಚೆ ಆಗಲ್ಲ ಅನ್ಸತ್ತೆ. ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ನಾಯಕತ್ವದ ಗೊಂದಲವೂ ನಮ್ಮಲ್ಲಿ ಇಲ್ಲ ಎಂದು ಹೇಳಿದರು.

ನಾಯಕತ್ವದ ಗೊಂದಲ ಎಲ್ಲಿ, ಹೇಗೆ ಹುಟ್ತು ಅಂತ ನನಗೆ ಗೊತ್ತಾಗ್ತಿಲ್ಲ. ಯಡಿಯೂರಪ್ಪ ಸಿಎಂ ಇದಾರೆ, ಸಿಎಂ ಆಗಿ ಮುಂದುವರೆಯುತ್ತಾರೆ. ಇದುವರೆಗೆ ಯಾವೊಬ್ಬ ಶಾಸಕರೂ ನಾಯಕತ್ವ ಬದಲಾಗಬೇಕು ಅಂತ ಹೇಳಿಲ್ಲ. ನಾಯಕತ್ವದ ವಿಚಾರದ ಬಗ್ಗೆ ಹೈಕಮಾಂಡ್ ನಿಲುವು ನನಗೆ ಗೊತ್ತಿಲ್ಲ. ಹೈಕಮಾಂಡ್ ಮನಸಲ್ಲಿ ಏನಿದೆ ಅಂತ ನನಗೆ ಹೇಗೆ ಗೊತ್ತಾಗುತ್ತೆ?
ನಾಯಕತ್ವದ ಬಗ್ಗೆ ನನ್ನ ಅಭಿಪ್ರಾಯ ಹಲವು ಬಾರಿ‌ ಹೇಳಿದ್ದೇನೆ. ಯಡಿಯೂರಪ್ಪ ನಮ್ಮ ನಾಯಕ, ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ.

ಪಕ್ಷದ ವೇದಿಕರ, ಸರ್ಕಾರ ವೇದಿಕೆಯಲ್ಲಿ ನಾಯಕತ್ವದ ಚರ್ಚೆ ಆಗಿಲ್ಲ ನಾಯಕತ್ವದ ಪ್ರಶ್ನೆ ಎಲ್ಲಿಂದ ಬಂತು ಅಂತ ಗೊತ್ತಾಗ್ತಿಲ್ಲ ನನಗೆ. ದೆಗಲಿಗೆ ಹೋಗಿಬಂದವರು ಸಹ ನಾಯಕತ್ವ ಬದಲಾಗಬೇಕು ಅಂತ ಎಲ್ಲೂ ಹೇಳಿಲ್ಲ. ದೆಹಲಿಗೆ ಒಂದಿಬ್ಬರು ಹೋಗಿ ಬರೋದ್ರಲ್ಲಿ ಏನೂ ವಿಶೇಷತೆ ಇಲ್ಲ ದೆಹಲಿಗೆ ಹೋಗಿ ಬಂದವರ ಬಳಿಯೇ ಈ ಪ್ರಶ್ನೆ ಕೇಳಬೇಕು. ಬೆಂಕಿ‌ ಇಲ್ಲದೇ ಹೊಗೆ ಆಡ್ತಿರೋದು ನನಗೆ ಕಾಣಿಸ್ತಿಲ್ಲ. ನಿಮಗೆ ಕಾಣಿಸ್ತಿರಬಹುದು. ಶಾಸಕಾಂಗ ಪಕ್ಷದ ಸಭೆಯನ್ನು ಹಲವು ಬಾರಿ ನಡೆಸಲಾಗಿದೆ
ಈಗ ಮತ್ತೆ ಶಾಸಕಾಂಗ ಪಕ್ಷದ ಸಭೆ ನಡೆಸಬೇಕೋ ಬೇಡವೋ ಅಂತ ಪಕ್ಷ ತೀರ್ನಾನಿಸುತ್ತೆ, ವರಿಷ್ಠರು ತೀರ್ಮಾನಿಸ್ತಾರೆ
ಅಸಮಧಾನ ಎಲ್ಲ ಪಕ್ಷಗಳಲ್ಲೂ ಇದೆ. ಕಾಂಗ್ರೆಸ್, ಜೆಡಿಎಸ್ ಗಳಲ್ಲೂ ಅಸಮಧಾನ ಇವೆ. ಅಸಮಧಾನ ಅಸಹಜ ಅಲ್ಲ
ನಮ್ಮ ಪಕ್ಷದ ಅಸಮಧಾನಗಳನ್ನು ಪಕ್ಷದ ವರಿಷ್ಠರು ಬಗೆ ಹರಿಸ್ತಾರೆ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next