Advertisement

IPL ಚೆನ್ನೈvs ಲಕ್ನೋ ಪಂದ್ಯ ಮಳೆಯಿಂದ ರದ್ದು; ಪಾಯಿಂಟ್ಸ್ ಟೇಬಲ್ ಪೈಪೋಟಿ

07:36 PM May 03, 2023 | Team Udayavani |

ಲಕ್ನೋ: ನಗರದ ಏಕಾನಾ ಸ್ಟೇಡಿಯಂನಲ್ಲಿ ಭಾರೀ ಮಳೆಯಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಬುಧವಾರದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಎರಡೂ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ.

Advertisement

ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫೀಲ್ಡಿಂಗ್ ಆಯ್ದುಕೊಂಡಿತ್ತು. ಕೃನಾಲ್ ಪಾಂಡ್ಯ ನಾಯಕತ್ವದಲ್ಲಿ ಲಕ್ನೋ 19.2 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತ್ತು.ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ, ಕವರ್‌ಗಳನ್ನು ಮೈದಾನಕ್ಕೆ ಮರಳಿ ತಂದಿದ್ದರಿಂದ ಮಳೆಯು ಆಟವನ್ನು ನಿಲ್ಲಿಸಿತು. ಆಯುಷ್ ಬಡೋನಿ ಅಜೇಯ 59 ರನ್ ಗಳಿಸಿದ್ದರು.

ನಿರಂತರ ಮಳೆ ಅಡ್ಡಿಯಾದಾಗ 5-ಓವರ್ ಗಳಿಗೆ ಪಂದ್ಯ ಸೀಮಿತ ಮಾಡಲಾಗಿತ್ತಾದರೂ ಮಳೆ ಜೋರಾದ ಕಾರಣ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ.

ಲಕ್ನೋ ಸೂಪರ್ ಜೈಂಟ್ಸ್ 10 ಪಂದ್ಯಗಳಲ್ಲಿ 5 ಗೆದ್ದಿದ್ದು4ಸೋತಿದ್ದು ಇಂದಿನ ಪಂದ್ಯ ರದ್ದಾದ ಕಾರಣ  1 ಅಂಕ ಪಡೆದಿದ್ದು +0.639 ರನ್ ರೇಟ್ ನೊಂದಿಗೆ 11 ಅಂಕದೊಂದಿಗೆ 2 ನೇ ಸ್ಥಾನದಲ್ಲಿದ್ದು, ಚೆನ್ನೈ ಕೂಡ 11 ಅಂಕ ಹೊಂದಿದೆ. +0.329 ರೇಟ್ ಹೊಂದಿದ್ದು ಎರಡು ತಂಡಗಳು ಪೈಪೋಟಿ ಹೊಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next