ಹೊಸದಿಲ್ಲಿ: ಸಿಬಿಎಸ್‌ಇಯಿಂದ ಮರು ಪರೀಕ್ಷೆ ಘೋಷಣೆಯಾಗಿರುವಂತೆಯೇ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ದೆಹಲಿ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಪ್ರಶ್ನೆ ಪತ್ರಿಕೆ ಹತ್ತು ವಾಟ್ಸ್‌ಆ್ಯಪ್ ಗ್ರೂಪ್‌ಗ್ಳಲ್ಲಿ ಹಂಚಿಕೆಯಾಗಿರುವ ಬಗ್ಗೆ ದಿಲ್ಲಿ ಪೊಲೀಸರು ಕಂಡುಕೊಂಡಿದ್ದಾರೆ. ಪ್ರತಿಯೊಂದರಲ್ಲೂ 50-60 ಸದಸ್ಯರು ಇದ್ದಾರೆ. ಈ ಗ್ರೂಪ್‌ಗ್ಳಲ್ಲಿ ಖಾಸಗಿ ಕೋಚಿಂಗ್ ಸೆಂಟರ್‌ನ ಮಾಲೀಕರು, ವಿದ್ಯಾರ್ಥಿಗಳು ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರೂಪ್‌ಗ್ಳ ಅಡ್ಮಿನ್‌ಗಳನ್ನು ವಿಚಾರಣೆ ನಡೆಸಲಾಗಿದೆ. ಅದಕ್ಕೆ ಪೂರಕವಾಗಿ ಶುಕ್ರವಾರ ಇನ್ನೂ 10 ಮಂದಿಯ ವಿಚಾರಣೆ ನಡೆದಿದೆ. ಗುರುವಾರದಿಂದ ಈಚೆಗೆ ಪ್ರಕರಣಕ್ಕೆ ಸಂಬಂಧಿಸಿ 35 ಮಂದಿಯ ವಿಚಾರಣೆ ನಡೆಸಲಾಗಿದೆ.
ಗೂಗಲ್‌ಗೆ ಪತ್ರ: ದೆಹಲಿ ಪೊಲೀಸ್‌ನ ಕ್ರೈಂ ವಿಭಾಗ ಇಂಟರ್‌ನೆಟ್ ಸರ್ಚ್ ದೈತ್ಯ ಗೂಗಲ್‌ಗೆ ಪತ್ರ ಬರೆದಿದ್ದು, ಸಿಬಿಎಸ್‌ಇ ಮಂಡಳಿ ಅಧ್ಯಕ್ಷರಿಗೆ ಸೋರಿಕೆಯಾಗಿದ್ದ ಹತ್ತನೇ ತರಗತಿ ಗಣಿತ ಪ್ರಶ್ನೆ ಪತ್ರಿಕೆ ವಿವರಗಳನ್ನು ಕಳುಹಿಸಲಾಗಿದ್ದ ಇ-ಮೇಲ್ ವಿವರ ನೀಡುವಂತೆ ಮನವಿ ಮಾಡಿದೆ. ಸಿಬಿಎಸ್‌ಇ ಅಧ್ಯಕ್ಷರಿಗೆ ಬಂದಿದ್ದ ಮೇಲ್‌ನಲ್ಲಿ ಕೈಬರಹದಲ್ಲಿದ್ದ ಒಟ್ಟು 12 ಪ್ರಶ್ನೆ ಪತ್ರಿಕೆಗಳು ಇದ್ದವು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದಕ್ಕೆ ಸಂಬಂಧಿಸಿ ಮಾ.27 ಮತ್ತು 28ರಂದು ಪ್ರತ್ಯೇಕವಾಗಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
6 ಮಂದಿ ಬಂಧನ: ಜಾರ್ಖಂಡ್‌ನ ಛತ್ರಾದಲ್ಲಿ ಸಿಬಿಎಸ್‌ಇನ ಹತ್ತನೇ ತರಗತಿಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಹೊಂದಿದ್ದ ಆರು ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಮಾ.28ರಂದು ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪಾಟ್ನಾದಿಂದ ಪ್ರಶ್ನೆ ಪತ್ರಿಕೆ ಸಿಕ್ಕಿತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಪ್ರಧಾನಿಯಿಂದ ಮತ್ತೂಂದು ಪುಸ್ತಕ: ಈ ನಡುವೆ, ವಿದ್ಯಾರ್ಥಿ ಗಳಿಗಾಗಿ ಪ್ರಧಾನಿ ಮತ್ತೂಂದು ಪುಸ್ತಕ ಬರೆಯಲಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಳಿಕ ವಿದ್ಯಾರ್ಥಿಗಳು, ಪೋಷಕರನ್ನು ಹೇಗೆ ಸಮಾಧಾನಪಡಿಸುವುದು ಎಂಬ ಬಗ್ಗೆ ಮತ್ತೂಂದು ಪುಸ್ತಕ ಬರೆಯಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಧಾನಿ ಮೋದಿ ಮಕ್ಕಳ ಜತೆಗೆ ಆಟವಾಡುತ್ತಿರುವ ಫೋಟೋವನ್ನು ಅಟ್ಯಾಚ್ ಮಾಡಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮಾತನಾಡಿ ಕೇಂದ್ರ ಸರಕಾರ ಪರೀಕ್ಷಾ ಮಾಫಿಯಾಕ್ಕೆ ರಕ್ಷಣೆ ನೀಡುತ್ತಿದೆ ಎಂದು ಆರೋ ಪಿ ಸಿದ್ದಾರೆ. ಮೊದಲ ಬಾರಿಗೆ ದೇಶದಲ್ಲಿ ಈ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದರೂ, ಪ್ರಧಾನಿ ಮೋದಿಯವರು ಇದುವರೆಗೆ ಯಾಕೆ ಕ್ಷಮೆ ಕೇಳಿಲ್ಲ ಎಂದು ಪ್ರಶ್ನಿಸಿದ್ದಾರೆ ಸಿಬಲ್. ಇದೇ ವೇಳೆ ಹೊಸದಿಲ್ಲಿಯಲ್ಲಿ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆಗಳನ್ನು ನಡೆಸಿದ್ದಾರೆ.