Advertisement

ಅಮೆರಿಕ ಅಧ್ಯಕ್ಷರಾಗಿ ನಾಳೆ ಟ್ರಂಪ್‌ ಪದಗ್ರಹಣ

07:59 AM Jan 19, 2017 | Team Udayavani |

ವಾಷಿಂಗ್ಟನ್‌: ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅಮೆರಿಕದ 45ನೇ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲು ಕ್ಷಣಗಣನೆ ಆರಂಭಗೊಂಡಿದ್ದು, ಸಮಾರಂಭದಲ್ಲಿ 9 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜ.20ರ ಶುಕ್ರವಾರ ವಾಷಿಂಗ್ಟನ್ನಿನಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ವಿಶ್ವದ ಗಣ್ಯಾತಿಗಣ್ಯರು, ಸಹಸ್ರಾರು ಭಾರತೀಯರು ಪಾಲ್ಗೊಳ್ಳಲಿದ್ದಾರೆ. “ಅಮೆರಿಕವನ್ನು ಮತ್ತೂಮ್ಮೆ ಉನ್ನತಕ್ಕೆ ಏರಿಸೋಣ’ ಎಂಬ ಉದ್ಘೋಷದಲ್ಲಿ ಸಮಾರಂಭ ಆಯೋಜನೆಗೊಂಡಿದೆ.

Advertisement

ಸಮಾರಂಭ ವೀಕ್ಷಿಸಲು ಈಗ ಜನಸ್ತೋಮ ವಾಷಿಂಗ್ಟನ್‌ನತ್ತ ಲಗ್ಗೆ ಇಡತೊಡಗಿದೆ. ಟ್ರಂಪ್‌ ಪದಗ್ರಹಣ ಸಮಾರಂಭ ಹಿನ್ನೆಲೆಯಲ್ಲಿ ವಾಷಿಂಗ್ಟನ್ನಿನ ಸುತ್ತ ಮುತ್ತ 100 ವೃತ್ತಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. 2.7 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳು ಓಡಾಡುವಂತಿಲ್ಲ. ಅಮೆರಿಕ ಗುಪ್ತ ಚರ ಏಜೆನ್ಸಿಯ 28 ಸಾವಿರ ಸಿಬಂದಿ ಈಗಾಗಲೇ ಕರ್ತವ್ಯ ನಿರತರಾಗಿದ್ದಾರೆ.

ಇವರೊಂದಿಗೆ ಸಾರಿಗೆ, ರಕ್ಷಣಾ ಸಿಬಂದಿ, ಎಫ್ಬಿಐ ಅಧಿಕಾರಿಗಳು, ಯುಎಸ್‌ ಪಾರ್ಕ್‌ ಪೊಲೀಸ್‌, ಕ್ಯಾಪಿಟಲ್‌ ಪೊಲೀಸ್‌, ನೌಕಾದಳದ ಸಿಬಂದಿ, ವಾಷಿಂಗ್ಟನ್‌ ಪೊಲೀಸರು ಬಿಗಿಭದ್ರತೆಗೆ ಕೈಜೋಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next