ಮೈಸೂರು: ಅದು ಕವಿಗೋಷ್ಠಿಯೇ. ಆದರೆ, ಅಲ್ಲಿ ಕೇಳಿಬಂದಿದ್ದು ಕಾವ್ಯದ ಪಾಠ. ಬದುಕಿನ ರಸಗುಟ್ಟುಗಳ ಕಮ್ಮಟ. ಕಾವ್ಯದ ಮೇಷ್ಟ್ರಾಗಿ ಮಾತು ಪೋಣಿಸುತ್ತಿದ್ದರು ಕತೆಗಾರ ಜಯಂತ್ ಕಾಯ್ಕಿಣಿ. ಅಲ್ಲಿ ಕೇಳಿ ಬಂದ ಕತೆಗಳ ಮಿಡಿತ, ಕೇಳುಗನ ಮನವನ್ನು ತಂಪಾಗಿಸಿದವು.
Advertisement
ಬದುಕಿನ ಜೀವಂತಿಕೆಯನ್ನು ಗ್ರಹಿಸುವುದು ಹೇಗೆಂದು ಹೇಳುತ್ತಲೇ, ಕಾವ್ಯವನ್ನು ಅರಳಿ ಸುವ ಜಾಣಕಲೆಯನ್ನು ಕಾಯ್ಕಿಣಿ ತೋರಿಸಿ ಕೊಟ್ಟರು. ನಾಡನ್ನು ಅಗಲಿದ ಕವಿ ಎಸ್. ಮಂಜುನಾಥ್ ಅವರ ಭಾವ ಜಗತ್ತನ್ನು ಸ್ಪರ್ಶಿಸುತ್ತಾ ಗೋಷ್ಠಿಗೆ ಚಾಲನೆ ಕೊಟ್ಟರು ಕಾಯ್ಕಿಣಿ.
ಗೋವಿಂದಾ ಚಾರ್ಯರು ಹೇಳಿದಂತೆ, ನಾವು ಹೇಳುವುದಕ್ಕೆ ಆಗುವುದಿಲ್ಲ. ಆದರೆ, ಹೇಳುವುದಕ್ಕೆ ಕೆಲವು ಸಂಗತಿಗಳು ಇರುತ್ತವೆ. ಅವುಗಳ ಮೂಲಕ ಧ್ವನಿಸುವುದೇ ಕಾವ್ಯ- ಆ ಕಾವ್ಯ ನಮ್ಮೆಲ್ಲರನ್ನೂ ಜೀವಂತವಾಗಿಡುವ ಮಾನವೀಯ ಸೆಲೆ. ಕಾವ್ಯಗಳಿಗೆ ಸ್ಫೂರ್ತಿ ಬರುವುದು ಪುಸ್ತಕ ಕಪಾಟುಗಳಿಂದಲ್ಲ. ಆ ಸ್ಫೂರ್ತಿ ಬದುಕಿನಿಂದ ಬರಬೇಕು ಎಂದರು
ಕಾಯ್ಕಿಣಿ. ಶಿರಸಿಯ ಪ್ರಸೂತಿ ಗೃಹದ ಕತೆಯೊಂದನ್ನು ಎಲ್ಲರ ಮುಂದಿಟ್ಟರು. ಅಲೊಬ್ಬಳು ಬಡತಾಯಿ ಹೆಣ್ಮಕ್ಕಳಿಗೆ ಜನ್ಮ ಕೊಡುವಳು. ಸಾಕುವ ಧೈರ್ಯವಿಲ್ಲವೆಂದು ಒಂದು ಮಗು ಮಾರಲು ಮುಂದಾಗುತ್ತಾಳೆ. ಆಗ ಡಾಕ್ಟರ್ ಹೆಂಡತಿ,
ಒಂದು ಮಗುವನ್ನು ನಾವು ತಗೊಳ್ತೀವಿ ಎನ್ನುತ್ತಾರೆ.
Related Articles
Advertisement
ಹಾಗೆಯೇ ಕಾವ್ಯ ಅನ್ನುವುದು ಪ್ರಶಸ್ತಿಗೆ ಸಂಬಂಧಿಸಿದ್ದಲ್ಲ, ಪೇಪರಿನಲ್ಲಿ ಬರುವ ಫೋಟೋಗೆ ಸಂಬಂಧಿಸಿದ್ದಲ್ಲ, ಇವೆಲ್ಲವನ್ನೂ ಮೀರುತ್ತಾ ಸಂಯುಕ್ತವಾದ ಮಾನವೀಯ ಪ್ರೀತಿಯಲ್ಲಿ ಒಂದಾಗುವಂಥದ್ದು ಕಾವ್ಯ ಎಂದು ವಿವರಿಸಿದರು.
ಚಿತ್ತಾಲರಿಗೆ ಕಾಡುವ ದಾದರ್ ಸ್ಟೇಷನ್: ಪ್ರತಿ ಬರಹನಿಗೂ ತನ್ನ ಬರಹವೇ ಅತ್ಯಂತ ಸತ್ಯ ಎನ್ನುವಾಗ ಕಾಯ್ಕಿಣಿ ಚಿತ್ತಾಲರನ್ನು ನೆನೆದರು. “ದಾದರ್ ಸ್ಟೇಷನ್ ಅಂದಾಗ ನನಗೆ ಬೇಜಾರಾಗುತ್ತದೆ, ಮನಸ್ಸು ತುಂಬಾ ಒಂದು ವಿಷಾದ ಉಕ್ಕುತ್ತದೆ’ ಅಂತ ಹೇಳಿದರು. ನಾನು ಬಹುಶಃ ಅವರ ಪರ್ಸ ಅಲ್ಲೆಲ್ಲೋ ಕಳೆದು ಹೋಗಿತ್ತೇನೋ, ಯಾವುದೋ ವಸ್ತುವೊಂದನ್ನು ಅವರು ಅಲ್ಲಿ ಕಳಕೊಂಡಿದ್ದರೇನೋ ಅಂತ ಅಂದುಕೊಂಡೆ.
ಅವರು ನಿಧಾನಕ್ಕೆ ಹೇಳಿದರು. ಸ್ಟೇಷನ್ನಿನಲ್ಲಿಯೇ ನನ್ನ ನಿರ್ಮಲಾ ಆತ್ಮಹತ್ಯೆ ಮಾಡಿಕೊಂಡಿದ್ದು. ನನ್ನ ಮೂರು ದಾರಿಗಳು ಕಾದಂಬರಿ ನಿರ್ಮಲಾ ಅಲ್ಲಿಯೇ ಪ್ರಾಣಬಿಟ್ಟಿದ್ದು-ಅಂದರು ಭಾವುಕರಾಗಿ.
ಕಲ್ಪಿತ ಕತೆಗೆ ಮಿಡಿದಿದ್ದ ರಾಜ… ಕುಮಾರ್: ಶಿವರಾಜ… ಕುಮಾರ್ ನಟನೆಯ- ಕನಸು-ಸಿನಿಮಾಕ್ಕೆ ಚಿತ್ರಕತೆ-ಸಂಭಾಷಣೆ ಬರೆದಿದ್ದಾರೆ. ಅದರ ರೂಪುರೇಷೆ ಸಿದ್ಧಪಡಿಸುವಾಗ ಆ ಕತೆಯಲ್ಲಿ ಒಬ್ಬಳು ಕುರುಡಿ. ಆಕೆಯನ್ನುಮದುವೆ ಆಗುವಂತೆ ನಾಯಕನನ್ನು ಒತ್ತಾಯಿಸಲಾಗುತ್ತೆ. ಅದಕ್ಕೆ ಆತ,- ನಾನು ಕುರುಡಿಯನ್ನು ಮದ್ವೆ ಆಗೋಲ್ಲ-ಎಂದು ದೆಹಲಿಗೆ ಓಡಿ ಹೋಗುತ್ತಾನೆ. ಈ ದೃಶ್ಯ ಕಲ್ಪಿಸಿಕೊಂಡು ನನಗೆ ಸ್ವಲ್ಪಕಸಿವಿಸಿ ಆಯಿತು. ಆಗ ರಾಜ… ಕುಮಾರ್, ಕೆಲಸ ಮಾಡಿ, ನಿಧಾನಕ್ಕೆ ಯೋಚಿಸಿ, ಆ ಮೇಲೆ ಕತೆ ಬದಲಾವಣೆ ಹೇಳಿ-ಎಂದರು. ಮರುದಿನ ಕುರುಡಿ ಮಾಡೋದು ಬೇಡ, ಅವಳನ್ನು ಸಣ್ಣ ಹುಡುಗಿ ಮಾಡೋಣ ಎಂದು ಬಿಡಿಸಿ ಹೇಳಿದೆ. ಆಗ, ರಾಜ…, ನನ್ನ ಕೈ ಹಿಡಿದು,-
ಒಳ್ಳೇ ಕೆಲಸ ಮಾಡಿದ್ರಿ, ತುಂಬಾ ಒಳ್ಳೇ ಕೆಲಸ ಮಾಡಿದ್ರಿ. ಕುರುಡಿ ಆಗಿದ್ದಿದ್ದರೆ, ಅವಳ ಜೀವನ ಬಹಳ ಕಷ್ಟ ಆಗುತ್ತಿತ್ತು-ಎಂದರು. ಅಂದರೆ, ಒಂದು ಕಲ್ಪಿತ ಕತೆಗೆ, ಕಲ್ಪಿತ ಪಾತ್ರಕ್ಕೆ ನಾವು ಮಿಡಿಯುವ ರೀತಿ ಇದೆಯಲ್ಲಾ ಅದೇ ಕಾವ್ಯ ಎಂದು ಹೇಳಿದರು. ಗೋಹತ್ಯೆ, ಕಪ್ಪು ಹಣ, ಜಿಎಸ್‌ಟಿ ಮೇಲೂ ಕವಿತೆ ಕಾಯ್ಕಿಣಿ ಕವಿತೆ ಗುಟ್ಟನ್ನು ಹೇಳಿದ್ದೇನೋ ಸರಿ, ಆದರೆ ಅವರ ಆಶಯಕ್ಕೆ ವಿರುದ್ಧವಾಗಿ ಗೋಷ್ಠಿಗಳಲ್ಲಿ ಕವಿತೆಗಳು ವಾಚನಗೊಂಡವು. ಮಾಂಸ ತಿಂದು ಮಂಜುನಾಥನ ಗುಡಿಗೆ ಹೋದ ಭಕ್ತನ ಎಳೆ ಇಟ್ಟುಕೊಂಡು ಪ್ರತಿಭಾ ನಂದಕುಮಾರ್ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಕವನ ವಾಚಿಸಿದರೆ, ಮಿಕ್ಕ ಬಹುತೇಕರ ಕವಿತೆಗಳಲ್ಲಿ ಜಿಎಸ್‌ಟಿ, ಹಳೇ ನೋಟು ನಿಷೇಧ, ಕಪ್ಪು ಹಣ-ಇವೇ ತುಂಬಿಕೊಂಡಿದ್ದವು. ಇದನ್ನು ಕೇಳಿ ಅಧ್ಯಕ್ಷತೆ ವಹಿಸಿದ್ದ ಕಾಯ್ಕಿಣಿ ಕೊಂಚ ಬೆವರಿದರೋ ಏನೋ,1 ನಿಮಿಷ ವೇದಿಕೆಯಲ್ಲಿಯೇ ಇರಲಿಲ್ಲ!’ ಕನ್ನಡ ಹೃದಯಕ್ಕೆ ಹತ್ತಿರವಾದ ಭಾಷೆ: ಚಂದ್ರಶೇಖರ್ ಸಿ.ದಿನೇಶ್
ಮೈಸೂರು: ವಿಜ್ಞಾನ ಮತ್ತು ತಂತ್ರ ಜ್ಞಾನದ ಹೊಸ ಸಾಧ್ಯತೆಗಳಿಗೆ ಕನ್ನಡವನ್ನೂ ತೆರೆದುಕೊಳ್ಳುವುದರಿಂದ ಭಾಷಾಭಿವೃದ್ಧಿ ಜತೆಗೆ ವಿಜಾnನ ಮತ್ತು ತಂತ್ರಜ್ಞಾನದ ಅರಿವು ಮೂಡಿಸಲು ಸಹಕಾರಿ ಆಗಲಿದೆ. ಇಂತಹ ಚರ್ಚೆಗೆ ಮಹಾರಾಜ ಕಾಲೇಜು ಶತಮಾನೋತ್ಸವ ಭವನದ ನಾಡೋಜ ಡಾ. ದೇ. ಜವರೇಗೌಡ ವೇದಿಕೆ ಕಾರಣವಾಯಿತು. ನಗರದಲ್ಲಿ ನಡೆಯುತ್ತಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆ ದಿನವಾದ ಭಾನುವಾರ ನಡೆದ ವಿಜ್ಞಾನ ತಂತ್ರಜಾnನ: ಕನ್ನಡದ ಬಳಕೆ ವಿಷಯದ ಕುರಿತ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದ ಸಂಪನ್ಮೂಲ ವ್ಯಕ್ತಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂಬ ಆಶಯ ವ್ಯಕ್ತವಾಯಿತು. ಕನ್ನಡದಿಂದ ವೈದ್ಯರ ಉಳಿವು: ವೈದ್ಯ ವಿಜ್ಞಾನದ ಕುರಿತು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ, ವೈದ್ಯರು ರೋಗಿಗಳೊಂ ದಿಗೆ ಕನ್ನಡದಲ್ಲಿ ಮಾತನಾಡಿದ್ದೇ ಆದಲ್ಲಿ ಆತನಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಅಲ್ಲದೆ ರೋಗಿಯೂ ಕನ್ನಡದಲ್ಲಿ ಮಾತನಾಡಿದರೆ ತನ್ನ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿದರೆ ಶೇ.80 ರೋಗಪತ್ತೆ
ಹಚ್ಚಲು ಸಾಧ್ಯವಾಗಲಿದೆ ಎಂದರು. ಕನ್ನಡ ಬಳಕೆ ಸಾಧ್ಯ: ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ವಿಜ್ಞಾನಿ ಡಾ. ಪಿ.ಎಸ್.ಶಂಕರ್, ಸಂಶೋಧನೆಗಳೂ ಸ್ಥಳೀಯ ಭಾಷೆಯಲ್ಲಿ ನಡೆದರೆ, ಹೆಚ್ಚಿನ ಅನುಕೂಲವಾಗಲಿದೆ. ಪರಿಸರ ವಿಜ್ಞಾನಿ ಅ.ನ.ಯಲ್ಲಪ್ಪರೆಡ್ಡಿ, ರಾಸಾಯನಿಕ ಬಳಕೆಯಿಂದ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ತಾಂತ್ರಿಕತೆಯಲ್ಲಿ ಅಭಿವೃದ್ಧಿ ಹೊಂದಿದ್ದರೂ, ಅನೇಕ ರೋಗಗಳು ನಮ್ಮನ್ನು ಆವರಿಸುತ್ತಿದೆ ಎಂದು ನುಡಿದರು. ಉಳಿದಂತೆ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ತಂತ್ರಜಾnನ ಪರಿಣಿತ ಉದಯಶಂಕರ್ ಪುರಾಣಿಕ್ ಪ್ರಸ್ತಾಪಿಸಿದರು. ಪ್ರಾಧ್ಯಾಪಕ ಡಾ.ಹೊಂಬಯ್ಯ ಹೊನ್ನಲಗೆರೆ ಪ್ರತಿಕ್ರಿಯೆ ನೀಡಿದರು. ಆರೋಗ್ಯ ಭಾಗ್ಯ ನಮ್ಮ ಕೈಯಲ್ಲಿದೆ ಬಡವರ ಪರ ಎಂದು ಹೇಳುವ ಸರ್ಕಾರಗಳು ಉಳ್ಳವರ ಕೈಗೊಂಬೆಯಾಗಿ, ದುಡ್ಡು ಮಾಡುವವರ ಪರ ನಿಂತಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಎಂಬುದು ಭಿಕ್ಷೆಯಾಗಿದ್ದು, ಭಿಕ್ಷೆ ನೀಡಲು ಅವರಿಗೆ ಸಂತೋಷವಾದರೆ, ಭಿಕ್ಷೆ ಪಡೆಯಲು ನಮಗೆ ಸಂತೋಷ ವಾಗಲಿದೆ. ಆದರೆ ಇದನ್ನು ಪಡೆಯಲೂ ಲಂಚ ನೀಡ ಬೇಕಾದ ಸ್ಥಿತಿ ಇದ್ದು, ಆರೋಗ್ಯ ಭಾಗ್ಯ ಎಂಬುದು ನಮ್ಮ ಕೈಯಲ್ಲಿದ್ದು, ಇದನ್ನು ಯಾವ ಸರ್ಕಾರವೂ ನೀಡಲು ಸಾಧ್ಯವಿಲ್ಲ ಎಂದು ಮನೋವಿಜ್ಞಾನಿ ಡಾ.ಸಿ.ಆರ್. ಚಂದ್ರಶೇಖರ್ ಹೇಳಿದರು.