Advertisement
ಭಾರತ ಮಾಲಾ ಯೋಜನೆಯಡಿ ಉತ್ತರ ಕರ್ನಾಟಕದ ರಸ್ತೆಗಳ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಲಾಗುವುದು. ಆ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಲು ಅವಕಾಶ ಕೋರಲಾಗುವುದು.
Related Articles
Advertisement
ನಗರದ ಹೊರವಲಯದಲ್ಲಿ ಕಾರವಾರ-ಹುಬ್ಬಳ್ಳಿ ರಸ್ತೆ, ಪುನಾ-ಬೆಂಗಳೂರು ರಸ್ತೆ ಮತ್ತು ಗದಗ ರಸ್ತೆ, ಹುಬ್ಬಳ್ಳಿ-ವಿಜಯಪುರ ರಸ್ತೆಯಿಂದ ಸುಳ್ಳ ಮಾರ್ಗವಾಗಿ ಧಾರವಾಡ-ನರೇಂದ್ರ ರಾಷ್ಟ್ರೀಯ ಹೆದ್ದಾರಿವರೆಗೆ ಬೈಪಾಸ್ ನಿರ್ಮಾಣ ಬಾಕಿಯಿದೆ.
ತಡಸ, ಕಲಘಟಗಿ, ಧಾರವಾಡ, ಹೆಬಸೂರ, ನವಲಗುಂದ, ಅಣ್ಣಿಗೇರಿ ವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯೆಂದು ಘೋಷಣೆಯಾಗಿದೆ. ಆದರೆ ಈವರೆಗೆ ಅದರ ಡಿಪಿಆರ್ ಸಿದ್ಧಪಡಿಸುವ ಕಾರ್ಯ ಪೂರ್ಣಗೊಂಡಿಲ್ಲ. ನವಲಗುಂದ, ನರಗುಂದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಿ ಎರಡು ವರ್ಷಗಳು ಕಳೆದರೂ ಇದುವರೆಗೆ ಕಾಮಗಾರಿ ಆರಂಭಗೊಂಡಿಲ್ಲವೆಂದರು.
ಧಾರವಾಡ ಜಿಲ್ಲೆಗೆ 429 ಕೋಟಿ ರೂ. ಸಿಆರ್ ಎಫ್ ಅನುದಾನ ಮಂಜೂರಾಗಿದ್ದರೂ ಎಲ್ಲ ತಾಲೂಕುಗಳಿಗೆ ಸಮನಾಗಿ ಹಂಚಿಕೆ ಮಾಡಿಲ್ಲ. ನವಲಗುಂದ ತಾಲೂಕಿಗೆ ಕೇವಲ 20 ಕೋಟಿ ರೂ. ನೀಡಲಾಗಿದೆ. ಎಲ್ಲ ತಾಲೂಕುಗಳಿಗೆ ಕನಿಷ್ಠ 50 ಕೋಟಿ ರೂ. ಕೊಡಬೇಕು ಎಂದು ಆಗ್ರಹಿಸಿದರು. ಬಿ.ಬಿ. ಗಂಗಾಧರಮಠ, ಶಿವಣ್ಣ ಹುಬ್ಬಳ್ಳಿ, ವಿಕಾಸ ಸೊಪ್ಪಿನ ಇತರರಿದ್ದರು.