Advertisement

ಆಳ್ವಾಸ್‌ನಲ್ಲಿ ಎನ್‌ಸಿಸಿ ರಾಷ್ಟ್ರೀಯ ಭಾವೈಕ್ಯ ಶಿಬಿರ ಪ್ರಾರಂಭ

11:44 AM Dec 15, 2017 | |

ಮೂಡಬಿದಿರೆ: ಆಳ್ವಾಸ್‌ ಪದವಿ ಕಾಲೇಜಿನ ಆಶ್ರಯದಲ್ಲಿ ಸಂಸ್ಥೆಯ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಡಿ.23ರ ವರೆಗೆ ನಡೆಯಲಿರುವ ಎನ್‌ಸಿಸಿ ರಾಷ್ಟ್ರೀಯ ಮಟ್ಟದ ಭಾವೈಕ್ಯ ಶಿಬಿರಕ್ಕೆ ಬುಧವಾರ ಚಾಲನೆ ನೀಡಲಾಯಿತು.

Advertisement

ಶಿಬಿರದ ಮುಖ್ಯ ಕಮಾಂಡರ್‌ ಕರ್ನಲ್‌ ಅನಿಲ್‌ ನೌಟಿಯಲ್‌ ಅವರು ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿ, ದೇಶದ ವಿವಿಧ ರಾಜ್ಯಗಳ ಸಂಸ್ಕೃತಿಯ ಅನಾವರಣ ಈ ಶಿಬಿರದ ಮೂಲಕ ಆಗುತ್ತಿದೆ. ಇಲ್ಲಿ ಪಡೆದ ಜ್ಞಾನ, ಅನುಭವಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಮುಂದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂದೆ ಎನ್‌ಸಿಸಿ ಕೆಡೆಟ್‌ಗಳಾಗಿದ್ದವರು ಇಂದು ಅಪ್ರತಿಮ ಸಾಧಕರಾಗಿದ್ದಾರೆ. ಅವರನ್ನು ಮಾದರಿಯನ್ನಾಗಿ ಸ್ವೀಕರಿಸಿ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್‌ ಆಳ್ವ ಮಾತನಾಡಿ, ಶಿಬಿರದಲ್ಲಿ ವಿವಿಧ ರಾಜ್ಯಗಳ ಶ್ರೇಷ್ಠತೆಯು ಪ್ರತಿ ಬಿಂಬಿಸಲಿ. ರಾಷ್ಟ್ರೀಯ ಏಕತೆ ಈ ಶಿಬಿರದ ಮೂಲಕ ಸಾಕಾರಗೊಳ್ಳಲಿ ಎಂದರು.

19ನೇ ಕರ್ನಾಟಕ ಬೆಟಾಲಿಯನ್‌ ಮಡಿಕೇರಿಯ ಕಮಾಂಡಿಂಗ್‌ ಆಫೀಸರ್‌ ಕರ್ನಲ್‌ ವಿ.ಎಂ. ನಾಯಕ್‌, 19ನೇ ಕರ್ನಾಟಕ ಬೆಟಾಲಿಯನ್‌ ಮಡಿಕೇರಿಯ ಆಡಳಿತಾಧಿಕಾರಿ ಸಂಜಯ್‌ ಅಮ್ಟೆ, ಆಳ್ವಾಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್‌, ಶಿಬಿರದ ಸಂಯೋಜಕ ಡಾ| ರಾಜೇಶ್‌ ಉಪಸ್ಥಿತರಿದ್ದರು. ಮೊದಲ ದಿನ ವಿವಿಧ ಸ್ಪರ್ಧೆಗಳನ್ನು ಕೆಡೆಟ್‌ಗಳಿಗೆ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next