ಕುಮಟಾ: ಅನಂತಕುಮಾರ ಹೆಗಡೆ ದೇಶಾಭಿಮಾನದ ಹೆಸರಿನಲ್ಲಿ ಅಮಾಯಕ ಯುವಕ ರನ್ನು ಬಲಿತೆಗೆದುಕೊಂಡು ತಮ್ಮ ರಾಜಕೀಯ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾರೆ. ಇಂಥ ಕೀಳು ಅಭಿರುಚಿಯ ಸಂಸದರನ್ನು ಬದಲಾಯಿಸುವ ಅಗತ್ಯತೆ ಜಿಲ್ಲೆಯ ಜನತೆಗಿದೆ. ಕೋಮುಗಲಭೆ ಸೃಷ್ಟಿಸುವಂಥ ಭಾಷಣ ಮಾಡುವವರಿಗೆ ಮತ ಹಾಕುವ ಬದಲು ಅಭಿವೃದ್ಧಿ ಕೆಲಸ ಮಾಡುವವರಿಗೆ ಮತ ಹಾಕಿ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಮಣಕಿ ಮೈದಾನದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಾನು ಈ ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಉತ್ತರಕನ್ನಡ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಕೈಗೊಳ್ಳುವ ಬಗ್ಗೆ ಪ್ರಸ್ತಾವ ಮಾಡಿದ್ದೆ. ಆದರೆ ಚುನಾವಣೆ ಅನಂತರ ಮೈತ್ರಿ ಸರಕಾರ ಆಡಳಿತಕ್ಕೆ ಬಂತು.
ಅದೇ ಸಂದರ್ಭದಲ್ಲಿ ಬಿಜೆಪಿಯವರು ಮುಖ್ಯಮಂತ್ರಿ ಆಸನಕ್ಕಾಗಿ ಅಪಪ್ರಚಾರದಂಥ ಹಲವು ಸಮಸ್ಯೆ ತಂದೊಡ್ಡಿದರು. ಆದರೆ ರೈತರ ಮತ್ತು ರಾಜ್ಯದ ಹಲವು ಯುವಕರ ಸಮಸ್ಯೆಗೆ ಸ್ಪಂದಿಸದೇ ಸುಮ್ಮನೆ ಕುಳಿತಿಲ್ಲ. ನನ್ನ ಅಧಿಕಾರಾವ ಧಿಯಲ್ಲಿ ರಾಜ್ಯಾದ್ಯಂತ 16 ಲಕ್ಷ ರೈತ ಕುಟುಂಬದ ಸಾಲಮನ್ನಾ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆಗೆ ಸಂಬಂ ಧಿಸಿದಂತೆ 46,000 ಕುಟುಂಬದ ಸಾಲಮನ್ನಾ ಮಾಡಲಾಗಿದೆ ಎಂದರು.
ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಮಾತನಾಡಿ, ಯುವಕರ ಕೈಗೆ ಕತ್ತಿ ಕೊಟ್ಟು ಅವರ ಜೀವನವನ್ನು ಹಾಳು ಮಾಡುವುದರ ಬದಲಿಗೆ ಅವರು ಸ್ವಂತ ನೆಲದಲ್ಲಿ ನಿಂತು ಉದ್ಯೋಗ ಮಾಡುವಂತಾಗಬೇಕು ಎಂದರು.
ಹೆಲಿಕಾಪ್ಟರ್ ತಪಾಸಣೆ
ಕುಮಾರಸ್ವಾಮಿ ಬಂದಿಳಿದ ಹೆಲಿಕಾಪ್ಟರನ್ನು ಚುನಾವಣಾಧಿ ಕಾರಿಗಳು ತಪಾಸಣೆ ಮಾಡಿದರು. ಅದರಲ್ಲಿ 6ಕ್ಕೂ ಹೆಚ್ಚು ಬ್ಯಾಗ್‌ಗಳು ಇದ್ದವು. ಅವುಗಳನ್ನು ಕೂಲಂಕಷ ತಪಾಸಣೆ ನಡೆಸಲಾಯಿತು.