Advertisement
ಪುಲ್ವಾಮಾ ದಾಳಿ ಬಳಿಕದ ಬೆಳವಣಿಗೆಗಳ ಅನಂತರ ಪಾಕಿಸ್ಥಾನವು ನಿರಂತರವಾಗಿ ಶೆಲ್ ದಾಳಿ ನಡೆಸುತ್ತಾ ಬಂದಿತ್ತು. ಸೋಮವಾರ ಪಾಕ್ ದಾಳಿಯಿಂದ ಬಿಎಸ್‌ಎಫ್ ಇನ್‌ಸ್ಪೆಕ್ಟರ್ ಮತ್ತು 5 ವರ್ಷದ ಬಾಲಕಿ ಮೃತ ಪಟ್ಟಿದ್ದರು. ಮಂಗಳವಾರವೂ ರಜೌರಿ ಹಾಗೂ ಪೂಂಛ… ವ್ಯಾಪ್ತಿ ಪ್ರದೇಶಗಳ ಮೇಲೆ ಪಾಕ್ ಶೆಲ್ ದಾಳಿ ಮುಂದುವರಿಸಿತ್ತು. ಇದಕ್ಕೆ ಪ್ರತಿದಾಳಿ ನಡೆಸಿದ ಬಿಎಸ್‌ಎಫ್, ಪಿಒಕೆಯಲ್ಲಿನ ರಾಖ್‌ಚಿಕ್ರಿ ಮತ್ತು ರಾವಲ್‌ಕೋಟ್ ಮುಂಚೂಣಿ ನೆಲೆಯಲ್ಲಿರುವ 7 ಸೇನಾ ಶಿಬಿರಗಳನ್ನು ಸಂಪೂರ್ಣ ಧ್ವಂಸಗೊಳಿಸಿತು.
ಭಾರತ ನಡೆಸಿದ ದಾಳಿಯಿಂದ ನಮ್ಮ ಮೂವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ಥಾನ ಸೇನೆ ಹೇಳಿ ಕೊಂಡಿದೆ. ಜತೆಗೆ ಭಾರತವೇ ಅಪ್ರಚೋದಿತ ದಾಳಿ ನಡೆ ಸಿದೆ ಎಂದು ಹಳೇ ರಾಗ ಹಾಡಿದೆ. ಇದೇ ವೇಳೆ ಪಾಕ್‌ನ ಗಡಿಯಲ್ಲಿನ ಗ್ರಾಮಸ್ಥರನ್ನು ಸ್ಥಳಾಂತರಿಸುವ ಕಾರ್ಯ ವನ್ನೂ ಆರಂಭಿಸಿದೆ. ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಶಾಲೆಗಳಿಗೆ ರಜೆ; ವ್ಯಾಪಾರ ನಿರ್ಬಂಧ
ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೂಂಛ… ಮತ್ತು ರಜೌರಿ ಜಿಲ್ಲೆಯ ಎಲ್ಲ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಇನ್ನೊಂದೆಡೆ, ಪೂಂಛ…ನ ಚಕನ್-ದಾ- ಬಾಗ್ ಮೂಲಕ ಎಲ್‌ಒಸಿ ನಡುವೆ ನಡೆ ಯುತ್ತಿದ್ದ ವ್ಯಾಪಾರ ವಹಿವಾಟುಗಳಿಗೆ ಮಂಗಳವಾರ ನಿರ್ಬಂಧ ಹೇರಲಾಗಿತ್ತು.
Related Articles
ಪಾಕಿಸ್ಥಾನವು ನಿರಂತರವಾಗಿ ಕದನ ವಿರಾಮ ಉಲ್ಲಂ ಸುತ್ತಿದ್ದು, ಅತ್ತ ಕಡೆಯಿಂದ ಬರುವ ಯಾವುದೇ ಸವಾಲನ್ನೂ ಎದುರಿಸಲು ನಮ್ಮ ಸೇನೆ ಸಿದ್ಧವಾಗಿದೆ ಎಂದು ಬಿಎಸ್‌ಎಫ್ ಡಿಜಿ ರಜನಿಕಾಂತ್ ಮಿಶ್ರಾ ಮಂಗಳವಾರ ಹೇಳಿದರು. ಪಾಕ್ ದಾಳಿಗೆ ನಮ್ಮ ಯೋಧರು ತಕ್ಕ ಪ್ರತ್ಯು ತ್ತರ ನೀಡುತ್ತಿದ್ದಾರೆ. ಪಾಕಿಸ್ಥಾನವು ನಮ್ಮ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ದುರದೃಷ್ಟಕರ ಎಂದೂ ಹೇಳಿದರು.
Advertisement