Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರ ಪಿಎಂ ಕಿಸಾನ್‌ನಡಿ ರೈತರಿಗೆ ಕೊಡುತ್ತಿದ್ದ 4 ಸಾವಿರ ರೂ. ಸಹಾಯಧನ ಸ್ಥಗಿತ ಮಾಡಿದೆ. ಗ್ಯಾರಂಟಿ ಯೋಜನೆಗಳ ಭರದಲ್ಲಿ ಎಸ್‌ಸಿ-ಎಸ್‌ಟಿ ವರ್ಗಕ್ಕೆ ಮೀಸಲಿದ್ದ ಹಣವನ್ನು ಯೋಜನೆಗೆ ವರ್ಗಾಯಿಸಿಕೊಂಡಿದೆ. ರೈತರಿಗೆ ನೆರವಾಗಬೇಕಿದ್ದ ಗೋ ಶಾಲೆಗಳನ್ನು ಮುಚ್ಚಿದೆ. ರಾಜ್ಯದಲ್ಲಿ ಬರದ ಸ್ಥಿತಿ ಎದುರಾಗಿದೆ. ಆದರೂ ಬರ ಘೋಷಿಸದೆ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುತ್ತಿದೆ. ಎನ್‌ಡಿಆರ್‌ಎಫ್ ನಿಯಮ ತಿದ್ದುಪಡಿಗೆ ಕೇವಲ ಕರ್ನಾಟಕ ಸರಕಾರದ ಒಂದೇ ಪತ್ರಕ್ಕೆ ತಿದ್ದಲು ಸಾಧ್ಯವಿಲ್ಲ. ಎಲ್ಲ ರಾಜ್ಯಗಳಿಂದ ಅಭಿಪ್ರಾಯ, ಸಲಹೆ ಪಡೆಯಬೇಕಾಗುತ್ತದೆ. ಚರ್ಚೆಗಳು ನಡೆಯಬೇಕಾಗುತ್ತದೆ. ಸುಮ್ಮನೆ ಪತ್ರ ಬರೆದಾಕ್ಷಣ ಎಲ್ಲವೂ ಮಾಡಲಾಗದು. ರಾಜ್ಯ ಸರಕಾರ ಇಲ್ಲಿನ ಸ್ಥಿತಿ ನೋಡಿ ಬರ ಪರಿಹಾರ ಕೊಡಲಿ ಎಂದರು.
ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಸಿಎಂಗೆ ಪತ್ರ ಬರೆದು ಜೆಸ್ಕಾಂ ಅ ಧಿಕಾರಿಗಳು ಸ್ಪಂದಿಸದಿರುವ ವಿಚಾರ ಗಮನಕ್ಕೆ ತಂದಿರುವುದು ರಾಜ್ಯ ಸರಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತದೆ. ಯಲಬುರ್ಗಾ ಒಂದರಲ್ಲೇ 200 ಟಿಸಿ ಸಮಸ್ಯೆಯಿದೆ. ರಾಜ್ಯಾ ದ್ಯಂತ ಮಳೆ ಕೊರತೆಯಿಂದ ಇಂತಹ ಸಮಸ್ಯೆ ಗಂಭೀರವಾಗಿದೆ. ಇವರಿಗೆ ನೂರು ದಿನದ ಸಂಭ್ರಮವಿಲ್ಲ. ರಾಯರಡ್ಡಿ ಅವರೇನೂ ತಮ್ಮ ಮನೆಗೆ ಟಿಸಿ ಕೇಳುತ್ತಿಲ್ಲ. ರೈತರಿಗಾಗಿ ಕೇಳುತ್ತಿದ್ದಾರೆ ಎಂದರು. ಯತ್ನಾಳ್, ರೇಣು ಹೇಳಿಕೆಗೆ ಪ್ರತಿಕ್ರಿಯಿಸಲಾರೆ
ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರೇಣುಕಾಚಾರ್ಯ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ವೈಯಕ್ತಿಕವಾಗಿ ಹೇಳಿರಬಹುದು. ಕೆಲವರು ಎಲ್ಲವನ್ನು ಅರ್ಥ ಮಾಡಿಕೊಂಡು ಮಾತನಾಡಬೇಕಾಗುತ್ತದೆ. ತಮಗೆ ತಿಳಿದಂತೆ ಮಾತನಾಡುವುದು ಅಷ್ಟು ಸರಿಯಲ್ಲ. ಈ ಬಗ್ಗೆ ಹೆಚ್ಚೇನು ಮಾತನಾಡಲಾಗುವುದಿಲ್ಲ ಎಂದು ಹೇಳಿದರು.