Advertisement
ಅತ್ಯಂತ ಮೂಲಭೂತವಾದ – ಐಟಿಆರ್ -1 ಅಥವಾ ಸಹಜ್ ತೆರಿಗೆ ಪಾವತಿಯು ತೆರಿಗದಾರರ ಸಂಬಳ ಪಡೆಯುವ ವರ್ಗಕ್ಕೆ ಈ ವಿಷಯವು ಸಂಬಂಧಿಸಿದ್ದು. ತೆರಿಗೆದಾರರ ಈ ಬಾರಿಯ ನಮೂನೆಯು ಪ್ರತ್ಯೇಕವಾಗಿ ಆಯಾಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪಕರ ವಿವರಗಳನ್ನು ಕೇಳುತ್ತದೆ ಮತ್ತು ಭತ್ಯೆಗಳಿಗೆ ವಿನಾಯಿತಿ ನೀಡುವುದಿಲ್ಲ.
- ಪಾನ್ ಮತ್ತು ಆಧಾರ್ ಕಾರ್ಡ್ ನಂಬರ್‌ಗಳು ಮತ್ತು ಇತರ ಮೂಲಭೂತ ಮಾಹಿತಿಗಳು.
- ಸಂಬಳ ಅಥವಾ ಭತ್ಯೆ(ಪೆನ್ಶನ್) ಪಡೆಯುವ ಉದ್ಯೋಗದಾತರಿಂದ ಫಾರ್ಮ್ 16 ಅನ್ನು ಹೊಂದಿರಬೇಕು.
- ಮನೆ ಅಥವಾ ಕಟ್ಟಡಗಳಿಂದ ಬಂದ ಬಾಡಿಗೆಯ ದಾಖಲೆ, ಇದರ ಜೊತೆ ವಿನಾಯಿತಿ ಪಡೆಯಲು ಮನೆಗೆ ಮಾಡಿದ ಸಾಲದ ಪತ್ರಗಳ ಸಾಕ್ಷಿ ಒದಗಿಸಬೇಕು.
- ಇತರ ಮೂಲಗಳಿಂದ ಬರುವ ಆದಾಯಕ್ಕೆ ದಾಖಲೆಗಳು – ಎಫ್‌ಡಿ ಮತ್ತು ಉಳಿತಾಯ ಖಾತೆಗಳ ವಿವರ ಒದಗಿಸಬೇಕು.
Related Articles
- ನಿಮ್ಮ ಮಕ್ಕಳ ಶಾಲಾ ಬೋಧನಾ ಶುಲ್ಕ
- ಜೀವ ವಿಮಾ ಪ್ರೀಮಿಯಂನ ದಾಖಲೆ ಪತ್ರಗಳು
- ರಿಜಿಸ್ಟ್ರೇಷನ್ ಶುಲ್ಕ ಮತ್ತು ನೋಂದಣಿ ಶುಲ್ಕಗಳ ವಿವರಗಳು
- ನಿಮ್ಮ ಗೃಹ ಸಾಲದ ಮರುಪಾವತಿ ವಿವರ
- ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್/ಮ್ಯೂಚುವಲ್ ಫಂಡ್ ಹೂಡಿಕೆಗಳ ವಿವರ
- 80G ಗೆ ಅರ್ಹವಾದ ದೇಣಿಗೆಗಳ ವಿವರಗಳೊಂದಿಗೆ ಅವುಗಳ ಸ್ವೀಕೃತಿ ರಶೀದಿಗಳನ್ನು ಒದಗಿಸಬೇಕು.
Advertisement
80/80 ಸಿ, 80 ಸಿಸಿ ಮತ್ತು 80 ಸಿಸಿಡಿ (1) ಸಮ್ಮತಿಸುವ ಒಟ್ಟು ಮೊತ್ತದ ಕಡಿತವು ಗರಿಷ್ಠ ಮಿತಿ 1.5 ಲಕ್ಷಕ್ಕೆ ಸೀಮಿತವಾಗಿರುವಂತೆ ಇರಬೇಕು.
ಇದನ್ನೂ ಓದಿ:- ನಕ್ಸಲ್ ನಂಟು : ವಿಠಲ ಮಲೆಕುಡಿಯ,ತಂದೆ ನಿರ್ದೋಷಿ ಎಂದ ಕೋರ್ಟ್
- ಅಧ್ಯಾಯ VIA ಭಾಗ ಬಿ ಅಡಿಯಲ್ಲಿ ಯಾವುದೇ ಕಡಿತವನ್ನು ಪಡೆಯುವ ಉದ್ದೇಶಕ್ಕಾಗಿ ನೀವು ಏಪ್ರಿಲ್ 1, 2020 ರಿಂದ ಜುಲೈ 31, 3030 ರ ವರೆಗಿನ ಅವಧಿಯನ್ನು ಹೊಂದಿದ ಯಾವುದೇ ಹೂಡಿಕೆ/ಠೇವಣಿ/ಪಾವತಿಗಳನ್ನು ಮಾಡಿದ್ದರೆ ಅವುಗಳ ವಿವರಗಳನ್ನು ಶೆಡ್ಯುಲ್ DI ಅನ್ನು ಭರ್ತಿ ಮಾಡುವಲ್ಲಿ ವಿವರಗಳನ್ನು ಒದಗಿಸಿ.
- ನಿಮ್ಮ ನಮೂನೆ 26AS ನಲ್ಲಿ ಲಭ್ಯವಿರುವಂತೆ ತೆರಿಗೆ ಪಾವತಿ ವಿವರಗಳನ್ನು ಪರಿಶೀಲಿಸಿ. ಅವುಗಳು ನಿಮ್ಮ ಆದಾಯ ಮತ್ತು ಈ ಹಿಂದೆ ಪಾವತಿಸಿದ ತೆರಿಗೆಯ ವಿವರಗಳ ಆಧಾರದಲ್ಲಿ ವೈಯಕ್ತಿಕ ಹಣಕಾಸಿನ ವಿವರಗಳಿರುತ್ತವೆ.
- ಟಿಡಿಎಸ್ ವಿವರಗಳು:- ನಿಮ್ಮ ನಮೂನೆ 16 (ಸಂಬಳಕ್ಕಾಗಿ), 16A (ಸಂಬಳವಲ್ಲದ) ಮತ್ತು 16C (ಬಾಡಿಗೆ) ಈ ವಿವರಗಳು ಮತ್ತು ಕ್ರೆಡಿಟ್ ಮೊತ್ತವನ್ನು ಪರಿಶೀಲಿಸಿ
- ಬಾಡಿಗೆದಾರರ ಪ್ಯಾನ್/ಆಧಾರ್
- ಇತರೆ ಮಾಹಿತಿಗಳು:- ಕೃಷಿ ಆದಾಯ, ಲಾಭಾಂಶದಂತಹ ವಿನಾಯಿತಿ ಹೊಂದಿದ ಆದಾಯ ವಿವರಗಳನ್ನು ಗಮನಿಸಿ. ಭಾರತದಲ್ಲಿ ಇರುವ ಎಲ್ಲಾ ಸಕ್ರಿಯ ಬ್ಯಾಂಕ್ ಖಾತೆಗಳ ವಿವರಗಳನ್ನು ಒದಗಿಸಿ. (ಮರುಪಾವತಿ ಕ್ರೆಡಿಟ್‌ಗಾಗಿ ಕನಿಷ್ಠ ಒಂದು ಖಾತೆಯನ್ನು ಆಯ್ಕೆ ಮಾಡಬೇಕು)