Advertisement
ಇದೇ ವೇಳೆ ಮೂರು ವರ್ಷಗಳ ಹಿಂದೆಯೇ ವಾಲ್ಮೀಕಿ ಭವನ ಬಳಕೆಗೆ ಸಿದ್ಧವಾಗಿದ್ದರೂ ಉದ್ಘಾಟನೆ ಕಂಡಿಲ್ಲ, ಈಗ ಲೋಕೋಪಯೋಗಿ ಇಲಾಖೆ ಎಇಇ ಕಚೇರಿ ಸಹ ಕಾರ್ಯನಿರ್ವಹಣೆಗೆ ಸಜ್ಜಾಗಿದ್ದರೂ ಸ್ಥಳೀಯ ಶಾಸಕರು ಮತ್ತು ಸಂಸದರ ನಡುವೆ ಹೊಂದಾಣಿಕೆ ಇಲ್ಲದೆ, ಉದ್ಘಾಟನೆಗೆ ಸಮಯ ನೀಡದ ಕಾರಣ, ಕಚೇರಿ ಪಾಳು ಬಿದ್ದಿದೆ. ಪ್ರಸ್ತುತ ಈ ಕಚೇರಿಯು ಎಇಇಗೆ ನೀಡಿರುವ ಮನೆಯಲ್ಲಿ ನಡೆಯುತ್ತಿರುವುದು ವಿಪರ್ಯಾಸ.
Related Articles
Advertisement
ಉದ್ಘಾಟನೆ ಆಗಿಲ್ಲ: ಲೋಕೋಪಯೋಗಿ ಇಲಾಖೆ ಹಳೇ ಕಟ್ಟಡ ಕೆಡವಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಹಲವು ತಿಂಗಳು ಕಳೆದಿದೆ. ಶಾಸಕರು ಉದ್ಘಾಟನೆಗೆ ಸಿದ್ಧವಾಗಿದ್ದಾರೆ. ಆದರೆ, ಶಿಷ್ಟಾಚಾರದ ಪ್ರಕಾರ ಸಂಸದರನ್ನೂ ಕಟ್ಟಡ ಉದ್ಘಾಟನೆಗೆ ಆಹ್ವಾನಿಸಬೇಕು. ಅದರಂತೆ ಅಧಿಕಾರಿಗಳು ಸಂಪರ್ಕಿಸಿದ್ದು, ಅವರು ದಿನಾಂಕ ನಿಗದಿಪಡಿಸುವಲ್ಲಿ ವಿಳಂಬ ಮಾಡಿದ್ದರಿಂದ ಉದ್ಘಾಟನೆ ಮುಂದಕ್ಕೆ ಹೋಗುತ್ತಿದೆ ಎನ್ನಲಾಗಿದೆ.
ಸಂಸದರು ಮಾಡುವ ಅಭಿವೃದ್ಧಿ ಕಾರ್ಯಕ್ಕೆ ಶಾಸಕರ ಬೆಂಬಲಿಗರು, ಶಾಸಕರ ಕಾಮಗಾರಿಗಳಿಗೆ ಸಂಸದರ ಬೆಂಬಲಿಗರು ಅಡ್ಡಿಪಡಿಸಿದ್ದರಿಂದ ಪರಿಣಾಮ ಲೋಕೋಪಯೋಗಿ ಕಟ್ಟಡ ಹಾಗೂ ವಾಲ್ಮೀಕಿ ಭವನ ಉದ್ಘಾಟನೆಗೆ ಸಿದ್ಧವಾಗಿದ್ದರೂ ಸಮಯ ನಿಗದಿ ಮಾಡಲು ಸಂಸದರು ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿದ್ದಾರೆಂಬ ಆರೋಪ ಶಾಸಕರ ಬೆಂಬಲಿಗರದ್ದಾಗಿದೆ. ಈಗ ಎಂಎಲ್ಸಿ ಚುನಾವಣೆ ಘೋಷಣೆಯಿಂದ ಉದ್ಘಾಟನೆ ಮತ್ತಷ್ಟು ವಿಳಂಬ ವಾಗುವುದು ಗ್ಯಾರಂಟಿಯಾಗಿದೆ. ಎಇಇ ಕಚೇರಿ ಉದ್ಘಾಟನೆ ವಿಳಂಬದಿಂದ ಕಚೇರಿ ಸುತ್ತ ಕಸದ ರಾಶಿ ಹಾಕಲಾಗುತ್ತಿದೆ. ಅನೈತಿಕ ಚಟುವಟಿಕೆಗಳ ತಾಣ ವಾಗುವ ಮೊದಲು ಕಟ್ಟಡ ಉದ್ಘಾಟನೆ ಮಾಡಬೇಕು ಎಂದು ತಾಲೂಕಿನ ಜನರು ಒತ್ತಾಯಿಸಿದ್ದಾರೆ.
“ಲೋಕೋಪ ಯೋಗಿ ಇಲಾಖೆ ಎಇಇ ಆಡಳಿತ ಕಚೇರಿ ನೂತನ ಕಟ್ಟಡಕ್ಕೆ ಫರ್ನಿಚರ್ ಕೊರತೆ ಇದೆ. ಕೊರೊ ನಾ ಹಾವಳಿಯಿಂದ 2 ವರ್ಷದಿಂದ ಅನು ದಾನ ಬಿಡುಗಡೆ ಮಾಡುತ್ತಿಲ್ಲ. ಸದ್ಯಕ್ಕೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಉದ್ಘಾ ಟನೆ ಮಾಡಲು ಕ್ರಮಕೈಗೊಳ್ಳಲಾಗುವುದು.” – ಚಂದ್ರಶೇಖರ್, ಕಾರ್ಯಪಾಲಕ ಎಂಜಿನಿಯರ್, ಪಿಡಬ್ಲ್ಯೂಡಿ ಕೋಲಾರ
– ಎಂ.ಸಿ.ಮಂಜುನಾಥ್