Advertisement

ಪಡುಬಿದ್ರಿ ಸಹಿತ ದೇಶದ ಎಂಟು ಬ್ಲೂ ಫ್ಲ್ಯಾಗ್‌ ಬೀಚ್‌ ಉದ್ಘಾಟನೆ

11:35 PM Dec 28, 2020 | mahesh |

ಹೊಸದಿಲ್ಲಿ: ಬ್ಲೂ ಫ್ಲ್ಯಾಗ್‌ ಗೌರವಕ್ಕೆ ಪಾತ್ರವಾಗಿರುವ ಉಡುಪಿ ಜಿಲ್ಲೆಯ ಪಡುಬಿದ್ರಿ ಮತ್ತು ಉತ್ತರ ಕನ್ನಡದ ಕಾಸರಕೋಡು ಸೇರಿದಂತೆ ದೇಶದ ಒಟ್ಟು 8 ಬೀಚ್‌ಗಳನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಸೋಮವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶಕ್ಕೆ ಇದು ಹೆಮ್ಮೆಯ ವಿಚಾರವಾಗಿದೆ. ಅತ್ಯಂತ ಶುಚಿಯಾಗಿರುವ ಈ ಸಮುದ್ರ ಕಿನಾರೆ ಪ್ರದೇಶಗಳು ಸುಸ್ಥಿತಿಯಲ್ಲಿವೆ ಎಂಬುದರ ದ್ಯೋತಕವಾಗಿದೆ. ಬ್ಲೂ ಫ್ಲ್ಯಾಗ್‌ ಗೌರವ ದೇಶ ಕೈಗೆತ್ತಿಕೊಂಡಿರುವ ಸಹ್ಯ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಅಂತಾರಾಷ್ಟ್ರೀಯ ಮನ್ನಣೆ ಎಂದು ಬಣ್ಣಿಸಿದರು. ಇಂಥ ಗೌರವ ಸಿಗುವಂತಾಗಲು ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಜಾಬ್ಡೇಕರ್‌ ಶ್ಲಾಘಿಸಿದರು.

ಗುಜರಾತ್‌ನ ಶಿವಾಜಿಪುರ, ದಿಯುನ ಘೋಗ್ಲಾ, ಕೇರಳದ ಕಪ್ಪಡ್‌, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್‌, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹದ ರಾಧಾನಗರ ಈ ಗೌರವಕ್ಕೆ ಪಾತ್ರವಾಗಿರುವ ಇತರ ಬೀಚ್‌ಗಳು.

ಅತ್ಯಂತ ಕಠಿನ ನಿಯಮಗಳನ್ನು ಪೂರೈಸಿ ಒಂದೇ ಹಂತದಲ್ಲಿ ಎಂಟು ಬೀಚ್‌ಗಳು ಬ್ಲೂ ಫ್ಲ್ಯಾಗ್‌ ಗೌರವ ಪಡೆದಿರುವುದು ವಿಶೇಷ. ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಇಂಥ ಸಾಧನೆ ಮಾಡಲಾಗಿದೆ. ಡೆನ್ಮಾರ್ಕ್‌ನ ಫೌಂಡೇಷನ್‌ ಫಾರ್‌ ಎನ್ವಿರಾನ್‌ಮೆಂಟಲ್‌ ಎಜುಕೇಶನ್‌ ಪರಿಸರ ಸಹ್ಯ ಸಮುದ್ರ ಕಿನಾರೆಗಳನ್ನು ಹೊಂದುವುದಕ್ಕೆ ಪ್ರೋತ್ಸಾಹ ನೀಡಲು ಇಂಥ ಗೌರವ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next